ನವದೆಹಲಿ: ಭಾರತದ ಧರಿಸಬಹುದಾದ ಸಾಧನಗಳ ಮಾರುಕಟ್ಟೆಯು (wearable device market) 2024ರ ಮೊದಲ ತ್ರೈಮಾಸಿಕದಲ್ಲಿ (ವರ್ಷದಿಂದ ವರ್ಷಕ್ಕೆ) ಶೇಕಡಾ 2.1 ರಷ್ಟು (ವರ್ಷದಿಂದ ವರ್ಷಕ್ಕೆ) ಏರಿಕೆಯಾಗಿದ್ದು, 2017 ರ ನಾಲ್ಕನೇ ತ್ರೈಮಾಸಿಕದಿಂದ (ಕ್ಯೂ 4) ಸತತವಾಗಿ ಕನಿಷ್ಠ ಎರಡಂಕಿಗಳಷ್ಟು ಬೆಳೆದು 25.6 ಮಿಲಿಯನ್ ಯುನಿಟ್ಗಳಿಗೆ (2 ಕೋಟಿ 56 ಲಕ್ಷ) ತಲುಪಿದೆ ಎಂದು ಹೊಸ ವರದಿ ಬುಧವಾರ ತೋರಿಸಿದೆ.
ಇಂಟರ್ ನ್ಯಾಷನಲ್ ಡಾಟಾ ಕಾರ್ಪೊರೇಷನ್ (ಐಡಿಸಿ) ಪ್ರಕಾರ, 2023 ರ ದ್ವಿತೀಯಾರ್ಧದಲ್ಲಿ (ಎಚ್ 2) ಹಬ್ಬದ ತ್ರೈಮಾಸಿಕಗಳಲ್ಲಿ ಆಗಿದ್ದ ಹೆಚ್ಚುವರಿ ಸಾಧನಗಳ ಪೂರೈಕೆಯ ಕಾರಣದಿಂದ ಮಾರುಕಟ್ಟೆ ಬೆಳವಣಿಗೆ ನಿರೀಕ್ಷಿತ ಮಟ್ಟದಲ್ಲಿ ಆಗಿಲ್ಲ.
ಒಟ್ಟಾರೆಯಾಗಿ ಧರಿಸಬಹುದಾದ ಸಾಧನಗಳ ಸರಾಸರಿ ಮಾರಾಟ ಬೆಲೆ (ಎಎಸ್ ಪಿ) ಈ ವರ್ಷದ ಮೊದಲ ತ್ರೈಮಾಸಿಕದಲ್ಲಿ ಶೇಕಡಾ 17.8 ರಷ್ಟು ಕುಸಿದಿದೆ. ಇದು 22.62 ಡಾಲರ್ ನಿಂದ 18.59 ಡಾಲರ್ಗೆ ಇಳಿಕೆಯಾಗಿದೆ.
"ಮಾರಾಟಗಾರರು ದೊಡ್ಡ ಪ್ರಮಾಣದ ರಾಷ್ಟ್ರೀಯ ಮತ್ತು ಪ್ರಾದೇಶಿಕ ಚಿಲ್ಲರೆ ಮಾರಾಟಗಾರರ ಸಹಭಾಗಿತ್ವದ ಮೂಲಕ ರಿಟೇಲ್ ಮಾರುಕಟ್ಟೆ ವಿಸ್ತರಣೆಯತ್ತ ಗಮನ ಹರಿಸಲು ಪ್ರಾರಂಭಿಸಿದ್ದಾರೆ ಮತ್ತು ಸ್ಮಾರ್ಟ್ ಫೋನ್ಗಳು, ಲ್ಯಾಪ್ ಟಾಪ್ಗಳು ಮುಂತಾದ ಇತರ ಉತ್ಪನ್ನಗಳೊಂದಿಗೆ ಇವನ್ನು ಬಂಡಲ್ ರೂಪದಲ್ಲಿ ಮಾರಾಟ ಮಾಡಲು ಪ್ರಾರಂಭಿಸಿದ್ದಾರೆ" ಎಂದು ಐಡಿಸಿ ಇಂಡಿಯಾದ ಸ್ಮಾರ್ಟ್ ವೇರೆಬಲ್ ಸಾಧನಗಳ ಮಾರುಕಟ್ಟೆ ವಿಶ್ಲೇಷಕ ಆನಂದ್ ಪ್ರಿಯಾ ಸಿಂಗ್ ಹೇಳಿದರು.
