ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮತ್ತೆ 1900 ರೂ. ಇಳಿಕೆ ಕಂಡ ಬಂಗಾರದ ಬೆಲೆ: ನಿಮ್ಮೂರಲ್ಲಿ ಎಷ್ಟಿದೆ ದರ? - Gold and silver Rates in Bengaluru - GOLD AND SILVER RATES IN BENGALURU
ಬೆಂಗಳೂರಿನಲ್ಲಿ ಇಂದು 22 ಕ್ಯಾರೆಟ್ ಚಿನ್ನದ ದರ ಗ್ರಾಂಗೆ 6,570 ರೂ ಇದ್ದರೆ, 24 ಕ್ಯಾರೆಟ್ ಬಂಗಾರ ಗ್ರಾಂಗೆ 7,167ರೂ. ಇದೆ.
ಬೆಂಗಳೂರು/ಹೈದರಾಬಾದ್: ದೇಶದ ಇತರ ರಾಜ್ಯಗಳಿಗೆ ಹೋಲಿಕೆ ಮಾಡಿದಾಗ ಬೆಂಗಳೂರಿನಲ್ಲಿ ಚಿನ್ನದ ದರ ಇಳಿಕೆಯಾಗಿದೆ. ಕಳೆದೊಂದು ವರ್ಷದಿಂದ ಸಿಲಿಕಾನ್ ಸಿಟಿಯಲ್ಲಿ ಬಂಗಾರಕ್ಕೆ ಉತ್ತಮ ಬೇಡಿಕೆ ಕಂಡು ಬಂದಿದೆ. ನೀವೇನಾದ್ರೂ ಇಂದು ಚಿನ್ನ ಕೊಳ್ಳಬೇಕು ಎಂದು ಯೋಜನೆ ರೂಪಿಸಿದ್ದರೆ, ಇಂದಿನ ದರವನ್ನು ಒಮ್ಮೆ ಪರೀಕ್ಷಿಸಿಕೊಳ್ಳಿ.
ಬೆಂಗಳೂರಿನಲ್ಲಿ ಇಂದು 22 ಕ್ಯಾರೆಟ್ ಚಿನ್ನದ ದರ ಗ್ರಾಂಗೆ 6,570 ರೂ ಇದ್ದರೆ, 24 ಕ್ಯಾರೆಟ್ ಬಂಗಾರ ಗ್ರಾಂಗೆ 7,167ರೂ ಇದೆ.
ತೂಕ
22 ಕ್ಯಾ ಇಂದಿನ ದರ
22ಕ್ಯಾ ನಿನ್ನೆ ದರ
ವ್ಯತ್ಯಾಸ
1 gram
₹6,570
₹6,760
₹-190
10 gram
₹65,700
₹67,600
₹-1,900
ನಿನ್ನೆ ಮತ್ತು ಇವತ್ತಿಗೆ ಬೆಂಗಳೂರಿನಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಆಗಿರುವ ಬದಲಾವಣೆ ಕುರಿತ ಮಾಹಿತಿ ಇಲ್ಲಿದೆ
ತೂಕ
24 ಕ್ಯಾ ಇಂದಿನ ದರ
24ಕ್ಯಾ ನಿನ್ನೆ ದರ
ವ್ಯತ್ಯಾಸ
1 gram
₹7,167
₹7,375
₹-208
10 gram
₹71,670
₹73,750
₹-1,900
* ಮೇಲಿನ ಚಿನ್ನದ ದರಗಳಾಗಿದ್ದು, ಜಿಎಸ್ಟಿ, ಟಿಎಸ್ಸಿ ಮತ್ತು ಇತರ ಲೆವಿಗಳನ್ನು ಒಳಗೊಂಡಿರುವುದಿಲ್ಲ. ನಿಖರವಾದ ದರಗಳಿಗಾಗಿ ನಿಮ್ಮ ಸ್ಥಳೀಯ ಆಭರಣ ಮಳಿಗೆಗಳನ್ನು ಸಂಪರ್ಕಿಸಿ.
