ನವದೆಹಲಿ: ಉತ್ಪಾದನೆ ಮತ್ತು ಸೇವೆ ಎರಡೂ ವಲಯಗಳಲ್ಲಿನ ಬಲವಾದ ಬೇಡಿಕೆಯಿಂದಾಗಿ ಭಾರತದ ವ್ಯಾಪಾರ ಚಟುವಟಿಕೆಯ ಬೆಳವಣಿಗೆ ದರವು ಫೆಬ್ರವರಿಯಲ್ಲಿ 7 ತಿಂಗಳ ಗರಿಷ್ಠ ಮಟ್ಟಕ್ಕೆ ಏರಿದೆ ಎಂದು ಗುರುವಾರ ಬಿಡುಗಡೆಯಾದ ಖಾಸಗಿ ಆರ್ಥಿಕ ಸಮೀಕ್ಷೆ ತಿಳಿಸಿದೆ. ಎಸ್ &ಪಿ ಗ್ಲೋಬಲ್ ತಯಾರಿಸಿದ, ಎಚ್ಎಸ್ಬಿಸಿಯ ಫ್ಲ್ಯಾಶ್ ಇಂಡಿಯಾ ಕಾಂಪೊಸಿಟ್ ಪರ್ಚೇಸಿಂಗ್ ಮ್ಯಾನೇಜರ್ಸ್ ಇಂಡೆಕ್ಸ್ (ಪಿಎಂಐ) ಜನವರಿಯಲ್ಲಿ 61.2 ರಿಂದ ಈ ತಿಂಗಳು 61.5 ಕ್ಕೆ ಏರಿದೆ.
"ಭಾರತದ ಉತ್ಪಾದಕರು ಮತ್ತು ಸೇವಾ ಪೂರೈಕೆದಾರರ ವಲಯದಲ್ಲಿ ಬೆಳವಣಿಗೆಯ ವೇಗವು ಫೆಬ್ರವರಿಯಲ್ಲಿ 7 ತಿಂಗಳ ಗರಿಷ್ಠ ಮಟ್ಟದಲ್ಲಿತ್ತು. ಹೊಸ ರಫ್ತು ಆರ್ಡರ್ಗಳು ತೀವ್ರವಾಗಿ ಏರಿಕೆಯಾಗಿರುವುದು ವಿಶೇಷವಾಗಿ ಸರಕು ಉತ್ಪಾದಕರಿಗೆ ಪ್ರೋತ್ಸಾಹದಾಯಕವಾಗಿದೆ." ಎಂದು ಎಚ್ಎಸ್ಬಿಸಿಯ ಮುಖ್ಯ ಭಾರತೀಯ ಅರ್ಥಶಾಸ್ತ್ರಜ್ಞ ಪ್ರಂಜುಲ್ ಭಂಡಾರಿ ಹೇಳಿದ್ದಾರೆ.
ಫೆಬ್ರವರಿಯಲ್ಲಿ ಉತ್ಪಾದನಾ ಪಿಎಂಐ ಕಳೆದ ತಿಂಗಳು ಇದ್ದ 56.5 ರಿಂದ 56.7 ಕ್ಕೆ ಏರಿದೆ. ಇದು ಸೆಪ್ಟೆಂಬರ್ ನಂತರದ ಗರಿಷ್ಠವಾಗಿದೆ ಮತ್ತು ಪ್ರಾಥಮಿಕ ಸೇವೆಗಳ ಪಿಎಂಐ ಜನವರಿಯಲ್ಲಿ 61.8 ರಿಂದ 62.0 ಕ್ಕೆ ಏರಿದೆ. ಒಟ್ಟಾರೆ ಅಂತಾರಾಷ್ಟ್ರೀಯ ಆರ್ಡರ್ಗಳು ಸೆಪ್ಟೆಂಬರ್ ನಿಂದ ತೀವ್ರವಾಗಿ ಹೆಚ್ಚಳವಾಗಿವೆ.