ಕರ್ನಾಟಕ

karnataka

ETV Bharat / business

ಆಗಸ್ಟ್​ನಲ್ಲಿ 40 ಲಕ್ಷ ಹೊಸ ಡಿಮ್ಯಾಟ್​ ಖಾತೆ ಓಪನ್: 17 ಕೋಟಿಗೆ ತಲುಪಿದ ಅಕೌಂಟ್​ಗಳ ಸಂಖ್ಯೆ - Demat Accounts Rise - DEMAT ACCOUNTS RISE

ಆಗಸ್ಟ್​ನಲ್ಲಿ 40 ಲಕ್ಷಕ್ಕೂ ಅಧಿಕ ಹೊಸ ಡಿಮ್ಯಾಟ್​ ಖಾತೆಗಳನ್ನು ತೆರೆಯಲಾಗಿದೆ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ (IANS)

By ETV Bharat Karnataka Team

Published : Sep 6, 2024, 1:06 PM IST

ನವದೆಹಲಿ: ಭಾರತದ ಒಟ್ಟು ಡಿಮ್ಯಾಟ್ ಖಾತೆಗಳ ಸಂಖ್ಯೆ ಏರಿಕೆಯಾಗುತ್ತಲೇ ಇದ್ದು, ಆಗಸ್ಟ್​ನಲ್ಲಿ 40 ಲಕ್ಷಕ್ಕೂ ಅಧಿಕ ಹೊಸ ಡಿಮ್ಯಾಟ್​ ಖಾತೆಗಳನ್ನು ತೆರೆಯಲಾಗಿದೆ ಎಂದು ಡಿಪಾಸಿಟರಿಗಳ ಅಂಕಿಅಂಶಗಳು ತಿಳಿಸಿವೆ.

ಆಗಸ್ಟ್​ನಲ್ಲಿ ದೇಶದಲ್ಲಿನ ಒಟ್ಟು ಡಿಮ್ಯಾಟ್ ಖಾತೆಗಳ ಸಂಖ್ಯೆ ನಾಲ್ಕು ಮಿಲಿಯನ್​ಗಿಂತ ಹೆಚ್ಚು ಏರಿಕೆಯಾಗಿ 171.1 ಮಿಲಿಯನ್​ಗೆ (ಸುಮಾರು 17 ಕೋಟಿ) ತಲುಪಿದೆ ಎಂದು ನ್ಯಾಷನಲ್ ಸೆಕ್ಯುರಿಟೀಸ್ ಡಿಪಾಸಿಟರಿ ಲಿಮಿಟೆಡ್ (ಎನ್ಎಸ್ಡಿಎಲ್) ಮತ್ತು ಸೆಂಟ್ರಲ್ ಡಿಪಾಸಿಟರಿ ಸರ್ವೀಸಸ್ ಲಿಮಿಟೆಡ್ (ಸಿಡಿಎಸ್ಎಲ್) ದತ್ತಾಂಶವು ತೋರಿಸಿದೆ.

ಆಗಸ್ಟ್​ನಲ್ಲಿ ನಡೆದ ದಾಖಲೆ ಸಂಖ್ಯೆಯ ಐಪಿಒಗಳು ಕೂಡ ಡಿಮ್ಯಾಟ್​ ಖಾತೆಗಳ ಸಂಖ್ಯೆ ಹೆಚ್ಚಾಗಲು ಕಾರಣವಾಗಿವೆ. ಕಳೆದ ತಿಂಗಳು 10 ಕಂಪನಿಗಳು ಐಪಿಒಗಳ ಮೂಲಕ ಸುಮಾರು 17,000 ಕೋಟಿ ರೂ.ಗಳನ್ನು ಸಂಗ್ರಹಿಸಿವೆ. 2024 ರ ಆರಂಭದಿಂದ ಆಗಸ್ಟ್ 31 ರವರೆಗೆ 50 ಕ್ಕೂ ಹೆಚ್ಚು ಕಂಪನಿಗಳು ಐಪಿಒಗಳ ಮೂಲಕ 53,419 ಕೋಟಿ ರೂ.ಗಳನ್ನು ಸಂಗ್ರಹಿಸಿವೆ.

2024 ರಿಂದ ಪ್ರತಿ ತಿಂಗಳು ಸರಾಸರಿ 40 ಲಕ್ಷ ಡಿಮ್ಯಾಟ್ ಖಾತೆಗಳನ್ನು ತೆರೆಯಲಾಗಿದೆ. ಪ್ರಸಕ್ತ ವರ್ಷದ ಮೊದಲ ಎಂಟು ತಿಂಗಳಲ್ಲಿ ಸುಮಾರು 3.2 ಕೋಟಿ ಡಿಮ್ಯಾಟ್ ಖಾತೆಗಳನ್ನು ತೆರೆಯಲಾಗಿದೆ.