ವರದಿಯ ಪ್ರಕಾರ, 2018 ರ ನಾಲ್ಕನೇ ತ್ರೈಮಾಸಿಕದ ನಂತರ ಮೊದಲ ಬಾರಿಗೆ ಸ್ಮಾರ್ಟ್ ವಾಚ್ ಮಾರಾಟವು ಶೇಕಡಾ 7.3 ರಷ್ಟು (ವರ್ಷದಿಂದ ವರ್ಷಕ್ಕೆ) ಅಂದರೆ 9.6 ಮಿಲಿಯನ್ ಯುನಿಟ್ಗಳಿಗೆ ಇಳಿದಿದೆ. ಧರಿಸಬಹುದಾದ ಸಾಧನಗಳ ಪೈಕಿ ಸ್ಮಾರ್ಟ್ ವಾಚ್ಗಳ ಪಾಲು 2023 ರ ಮೊದಲ ತ್ರೈಮಾಸಿಕದಲ್ಲಿ ಶೇಕಡಾ 41.4 ರಿಂದ ಶೇಕಡಾ 37.6 ಕ್ಕೆ ಇಳಿದಿದೆ. ಇಯರ್ ವೇರ್ (ಕಿವಿಗೆ ಧರಿಸುವ ಸಾಧನ) ಸಾಧನಗಳ ಮಾರಾಟವು ಶೇಕಡಾ 8.3 ರಷ್ಟು (ವರ್ಷದಿಂದ ವರ್ಷಕ್ಕೆ) ಏರಿಕೆಯಾಗಿದ್ದು, 15.9 ಮಿಲಿಯನ್ ಯುನಿಟ್ಗಳಿಗೆ ತಲುಪಿದೆ.
ಬಿಒಎಟಿ (boAt), ನಾಯ್ಸ್, ಫೈರ್-ಬೋಲ್ಟ್, ಬೌಲ್ಟ್ ಮತ್ತು ಒಪ್ಪೋ ಅಗ್ರ ಸ್ಥಾನಗಳಲ್ಲಿದ್ದು, ಕಳೆದ ಒಂದು ವರ್ಷದಿಂದ ಅದೇ ಸ್ಥಾನಗಳಲ್ಲಿ ಉಳಿದುಕೊಂಡಿವೆ. ಆದಾಗ್ಯೂ ಇವುಗಳ ಸಾಮೂಹಿಕ ಪಾಲು ಶೇಕಡಾ 63.9 ರಿಂದ 59.9 ಕ್ಕೆ ಇಳಿದಿದೆ ಎಂದು ವರದಿ ತಿಳಿಸಿದೆ. ಇದಲ್ಲದೇ, ಸ್ಮಾರ್ಟ್ ರಿಂಗ್ ಮಾರಾಟದಲ್ಲಿ ಏರಿಕೆಯಾಗುತ್ತಿದ್ದು, ಈ ವರ್ಷದ ಮೊದಲ ತ್ರೈಮಾಸಿಕದಲ್ಲಿ 173.06 ಡಾಲರ್ ಎಎಸ್ಪಿ ದರದಲ್ಲಿ 64,000 ಸ್ಮಾರ್ಟ್ ರಿಂಗ್ಗಳು ಮಾರಾಟವಾಗಿವೆ. 43.9 ರಷ್ಟು ಮಾರುಕಟ್ಟೆ ಪಾಲು ಹೊಂದಿರುವ ಅಲ್ಟ್ರಾಹ್ಯೂಮನ್ ದೇಶದ ಸ್ಮಾರ್ಟ್ ರಿಂಗ್ ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿದೆ.
ಇದನ್ನೂ ಓದಿ : ರಷ್ಯಾದಿಂದ ಬಾಹ್ಯಾಕಾಶ ಶಸ್ತ್ರ ಉಪಗ್ರಹ ಉಡಾವಣೆ: ಅಮೆರಿಕ ಪ್ರತಿಪಾದನೆ