ಕರ್ನಾಟಕ

karnataka

ETV Bharat / business

ಸಮುದ್ರ ಮಾರ್ಗದ ಮೂಲಕ ಅಮೆರಿಕಕ್ಕೆ ದಾಳಿಂಬೆ ರಫ್ತು ಆರಂಭಿಸಿದ ಭಾರತ

ಭಾರತವು ಸಮುದ್ರ ಮಾರ್ಗದ ಮೂಲಕ ಅಮೆರಿಕಕ್ಕೆ ದಾಳಿಂಬೆ ರಫ್ತು ಆರಂಭಿಸಿದೆ.

In a first, India exports pomegranates by sea to USA
In a first, India exports pomegranates by sea to USA

By ETV Bharat Karnataka Team

Published : Mar 1, 2024, 7:14 PM IST

ನವದೆಹಲಿ: ಇದೇ ಪ್ರಥಮ ಬಾರಿಗೆ ಭಾರತವು ಸಮುದ್ರ ಮಾರ್ಗದ ಮೂಲಕ ಅಮೆರಿಕಕ್ಕೆ ದಾಳಿಂಬೆ ಕಳುಹಿಸಲು ಆರಂಭಿಸಿದೆ. ಕೃಷಿ ಸಂಸ್ಕರಿಸಿದ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರದ (ಎಪಿಇಡಿಎ) ಆಶ್ರಯದಲ್ಲಿ ಸಮುದ್ರದ ಮೂಲಕ ದಾಳಿಂಬೆಯ ಮೊದಲ ಶಿಪ್​ಮೆಂಟ್​ ಅನ್ನು ಪ್ರಾಯೋಗಿಕವಾಗಿ ನವೀ ಮುಂಬೈನ ವಾಶಿಯಿಂದ ಕಳುಹಿಸಲಾಯಿತು ಎಂದು ವಾಣಿಜ್ಯ ಸಚಿವಾಲಯ ಶುಕ್ರವಾರ ತಿಳಿಸಿದೆ.

ಐಎನ್ಐ ಫಾರ್ಮ್ಸ್ ನ 4200 ಬಾಕ್ಸ್ (12.6 ಟನ್)ಗಳನ್ನು ಒಳಗೊಂಡ ದಾಳಿಂಬೆ ಶಿಪ್​ಮೆಂಟ್​ಗೆ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ರಾಜೇಶ್ ಅಗರ್ವಾಲ್ ಮತ್ತು ಎಪಿಇಡಿಎ ಅಧ್ಯಕ್ಷ ಅಭಿಷೇಕ್ ದೇವ್ ಹಸಿರು ನಿಶಾನೆ ತೋರಿದರು.

ಕಳೆದ ವರ್ಷ ಎಪಿಇಡಿಎ ಯು ಐಸಿಎಆರ್-ಎನ್ಆರ್​ಸಿ ಸೋಲಾಪುರದ ತಾಂತ್ರಿಕ ಸಹಯೋಗದೊಂದಿಗೆ ವಿಮಾನ ಮಾರ್ಗದ ಮೂಲಕ ದಾಳಿಂಬೆಗಳನ್ನು ಅಮೆರಿಕಕ್ಕೆ ಕಳುಹಿಸಿತ್ತು. ಈ ಪ್ರಯೋಗದ ಯಶಸ್ವಿ ಫಲಿತಾಂಶದ ಆಧಾರದ ಮೇಲೆ, ಎಪಿಇಡಿಎ ಭಾರತೀಯ ದಾಳಿಂಬೆಯ ಸಂಭಾವ್ಯ ಮಾರುಕಟ್ಟೆ ಸೃಷ್ಟಿಸುವ ಗುರಿಯನ್ನು ಹೊಂದಿತ್ತು.

ವಿಶ್ವದ ಅತಿದೊಡ್ಡ ದಾಳಿಂಬೆ ಉತ್ಪಾದಕರಲ್ಲಿ ಒಂದಾದ ಭಾರತವು ಈಗ ದಾಳಿಂಬೆ ರಫ್ತು ಮಾಡುವ ಅಗ್ರ ದೇಶಗಳಲ್ಲಿ ಒಂದಾಗುವ ಗುರಿಯನ್ನು ಹೊಂದಿದೆ. ಇಯು, ಮಧ್ಯಪ್ರಾಚ್ಯ ಮತ್ತು ಏಷ್ಯಾದ ದೇಶಗಳಲ್ಲಿ ತನ್ನ ಮಾರುಕಟ್ಟೆಯನ್ನು ವಿಸ್ತರಿಸುತ್ತಿರುವ ಭಾರತ ದಾಳಿಂಬೆ ರಫ್ತಿನಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ.

