ಮುಂಬೈ: ವಿಶ್ವದ ಪ್ರಮುಖ ಆರ್ಥಿಕತೆಗಳಲ್ಲಿ ಒಂದಾಗಿ ಬೆಳೆಯುತ್ತಿರುವ ಭಾರತದ ಚಿಲ್ಲರೆ ಮಾರುಕಟ್ಟೆ ಮುಂದಿನ 10 ವರ್ಷಗಳಲ್ಲಿ 2 ಟ್ರಿಲಿಯನ್ ಡಾಲರ್ಗೆ ಬೆಳವಣಿಗೆಯಾಗುವ ನಿರೀಕ್ಷೆಯಿದೆ ಹಾಗೂ ಇದು ಚಿಲ್ಲರೆ ವ್ಯಾಪಾರಿಗಳಿಗೆ ದೊಡ್ಡ ಅವಕಾಶಗಳನ್ನು ತೆರೆಯಲಿದೆ ಎಂದು ಹೊಸ ವರದಿಯೊಂದು ಬುಧವಾರ ತೋರಿಸಿದೆ. ಭಾರತವು ಪ್ರಸಕ್ತ ಅಗ್ರ ಐದು ಜಾಗತಿಕ ಆರ್ಥಿಕತೆಗಳ ಪೈಕಿ ವೇಗವಾಗಿ ಬೆಳೆಯುತ್ತಿರುವ ದೇಶವಾಗಿದೆ ಮತ್ತು 2030 ರ ವೇಳೆಗೆ ಮೂರನೇ ಅತಿದೊಡ್ಡ ಜಿಡಿಪಿ ದೇಶವಾಗುವ ನಿರೀಕ್ಷೆಯಿದೆ.
ಬೋಸ್ಟನ್ ಕನ್ಸಲ್ಟಿಂಗ್ ಗ್ರೂಪ್ (ಬಿಸಿಜಿ) ಮತ್ತು ರಿಟೇಲರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ (ಆರ್ಎಐ) ವರದಿಯ ಪ್ರಕಾರ, ಭಾರತದ ಚಿಲ್ಲರೆ ಮಾರುಕಟ್ಟೆ ಶೇಕಡಾ 9 ರಿಂದ 10 ರಷ್ಟು ದರದಲ್ಲಿ ಬೆಳವಣಿಗೆಯಾಗುವ ಸಾಧ್ಯತೆಯಿದೆ.
"ಭಾರತೀಯ ಚಿಲ್ಲರೆ ಮಾರುಕಟ್ಟೆ ಕ್ಷೇತ್ರವು ಮುಂದಿನ ದಶಕದಲ್ಲಿ ದ್ವಿಗುಣಗೊಂಡು 2 ಟ್ರಿಲಿಯನ್ ಡಾಲರ್ಗೆ ತಲುಪಲಿದೆ." ಎಂದು ಬಿಸಿಜಿಯ ವ್ಯವಸ್ಥಾಪಕ ನಿರ್ದೇಶಕ ಮತ್ತು ಹಿರಿಯ ಪಾಲುದಾರ ಅಭೀಕ್ ಸಿಂಘಿ ಹೇಳಿದರು. "ಇ-ಕಾಮರ್ಸ್ ವಲಯ ಬೆಳೆವಣಿಗೆಯಾಗುತ್ತಿದ್ದರೂ ಈ ವರ್ಷ ನಿವ್ವಳ ಹೊಸ ಬಳಕೆದಾರರ ಸೇರ್ಪಡೆಯು ನಿಧಾನಗತಿಯಲ್ಲಿದೆ ಮತ್ತು ಆನ್ ಲೈನ್ನ ಪಾತ್ರ ಮತ್ತು ಪ್ರಸ್ತಾಪವನ್ನು ಮರು ಕಲ್ಪಿಸಿಕೊಳ್ಳಬೇಕಾಗಿದೆ" ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.