ದೇಶದಲ್ಲಿಯೂ ಇಂದು ಚಿನ್ನ ಮತ್ತು ಬೆಳ್ಳಿಯ ದರ ಕುಸಿತವಾಗಿದ್ದು, ಶುಕ್ರವಾರಕ್ಕೆ ಹೋಲಿಕೆ ಮಾಡಿದಾಗ ಶನಿವಾರ ಈ ದರ ತಗ್ಗಿದೆ. ಶುಕ್ರವಾರ 24 ಕ್ಯಾರೆಟ್ನ 10 ಗ್ರಾಂ ಬಂಗಾರದ ಬೆಲೆ 75,600 ರೂ. ಇದ್ದರೆ, ಶನಿವಾರ ಈ ದರದಲ್ಲಿ 2000 ರೂ ಕಡಿಮೆಯಾಗಿದ್ದು, 73,600 ರೂ. ದಾಖಲಾಗಿದೆ. ಶುಕ್ರವಾರ ಬೆಳ್ಳಿ ಕೆಜಿಗೆ 95,505 ರೂ ಇದ್ದು, ಶನಿವಾರ 4,716 ಕಡಿಮೆಯಾಗಿದ್ದು, 90,789 ರೂ ವರದಿಯಾಗಿದೆ.
ಹೈದರಾಬಾದ್ನಲ್ಲಿ ಇಂದಿನ ಚಿನ್ನದ ದರ( 24 ಕ್ಯಾರೆಟ್) 10 ಗ್ರಾಂಗೆ 73,600 ಇದ್ದು, ಬೆಳ್ಳಿ ದರ ಕೆಜಿಗೆ 90,789 ದಾಖಲಾಗಿದೆ.
ವಿಜಯವಾಡದಲ್ಲಿ ಶನಿವಾರದ ಬಂಗಾರದ ದರ ( 24 ಕ್ಯಾರೆಟ್) 10 ಗ್ರಾಂಗೆ 73,600 ಕಂಡುಬಂದರೆ, ಬೆಳ್ಳಿ ದರ ಕೆಜಿಗೆ 90,789 ರೂ ಆಗಿದೆ.
ವಿಶಾಖಪಟ್ಟಣಂನಲ್ಲಿ ಇಂದಿನ ಚಿನ್ನದ ದರ (24 ಕ್ಯಾರೆಟ್) 10 ಗ್ರಾಂಗೆ 73,600 ರೂ ಇದ್ದರೆ, ಬೆಳ್ಳಿ ದರ ಕೆಜಿಗೆ 90,789 ಇದೆ.
ಸ್ಪಾಟ್ ಚಿನ್ನದ ದರ: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿಯೂ ಚಿನ್ನ ಮತ್ತು ಬೆಳ್ಳಿಯ ದರ ಕುಸಿತ ಕಂಡಿದೆ. ಶುಕ್ರವಾರ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ದರ ಔನ್ಸ್ಗೆ 2,379 ದಾಖಲಾಗಿತ್ತು. ಆದರೆ, ಶನಿವಾರದಂತೆ 85 ಡಾಲರ್ ಕುಸಿತ ಕಂಡಿದ್ದು, ಔನ್ಸ್ಗೆ 2,294 ಡಾಲರ್ ಆಗಿದೆ. ಪ್ರಸ್ತುತ ಔನ್ಸ್ ಬೆಳ್ಳಿದರ 29.23 ಆಗಿದೆ.
ಕ್ರಿಪ್ಟೋದರ: ಶನಿವಾರದಂದು ಕೂಡ ಕ್ರಿಪ್ಟೊ ವ್ಯಾಪಾರವೂ ಸಮತೋಲಿತವಾಗಿ ಮುಂದುವರೆದಿದೆ. ಪ್ರಮುಖ ಕ್ರಿಪ್ಟೊ ಕರೆನ್ಸಿ ಮೌಲ್ಯ ರೂಪಾಯಿ ದರದಲ್ಲಿ ಹೀಗಿದೆ.
ಬಿಟ್ಕಾಯಿನ್: 51,60,500 ರೂ
ಎಥೆರೆಮ್ : 2,73,001 ರೂ
ಟೆಥರ್: 79.33 ರೂ
ಬಿನನ್ಸ್ ಕಾಯಿನ್: 46,500 ರೂ
ಸೊಲೊನಾ 12, 500
ಪೆಟ್ರೋಲ್ ಡಿಸೇಲ್ ದರ: ರಾಜ್ಯದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಸ್ಥಿರವಾಗಿವೆ. ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ ₹99.84 ಆಗಿದ್ದರೆ, ಡೀಸೆಲ್ ಬೆಲೆ ಲೀಟರ್‌ಗೆ ₹85.93 ಇದೆ. ಬೆಳಗಾವಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ ₹100.04 ಆಗಿದ್ದರೆ, ಡೀಸೆಲ್ ಬೆಲೆ ಲೀಟರ್‌ಗೆ ₹86.14 ಆಗಿದೆ.