ಕರ್ನಾಟಕ

karnataka

ETV Bharat / business

ಷೇರು ಮಾರುಕಟ್ಟೆ ಸಾರ್ವಕಾಲಿಕ ಎತ್ತರಕ್ಕೆ: ಸೆನ್ಸೆಕ್ಸ್​ 2507 & ನಿಫ್ಟಿ 733 ಅಂಕ ಏರಿಕೆ - Stock Market Hits All Time High - STOCK MARKET HITS ALL TIME HIGH

ಲೋಕಸಭಾ ಚುನಾವಣಾ ಫಲಿತಾಂಶದ ಮುನ್ನಾದಿನ ಷೇರು ಮಾರುಕಟ್ಟೆಗಳು ಸಾರ್ವಕಾಲಿಕ ಏರಿಕೆ ದಾಖಲಿಸಿವೆ.

ಸೆನ್ಸೆಕ್ಸ್​ 2507 & ನಿಫ್ಟಿ 733 ಅಂಕ ಏರಿಕೆ (ಸಂಗ್ರಹ ಚಿತ್ರ)
ಸಾಂದರ್ಭಿಕ ಚಿತ್ರ (IANS)

By ETV Bharat Karnataka Team

Published : Jun 3, 2024, 7:55 PM IST

ಮುಂಬೈ: ಲೋಕಸಭಾ ಚುನಾವಣೆಯ ಫಲಿತಾಂಶಗಳು ಹೊರಬೀಳುವ ಮುನ್ನಾದಿನದಂದು ಭಾರತೀಯ ಬೆಂಚ್ ಮಾರ್ಕ್ ಸೂಚ್ಯಂಕಗಳಾದ ಬಿಎಸ್ಇ ಸೆನ್ಸೆಕ್ಸ್ ಮತ್ತು ನಿಫ್ಟಿ-50 ತಮ್ಮ ಅತಿದೊಡ್ಡ ಏಕದಿನ ರ್ಯಾಲಿಯನ್ನು ದಾಖಲಿಸಿವೆ. 30 ಷೇರುಗಳ ಸೆನ್ಸೆಕ್ಸ್ 2,507 ಪಾಯಿಂಟ್ ಅಥವಾ ಶೇಕಡಾ 3.4 ರಷ್ಟು ಏರಿಕೆ ಕಂಡು 76,469 ಮಟ್ಟದಲ್ಲಿ ಕೊನೆಗೊಂಡರೆ, ನಿಫ್ಟಿ-50 733 ಪಾಯಿಂಟ್ ಅಥವಾ ಶೇಕಡಾ 3.25 ರಷ್ಟು ಏರಿಕೆ ಕಂಡು 23,264 ರಲ್ಲಿ ಕೊನೆಗೊಂಡಿದೆ.

ವಿಶಾಲ ಮಾರುಕಟ್ಟೆಗಳಲ್ಲಿ ಬಿಎಸ್ಇ ಮಿಡ್ ಕ್ಯಾಪ್ ಮತ್ತು ಸ್ಮಾಲ್ ಕ್ಯಾಪ್ ಸೂಚ್ಯಂಕಗಳು ಕ್ರಮವಾಗಿ ಶೇಕಡಾ 3.54 ಮತ್ತು ಶೇಕಡಾ 2.05 ರಷ್ಟು ಏರಿಕೆ ಕಂಡವು. ವೈಯಕ್ತಿಕ ಷೇರುಗಳಲ್ಲಿ ಅದಾನಿ ಪೋರ್ಟ್ಸ್, ಶ್ರೀರಾಮ್ ಫೈನಾನ್ಸ್ ಮತ್ತು ಪವರ್ ಗ್ರಿಡ್ ಆರಂಭಿಕ ವಹಿವಾಟಿನಲ್ಲಿ ಉತ್ತಮ ಪ್ರದರ್ಶನ ನೀಡಿದವು. ಈ ಷೇರುಗಳು ಶೇಕಡಾ 6 ರಿಂದ 9 ರಷ್ಟು ಏರಿಕೆ ಕಂಡವು.

ಅದಾನಿ ಗ್ರೂಪ್​ನ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆ ಅದಾನಿ ಇಂಟರ್ ನ್ಯಾಷನಲ್ ಪೋರ್ಟ್ಸ್ ಹೋಲ್ಡಿಂಗ್ಸ್ ಪ್ರೈವೇಟ್ ಲಿಮಿಟೆಡ್ (ಎಐಪಿಎಚ್) ತಾಂಜಾನಿಯಾದ ಡಾರ್ ಎಸ್ ಸಲಾಮ್ ಬಂದರಿನಲ್ಲಿ ಕಂಟೇನರ್ ಟರ್ಮಿನಲ್ 2 ಅನ್ನು ನಿರ್ವಹಿಸಲು ತಾಂಜಾನಿಯಾ ಬಂದರು ಪ್ರಾಧಿಕಾರದೊಂದಿಗೆ 30 ವರ್ಷಗಳ ರಿಯಾಯಿತಿ ಒಪ್ಪಂದಕ್ಕೆ ಸಹಿ ಹಾಕಿದ್ದರಿಂದ ಅದಾನಿ ಪೋರ್ಟ್ಸ್ ಷೇರುಗಳು ಸುಮಾರು 9 ಪ್ರತಿಶತದಷ್ಟು ಲಾಭ ಗಳಿಸಿದವು.

