ಕರ್ನಾಟಕ

karnataka

ETV Bharat / business

ಮದುವೆ ಸೀಸನ್ ಎಫೆಕ್ಟ್: ಹಳದಿ ಲೋಹದ ಬೆಲೆ ಬಲು ದುಬಾರಿ, ಚಿನ್ನ, ಬೆಳ್ಳಿ ದರ ಹೀಗಿದೆ ನೋಡಿ - Gold Rate

Gold Rate Today April 8th 2024 ದೇಶದಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ಭಾರೀ ಪ್ರಮಾಣದಲ್ಲಿ ಹೆಚ್ಚಾಗುತ್ತಿವೆ. ಕರ್ನಾಟಕ, ಆಂಧ್ರಪ್ರದೇಶ ಹಾಗೂ ತೆಲಂಗಾಣದ ರಾಜ್ಯದ ಪ್ರಮುಖ ನಗರಗಳಲ್ಲಿ ಇಂದಿನ (ಸೋಮವಾರ) ಚಿನ್ನ ಮತ್ತು ಬೆಳ್ಳಿ ದರಗಳು ಹೀಗಿದು ನೋಡಿ?

Marriage Season Effect  gold and silver prices  gold price Huge rise Gold Rate
ಮದುವೆ ಸೀಸನ್ ಎಫೆಕ್ಟ್: ಚಿನ್ನ ಬೆಳ್ಳಿ ಬೆಲೆಯಲ್ಲಿ ಭಾರೀ ಏರಿಕೆ, ಇಂದಿನ ಚಿನ್ನದ ದರ ಏಷ್ಟಿದೆ?

By ETV Bharat Karnataka Team

Published : Apr 8, 2024, 11:30 AM IST

ದೇಶದಲ್ಲಿ ಚಿನ್ನದ ಬೆಲೆ ತೀವ್ರವಾಗಿ ಹೆಚ್ಚಾಗುತ್ತಿದೆ. ಭಾನುವಾರದಂದು 10 ಗ್ರಾಂ ಚಿನ್ನದ ಬೆಲೆ ರೂ.73,081 ಆಗಿದ್ದರೆ, ಸೋಮವಾರದ ವೇಳೆಗೆ ರೂ.474 ಏರಿಕೆಯಾಗಿ ರೂ.73,555 ತಲುಪಿದೆ. ಭಾನುವಾರ 82,975 ರೂಪಾಯಿಯಿದ್ದ ಕೆಜಿ ಬೆಳ್ಳಿ ಬೆಲೆ ಸೋಮವಾರದಂದು 1,116 ರೂ. ಏರಿಕೆಯಾಗಿದ್ದು, 84,091 ರೂ.ಗೆ ಹೆಚ್ಚಳವಾಗಿದೆ.

  • ಬೆಂಗಳೂರಿನಲ್ಲಿ ಹತ್ತು ಗ್ರಾಂ ಚಿನ್ನದ ಬೆಲೆ ರೂ.71,620, ಪ್ರತಿ ಕೆಜಿ ಬೆಳ್ಳಿ ಬೆಲೆ 83,000 ರೂ.
  • ಬೆಳಗಾವಿಯಲ್ಲಿ ಹತ್ತು ಗ್ರಾಂ ಚಿನ್ನದ ಬೆಲೆ ರೂ.71,620, ಪ್ರತಿ ಕೆಜಿ ಬೆಳ್ಳಿ ಬೆಲೆ 83,000 ರೂ.
  • ಹೈದರಾಬಾದ್‌ನಲ್ಲಿ ಹತ್ತು ಗ್ರಾಂ ಚಿನ್ನದ ಬೆಲೆ ರೂ.73,555, ಪ್ರತಿ ಕೆಜಿ ಬೆಳ್ಳಿ ಬೆಲೆ 84,091 ರೂ.
  • ವಿಜಯವಾಡದಲ್ಲಿ ಹತ್ತು ಗ್ರಾಂ ಚಿನ್ನದ ಬೆಲೆ ರೂ.73,555, ಪ್ರತಿ ಕೆಜಿ ಬೆಳ್ಳಿ ಬೆಲೆ 84,091 ರೂ.
  • ವಿಶಾಖಪಟ್ಟಣಂನಲ್ಲಿ 10 ಗ್ರಾಂ ಚಿನ್ನದ ಬೆಲೆ ರೂ.73,555, ಪ್ರತಿ ಕೆಜಿ ಬೆಳ್ಳಿ ಬೆಲೆ 84,091 ರೂ.
  • ಪ್ರದ್ದತ್ತೂರಿನಲ್ಲಿ 10 ಗ್ರಾಂ ಚಿನ್ನದ ಬೆಲೆ ರೂ.73,555, ಪ್ರತಿ ಕೆಜಿ ಬೆಳ್ಳಿ ಬೆಲೆ 84,091 ರೂ.