ಜಾಗತಿಕ ಮಾರುಕಟ್ಟೆಗಳ ಕಟ್ಟುನಿಟ್ಟಾದ ಮಾನದಂಡಗಳನ್ನು ಪೂರೈಸಲು ದಾಳಿಂಬೆಯ ಗುಣಮಟ್ಟ ಮತ್ತು ಶೆಲ್ಫ್ ಲೈಫ್ ಅನ್ನು ಹೆಚ್ಚಿಸಲು ಕಂಪನಿಯು ಹಲವಾರು ವರ್ಷಗಳಿಂದ ವ್ಯಾಪಕ ಪ್ರಯತ್ನಗಳನ್ನು ಮಾಡಿದೆ. ಆಗ್ರೋಸ್ಟಾರ್ ಸಮೂಹದ ಭಾಗವಾಗಿ, ಐಎನ್ಐ ಫಾರ್ಮ್ಸ್ ಮಹಾರಾಷ್ಟ್ರ, ಗುಜರಾತ್ ಮತ್ತು ರಾಜಸ್ಥಾನ ರಾಜ್ಯಗಳ ರೈತರೊಂದಿಗೆ ನೇರವಾಗಿ ಕೆಲಸ ಮಾಡುವ ಮೂಲಕ ದಾಳಿಂಬೆಗೆ ಮೌಲ್ಯ ಸರಪಳಿಯನ್ನು ಸ್ಥಾಪಿಸಿದೆ. ಮಹಾರಾಷ್ಟ್ರದ ಸಂಗೋಲಾದ ಅನಾರ್ ನೆಟ್ ನೋಂದಾಯಿತ ರೈತರಿಂದ ಈ ಹಣ್ಣುಗಳನ್ನು ಪಡೆಯಲಾಗಿದೆ.

ದಾಳಿಂಬೆ ಭಾರತದ ಪ್ರಮುಖ ಕೃಷಿ ಉತ್ಪನ್ನವಾಗಿದ್ದು, ಕಡಿಮೆ ಆಮ್ಲೀಯತೆ ಮತ್ತು ಆಕರ್ಷಕ ಬಣ್ಣದೊಂದಿಗೆ ಗುಣಮಟ್ಟದ ದೃಷ್ಟಿಯಿಂದ ಭಾರತದ ದಾಳಿಂಬೆ ಅತ್ಯುತ್ತಮವಾಗಿವೆ. ರಫ್ತು ಗುಣಮಟ್ಟದ ಉತ್ಪನ್ನಗಳನ್ನು ಬೆಳೆಯಬಲ್ಲ ತರಬೇತಿ ಪಡೆದ ರೈತರನ್ನು ಹೊಂದಿರುವ ಭಾರತ ವರ್ಷವಿಡೀ ದಾಳಿಂಬೆಯನ್ನು ಪೂರೈಸಬಲ್ಲದು. ಇತ್ತೀಚಿನ ವರ್ಷಗಳಲ್ಲಿ ದಾಳಿಂಬೆ ಉತ್ಪಾದನೆಯು ಶೇಕಡಾ 20-25 ರಷ್ಟು ದರದಲ್ಲಿ ಬೆಳೆಯುತ್ತಿದೆ. ಭಾರತದಲ್ಲಿ, ದಾಳಿಂಬೆ ಉತ್ಪಾದಿಸುವ ಪ್ರಮುಖ ರಾಜ್ಯಗಳಾದ ಮಹಾರಾಷ್ಟ್ರ, ಗುಜರಾತ್, ಕರ್ನಾಟಕ, ರಾಜಸ್ಥಾನ ಮತ್ತು ಆಂಧ್ರಪ್ರದೇಶ, ಮಹಾರಾಷ್ಟ್ರಗಳು ಒಟ್ಟು ಉತ್ಪಾದನೆಯ ಪಾಲಿನ ಶೇಕಡಾ 50 ಕ್ಕಿಂತ ಹೆಚ್ಚು ಕೊಡುಗೆ ನೀಡುತ್ತವೆ.

ಇದನ್ನೂ ಓದಿ :320 ಲಕ್ಷ ಟನ್ ಗೋಧಿ, 6 ಲಕ್ಷ ಟನ್ ಸಿರಿಧಾನ್ಯ ದಾಸ್ತಾನಿಗೆ ಕೇಂದ್ರ ನಿರ್ಧಾರ

ABOUT THE AUTHOR

...view details