ನವದೆಹಲಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ನೀಡಿರುವ ಮಾರ್ಗಸೂಚಿಯಂತೆ ಮಾರ್ಚ್ 15ರ ಮಧ್ಯರಾತ್ರಿಯಿಂದಲೇ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ನಿಷೇಧ ಜಾರಿಗೆ ಬಂದಿದೆ. ಇನ್ನು ಪೇಟಿಎಂ ಫಾಸ್ಟಾಗ್ಗಳು ಕೂಡ ಶುಕ್ರವಾರ ಮಧ್ಯರಾತ್ರಿಯಿಂದಲೇ ಕಾರ್ಯಚಾರಣೆಗೆ ಸ್ಥಗಿತಗೊಂಡಿದೆ. ಈ ಫಾಸ್ಟಾಗ್ಗಳ ಬಳಸಿ ಇನ್ಮುಂದೆ ಟಾಪ್ ಅಪ್ ಮಾಡಲು ಸಾಧ್ಯವಾಗುವುದಿಲ್ಲ.
ಒಂದು ವೇಳೆ ಈಗಾಗಲೇ ಈ ಫಾಸ್ಟಾಗ್ನಲ್ಲಿ ಬ್ಯಾಲೆನ್ಸ್ ಇದ್ದರೆ ಮಾತ್ರ ಅದನ್ನು ಮಾರ್ಚ್ 15ರ ಬಳಿಕವೂ ಬಳಕೆ ಮಾಡಬಹುದಷ್ಟೇ. ಇನ್ನು ಈ ಪೇಟಿಎಂ ಪೇಟಿಎಂ ಫಾಸ್ಟಾಗ್ ಅನ್ನು ಹೇಗೆ ನಿಷ್ಕ್ರಿಯಗೊಳಿಸುವುದು ಅನ್ನೋದರ ಕುರಿತ ಸುಲಭ ಮಾಹಿತಿ ಇಲ್ಲಿದೆ.
ಪೇಟಿಎಂ ಫಾಸ್ಟಾಗ್ ಹೊಂದಿರುವವರು ಪೇಟಿಎಂ ಆ್ಯಪ್ ಮೂಲಕ ಇದನ್ನು ನಿಷ್ಕ್ರಿಯ ಮಾಡಬಹುದು. ಪೇಟಿಎಂ ಆ್ಯಪ್ ಅನ್ನು ತೆರೆದು ಅಲ್ಲಿ, ಸರ್ಚ್ನಲ್ಲಿ ಮ್ಯಾನೇಜ್ ಫಾಸ್ಟಾಗ್ ಎಂದು ಟೈಪ್ ಮಾಡಿ. ಮ್ಯಾನೇಜ್ ಫಾಸ್ಟಾಗ್ ಸೆಕ್ಷನ್ ಲಿಸ್ಟ್ನಲ್ಲಿ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಫಾಸ್ಟಾಗ್ಗೆ ಜೋಡಣೆಯಾಗಿರುವ ವಾಹನದ ಕುರಿತು ತೋರಿಸುತ್ತದೆ. ಇಲ್ಲಿ ಕ್ಲೋಸ್ ಫಾಸ್ಟಾಗ್ ಆಪ್ಷನ್ ಅನ್ನು ಆಯ್ಕೆ ಮಾಡಿ. ಬಲಭಾಗದ ಮೇಲೆ ಯಾವ ವಾಹನದ ಫಾಸ್ಟಾಗ್ ಕ್ಲೋಸ್ ಮಾಡಬೇಕು ಎಂಬುದನ್ನು ತೋರಿಸುತ್ತದೆ. ಅದನ್ನು ಆಯ್ಕೆ ಮಾಡಿ. ಬಳಿಕ ಕನ್ಫರ್ಮೆಷನ್ ಪ್ರಕ್ರಿಯೆಯ ನಿಮ್ಮ ಮೊಬೈಲ್ ಸ್ಕ್ರೀನ್ ಮೇಲೆ ಬರಲಿದೆ. ಇದಾದ 5-7 ದಿನಗಳ ಕಾರ್ಯನಿರತ ಅವಧಿಯಲ್ಲಿ ಫಾಸ್ಟಾಗ್ ಬಂದ್ ಆಗಲಿದೆ.
ಸಂಸ್ಥೆಯ ಪ್ರಕಾರ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಫಾಸ್ಟಟ್ಯಾಗ್ ನಿರ್ವಹಣೆಗೆ ಇರಿಸಲಾದ ಭದ್ರತಾ ಠೇವಣಿ ಮತ್ತು ಮಿನಿಮಮ್ ಬ್ಯಾಲೆನ್ಸ್ ಅನ್ನು ಪೇಟಿಎಂ ಪೇಮೆಂಟ್ ಬ್ಯಾಂಕ್ ವಾಲೆಟ್ಗೆ ಮರುಪಾವತಿಸಲಾಗುತ್ತದೆ.