ಗಮನಿಸಿ: ಮೇಲೆ ತಿಳಿಸಿದ ಬೆಲೆಗಳು ಬೆಳಗಿನ ಮಾರುಕಟ್ಟೆಯ ಆರಂಭದಲ್ಲಿ ಮಾತ್ರ. ಈ ಚಿನ್ನ ಮತ್ತು ಬೆಳ್ಳಿ ದರಗಳು ಬದಲಾಗುತ್ತವೆ.

ಸ್ಪಾಟ್ ಚಿನ್ನದ ಬೆಲೆ?:ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲೂ ಚಿನ್ನದ ದರಗಳು ಭಾರೀ ಪ್ರಮಾಣದಲ್ಲಿ ಹೆಚ್ಚಾಗುತ್ತಿವೆ. ಭಾನುವಾರ, ಒಂದು ಔನ್ಸ್ ಸ್ಪಾಟ್ ಚಿನ್ನದ ಬೆಲೆ 2,330 ಡಾಲರ್‌ಗಳಷ್ಟಿತ್ತು. ಆದರೆ, ಸೋಮವಾರದ ಹೊತ್ತಿಗೆ ಅದು 15 ಡಾಲರ್‌ಗಳಷ್ಟು ಏರಿಕೆಯಾಗಿ 2,345 ಡಾಲರ್‌ಗೆ ತಲುಪಿತು. ಪ್ರಸ್ತುತ, ಒಂದು ಔನ್ಸ್ ಬೆಳ್ಳಿಯ ಬೆಲೆ 27.91 ಡಾಲರ್ ಆಗಿದೆ.

ಕ್ರಿಪ್ಟೋಕರೆನ್ಸಿ ಬೆಲೆಗಳು ಹೇಗಿವೆ?:ಕ್ರಿಪ್ಟೋ ಕರೆನ್ಸಿ ವಹಿವಾಟು ಸೋಮವಾರ ನಷ್ಟದಲ್ಲಿ ಮುಂದುವರೆದಿದೆ.

ಪ್ರಮುಖ ಕ್ರಿಪ್ಟೋ ಕರೆನ್ಸಿಗಳ ಮೌಲ್ಯ:

  • ಕ್ರಿಪ್ಟೋ ಕರೆನ್ಸಿಯ ಪ್ರಸ್ತುತ ಬೆಲೆ
  • ಬಿಟ್ ಕಾಯಿನ್- ರೂ.55,42,000
  • ಎಥೆರಿಯಂ- ರೂ.2,72,652
  • ಟೆಥರ್- ರೂ.80.75
  • ಬಿನಾನ್ಸ್ ನಾಣ್ಯ- ರೂ.47,645
  • ಸೊಲೊನಾ- ರೂ.14,300

ಪೆಟ್ರೋಲ್, ಡೀಸೆಲ್ ದರ: ಕರ್ನಾಟಕ, ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಸ್ಥಿರವಾಗಿವೆ. ಹೈದರಾಬಾದ್​ನಲ್ಲಿ ಲೀಟರ್ ಪೆಟ್ರೋಲ್ ಬೆಲೆ 107.39 ರೂ. ಡೀಸೆಲ್ ಬೆಲೆ 95.63 ರೂ. ವಿಶಾಖಪಟ್ಟಣಂನಲ್ಲಿ ಲೀಟರ್ ಪೆಟ್ರೋಲ್ ಬೆಲೆ 108.27 ರೂ. ಡೀಸೆಲ್ ಬೆಲೆ 96.16 ರೂ. ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ ರೂ.94.76 ಆಗಿದ್ದರೆ, ಡೀಸೆಲ್ ಬೆಲೆ ಲೀಟರ್‌ಗೆ ರೂ.87.66 ಆಗಿದೆ. ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ ರೂ.99.84 ಆಗಿದ್ದರೆ, ಡೀಸೆಲ್ ಬೆಲೆ ಲೀಟರ್‌ಗೆ ರೂ.85.93 ಆಗಿದೆ.

ಇದನ್ನೂ ಓದಿ:ಸ್ವಂತ ಬಿಸ್ನೆಸ್‌ ಮಾಡಲು ಬಯಸುತ್ತಿದ್ದೀರಾ?: ನಿಮಗೆ ಸೂಕ್ತವಾದ ಲೋನ್‌ಗಳ ಬಗ್ಗೆ ತಿಳಿಯಿರಿ - Business Loans

ABOUT THE AUTHOR

...view details