ಹೂಡಿಕೆದಾರರ ಸಂಪತ್ತು ಮೇ 31 ರಂದು ಹಿಂದಿನ ವಹಿವಾಟಿನಲ್ಲಿ ದಾಖಲಾದ 412.12 ಲಕ್ಷ ಕೋಟಿ ರೂ.ಗೆ ಹೋಲಿಸಿದರೆ 13.79 ಲಕ್ಷ ಕೋಟಿ ರೂ. ಹೆಚ್ಚಳವಾಗಿ 425.91 ಲಕ್ಷ ಕೋಟಿ ರೂ.ಗೆ ಏರಿದೆ. ಸೆನ್ಸೆಕ್ಸ್​ನ ಎಲ್ಲ ಷೇರುಗಳು ಹಸಿರು ಬಣ್ಣದಲ್ಲಿ ಕೊನೆಗೊಂಡವು.

ಎನ್​ಟಿಪಿಸಿ, ಎಸ್​ಬಿಐ, ಪವರ್ ಗ್ರಿಡ್, ಎಲ್ &ಟಿ, ಆಕ್ಸಿಸ್ ಬ್ಯಾಂಕ್ ಮತ್ತು ರಿಲಯನ್ಸ್ ಸೆನ್ಸೆಕ್ಸ್​ನಲ್ಲಿ ಶೇಕಡಾ 9.21 ರಷ್ಟು ಏರಿಕೆ ಕಂಡಿವೆ. ಎಚ್​ಸಿಎಲ್ ಟೆಕ್, ಸನ್ ಫಾರ್ಮಾ, ಏಷ್ಯನ್ ಪೇಂಟ್ಸ್, ನೆಸ್ಲೆ ಇಂಡಿಯಾ ಮತ್ತು ಇನ್ಫೋಸಿಸ್ ಮಾತ್ರ ಶೇಕಡಾ 0.62 ರಷ್ಟು ಕುಸಿದವು.

ಭಾರತೀಯ ರೂಪಾಯಿ ಎರಡು ತಿಂಗಳ ಗರಿಷ್ಠ ಮಟ್ಟಕ್ಕೆ ಜಿಗಿದು ಸೋಮವಾರ ಯುಎಸ್ ಡಾಲರ್ ವಿರುದ್ಧ 28 ಪೈಸೆ ಏರಿಕೆಯೊಂದಿಗೆ 83.14 ರಲ್ಲಿ (ತಾತ್ಕಾಲಿಕ) ಕೊನೆಗೊಂಡಿತು. ಇಂಟರ್ ಬ್ಯಾಂಕ್ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ, ರೂಪಾಯಿಯು 83.09 ರಲ್ಲಿ ಪ್ರಾರಂಭವಾಯಿತು ಮತ್ತು ಇಂಟ್ರಾ-ಡೇ ವ್ಯವಹಾರಗಳ ಸಮಯದಲ್ಲಿ ಡಾಲರ್ ವಿರುದ್ಧ ಗರಿಷ್ಠ 82.95 ಮತ್ತು ಕನಿಷ್ಠ ಮಟ್ಟ 83.17 ರ ನಡುವೆ ವಹಿವಾಟು ನಡೆಸಿತು. ಅಂತಿಮವಾಗಿ ರೂಪಾಯಿ ಡಾಲರ್ ವಿರುದ್ಧ 83.14 (ತಾತ್ಕಾಲಿಕ) ರಲ್ಲಿ ಸ್ಥಿರವಾಯಿತು. ಇದು ಹಿಂದಿನ ಮುಕ್ತಾಯಕ್ಕಿಂತ 28 ಪೈಸೆ ಹೆಚ್ಚಳವಾಗಿದೆ.

ಇದನ್ನೂ ಓದಿ: ಏರುಗತಿಯಲ್ಲಿ ಅದಾನಿ ಗ್ರೂಪ್ ಷೇರುಗಳು: ಅದಾನಿ ಪವರ್ ಶೇ 18ರಷ್ಟು ಹೆಚ್ಚಳ; ಇಂದು ಹೂಡಿಕೆದಾರರ ಸಂಪತ್ತು 12ಲಕ್ಷ ಕೋಟಿಯಷ್ಟು ಏರಿಕೆ! - Adani Group shares rally

ABOUT THE AUTHOR

...view details