ಬೆಂಗಳೂರು: ದೇಶದ ಎರಡನೇ ಐಟಿ ದೈತ್ಯ ಇನ್ಫೋಸಿಸ್‌ನ ನಾಲ್ಕನೇ ಹಣಕಾಸು ತ್ರೈಮಾಸಿಕ ವರದಿ ಬಿಡುಗಡೆಗೊಂಡಿದೆ. ಕಳೆದ 23 ವರ್ಷಗಳಲ್ಲಿ ಮೊದಲ ಬಾರಿಗೆ 2023-24 ರ ಹಣಕಾಸು ವರ್ಷದಲ್ಲಿ ಉದ್ಯೋಗಿಗಳ ಸಂಖ್ಯೆಯಲ್ಲಿ ಭಾರಿ ಕುಸಿತ ಕಂಡು ಬಂದಿದೆ. ಸುಮಾರು 25,994 ಉದ್ಯೋಗಿಗಳು ಕಡಿಮೆ ಆಗಿದ್ದಾರೆ. ಹಿಂದಿನ ಆರ್ಥಿಕ ವರ್ಷಕ್ಕಿಂತ ಇದು ಶೇ 7.5 ರಷ್ಟು ಕಡಿಮೆ. ಈ ಹಣಕಾಸು ವರ್ಷದಲ್ಲಿ ಕಂಪನಿಯಲ್ಲಿ ಸುಮಾರು 317,240 ಉದ್ಯೋಗಿಗಳಿದ್ದರು.
ವರ್ಷದ ಆರಂಭದಲ್ಲಿ ತರಬೇತಿ ಪಡೆದವರು ಸೇರಿದಂತೆ 77 ಪ್ರತಿಶತದಷ್ಟು ಸುಧಾರಣೆ ಕಂಡು ಬಂದಿದೆ. ಆ ಸಮಯದಲ್ಲಿ ಬೆಳವಣಿಗೆಯ ವಾತಾವರಣವು ತುಂಬಾ ವಿಭಿನ್ನವಾಗಿತ್ತು. ಹೀಗಾಗಿ ನಮ್ಮ ನೌಕರರ ಸಾಮರ್ಥ್ಯ ಹೆಚ್ಚಿಸಲು ನಾವು ಹೈಟೆಕ್ ಮಾರ್ಗದರ್ಶನ ನೀಡಿದ್ದೇವೆ ಎಂದು ಕಂಪನಿಯ ಸಿಎಫ್‌ಒ ಜಯೇಶ್ ಸಂಘರಾಜ್ಕ ಹೇಳಿದ್ದಾರೆ. ಗುರುವಾರ ಕಂಪನಿ ತನ್ನ ನಾಲ್ಕನೇ ತ್ರೈಮಾಸಿಕ ವರದಿ ಹಾಗೂ 2023-24ನೇ ಸಾಲಿನ ಸಂಪೂರ್ಣ ವರದಿಯನ್ನು ಬಿಡುಗಡೆ ಮಾಡಿದೆ.
ಬೆಳವಣಿಗೆಯ ವಾತಾವರಣವು ಬದಲಾದಂತೆ ನಾವು ಅಂತಹ ಕೆಲವು ಅಂಶಗಳನ್ನು ಮರು ಹೊಂದಿಸಬೇಕಾಗಿದೆ. ನಮ್ಮ ಬಳಕೆಯು ಈಗ 82 ಪ್ರತಿಶತಕ್ಕೆ ಬದಲಾಗಿದೆ. ನಮ್ಮ ದೌರ್ಬಲ್ಯ ಕೂಡ ಗಮನಾರ್ಹವಾಗಿ ಕಡಿಮೆಯಾಗಿದೆ. ಹೀಗಾಗಿ ಉದ್ಯೋಗಿಗಳ ಸಂಖ್ಯೆಯಲ್ಲಿ ಕಡಿಮೆ ಅಗಿದೆ ಎಂದು ಸಿಎಫ್‌ಒ ಹೇಳಿದ್ದಾರೆ.