ಏಪ್ರಿಲ್ 2021 ರಿಂದ ಡಿಸೆಂಬರ್ 2023 ರವರೆಗೆ ಐಪಿಒ ಅಪ್ಲಿಕೇಶನ್​​ಗಳಿಗೆ ಬಳಸಲಾದ ಸುಮಾರು ಅರ್ಧದಷ್ಟು ಡಿಮ್ಯಾಟ್​ ಖಾತೆಗಳನ್ನು ಕೊರೊನಾ ಸಾಂಕ್ರಾಮಿಕ ಅಲೆಯ ನಂತರ ತೆರೆಯಲಾಗಿದೆ ಎಂದು ಅಧ್ಯಯನದಲ್ಲಿ ವರದಿಯಾಗಿದೆ.

ಷೇರು ಮಾರುಕಟ್ಟೆ 2024 ರಲ್ಲಿ ಹೂಡಿಕೆದಾರರಿಗೆ ಅತ್ಯುತ್ತಮ ಆದಾಯವನ್ನು ನೀಡಿದೆ. ಈ ವರ್ಷದ ಆರಂಭದಿಂದ, ನಿಫ್ಟಿ ಕಳೆದ ಒಂದು ವರ್ಷದಲ್ಲಿ ಶೇಕಡಾ 15 ಮತ್ತು ಕಳೆದ ಒಂದು ವರ್ಷದಲ್ಲಿ ಶೇಕಡಾ 27 ರಷ್ಟು ಏರಿಕೆಯಾಗಿದೆ. ಹಾಗೆಯೇ ಈ ವರ್ಷದ ಆರಂಭದಿಂದ ಸೆನ್ಸೆಕ್ಸ್ ಶೇಕಡಾ 13 ರಷ್ಟು ಮತ್ತು ಕಳೆದ ಒಂದು ವರ್ಷದಲ್ಲಿ ಶೇಕಡಾ 24 ರಷ್ಟು ಏರಿಕೆಯಾಗಿದೆ.

ಭಾರತದ ಜಿಡಿಪಿ ಬೆಳವಣಿಗೆಯ ದರವು 2023-24ರ ಆರ್ಥಿಕ ವರ್ಷದಲ್ಲಿ ಶೇಕಡಾ 8.2 ರಷ್ಟಿತ್ತು. ಇದು 2024-25 ರ ಆರ್ಥಿಕ ವರ್ಷದಲ್ಲಿ ಶೇಕಡಾ 7.2 ರಷ್ಟಿರಬಹುದು ಎಂದು ಅಂದಾಜಿಸಲಾಗಿದೆ. ದೇಶದ ಆರ್ಥಿಕತೆಯ ಬಲವರ್ಧನೆಯು ಭಾರತೀಯ ಷೇರು ಮಾರುಕಟ್ಟೆಯ ಏರಿಕೆಗೆ ಪ್ರಮುಖ ಕಾರಣವಾಗಿದೆ.

ಡಿಮ್ಯಾಟ್ ಖಾತೆಯು ಹೂಡಿಕೆದಾರರಿಗೆ ಷೇರುಗಳು ಮತ್ತು ಸೆಕ್ಯುರಿಟಿಗಳನ್ನು ಎಲೆಕ್ಟ್ರಾನಿಕ್ ರೂಪದಲ್ಲಿ ಇಟ್ಟುಕೊಳ್ಳಲು ಸಹಾಯ ಮಾಡುತ್ತದೆ. ಇದನ್ನು ಸಾಮಾನ್ಯವಾಗಿ ಡಿಮೆಟೀರಿಯಲೈಸ್ಡ್ ಖಾತೆ ಎಂದೂ ಕರೆಯಲಾಗುತ್ತದೆ. ಈ ಖಾತೆಯು ಷೇರುಗಳು, ಎಕ್ಸ್​ಚೇಂಜ್​ -ಟ್ರೇಡೆಡ್ ಫಂಡ್​ಗಳು, ಬಾಂಡ್​ಗಳು ಮತ್ತು ಮ್ಯೂಚುವಲ್ ಫಂಡ್​ಗಳಲ್ಲಿ ಹೂಡಿಕೆದಾರರ ಹಿಡುವಳಿಗಳನ್ನು ಒಂದೇ ಸ್ಥಳದಲ್ಲಿ ಟ್ರ್ಯಾಕ್ ಮಾಡಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: ಆಸ್ಟ್ರೇಲಿಯಾಗೆ ಇದೇ ಮೊದಲ ಬಾರಿಗೆ ಭಾರತದಿಂದ ದಾಳಿಂಬೆ ರಫ್ತು: ಮೆಲ್ಬೋರ್ನ್ ತಲುಪಿದ ಮೊದಲ ಶಿಪ್​ಮೆಂಟ್​ - India Exports Pomegranate

ABOUT THE AUTHOR

...view details