ಕರ್ನಾಟಕ

karnataka

By ETV Bharat Karnataka Team

Published : Mar 17, 2024, 6:41 PM IST

ETV Bharat / business

ಈ ವಾರ $287 ಮಿಲಿಯನ್ ಫಂಡಿಂಗ್ ಸಂಗ್ರಹಿಸಿದ 30 ಸ್ಟಾರ್ಟ್​ಅಪ್​ಗಳು

ಈ ವಾರದಲ್ಲಿ ಭಾರತೀಯ ಸ್ಟಾರ್ಟ್​ ಅಪ್ ಕಂಪನಿಗಳು 287 ಮಿಲಿಯನ್ ಡಾಲರ್ ಫಂಡಿಂಗ್ ಸಂಗ್ರಹಿಸಿವೆ.

30 startups that raised $287 million in funding this week
30 startups that raised $287 million in funding this week

ನವದೆಹಲಿ : ಭಾರತೀಯ ಸ್ಟಾರ್ಟ್ಅಪ್​​ಗಳು ಸಾಮಾನ್ಯ ವೇಗದಲ್ಲಿ ನಿಧಿ ಸಂಗ್ರಹಣೆಯನ್ನು ಮುಂದುವರಿಸಿದ್ದು, ಈ ವಾರ ದೇಶದಲ್ಲಿನ 30 ಸ್ಟಾರ್ಟ್ಅಪ್​ಗಳು ಸುಮಾರು 287 ಮಿಲಿಯನ್ ಡಾಲರ್ ಫಂಡಿಂಗ್ ಪಡೆದುಕೊಂಡಿವೆ. ಇದರಲ್ಲಿ ಆರು ಬೆಳವಣಿಗೆಯ ಹಂತದ ಒಪ್ಪಂದಗಳು (ಡೀಲ್​ಗಳು) ಮತ್ತು 20 ಆರಂಭಿಕ ಹಂತದ ಒಪ್ಪಂದಗಳು ಸೇರಿವೆ ಎಂದು ಎನ್ ಟ್ರಾಕರ್ ಶನಿವಾರ ವರದಿ ಮಾಡಿದೆ.

"ಒಂದು ಬೆಳವಣಿಗೆ ಹಂತದ ಮತ್ತು ಮೂರು ಆರಂಭಿಕ ಹಂತದ ಸ್ಟಾರ್ಟ್ಅಪ್​ಗಳು ತಾವು ಪಡೆದುಕೊಂಡ ಫಂಡಿಂಗ್​ನ ವಿವರಗಳನ್ನು ಬಹಿರಂಗಪಡಿಸಿಲ್ಲ" ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಕಳೆದ ವಾರ, 27 ಸ್ಟಾರ್ಟ್ಅಪ್​ಗಳು ಸುಮಾರು 307.8 ಮಿಲಿಯನ್ ಡಾಲರ್ ಸಂಗ್ರಹಿಸಿದ್ದವು. ಇದರಲ್ಲಿ 17 ಆರಂಭಿಕ ಹಂತದ ಮತ್ತು 7 ಬೆಳವಣಿಗೆಯ ಹಂತದ ಕಂಪನಿಗಳು ಸೇರಿವೆ.

ದೆಹಲಿ-ಎನ್​ಸಿಆರ್ ಮೂಲದ ಸ್ಟಾರ್ಟ್ಅಪ್​ಗಳು 11 ಡೀಲ್​ಗಳೊಂದಿಗೆ ಫಂಡಿಂಗ್ ಸಂಗ್ರಹದಲ್ಲಿ ಮುಂಚೂಣಿಯಲ್ಲಿದ್ದರೆ, ಬೆಂಗಳೂರು 10 ಡೀಲ್​ಗಳೊಂದಿಗೆ ನಂತರದ ಸ್ಥಾನದಲ್ಲಿದೆ.

ಬಿ 2 ಬಿ ಸಾಸ್ ಫಿನ್ ಟೆಕ್ ಕಂಪನಿ ಪರ್ಫಿಯೋಸ್ ಅತ್ಯಧಿಕ ಫಂಡಿಂಗ್ ಪಡೆದುಕೊಂಡು 2024 ರ ಭಾರತದ ಎರಡನೇ ಯುನಿಕಾರ್ನ್ ಆಗಿ ಹೊರಹೊಮ್ಮಿದೆ. ಇದು ಟೀಚರ್ಸ್ ವೆಂಚರ್ ಗ್ರೋತ್ (ಟಿವಿಜಿ) ನಿಂದ ಹೊಸ ಫಂಡಿಂಗ್ ಸುತ್ತಿನಲ್ಲಿ 80 ಮಿಲಿಯನ್ ಡಾಲರ್ ಸಂಗ್ರಹಿಸಿದೆ. ಟೀಚರ್ಸ್ ವೆಂಚರ್ ಗ್ರೋತ್ ಇದು ಒಂಟಾರಿಯೊ ಟೀಚರ್ಸ್ ಪೆನ್ಷನ್ ಪ್ಲಾನ್ ಕಂಪನಿಯ ಇತ್ತೀಚಿನ ಹೂಡಿಕೆ ವಿಭಾಗವಾಗಿದೆ.

ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್ ತಯಾರಿಸುವ ಕಂಪನಿ ಲೋಹಮ್ ಸಿರೀಸ್ ಬಿ ಫಂಡಿಂಗ್ ಸುತ್ತಿನಲ್ಲಿ ಸಿಂಗುಲಾರಿಟಿ ಗ್ರೋತ್, ಬ್ಯಾರಿಂಗ್ ಪ್ರೈವೇಟ್ ಈಕ್ವಿಟಿ, ಕ್ಯಾಕ್ಟಸ್ ವೆಂಚರ್ ಪಾರ್ಟ್ ನರ್ಸ್ ಮತ್ತು ವೆಂಚರ್ ಈಸ್ಟ್ ನಿಂದ 54 ಮಿಲಿಯನ್ ಡಾಲರ್ (450 ಕೋಟಿ ರೂ.) ಪಡೆದುಕೊಂಡಿದೆ.

ಹೆಲ್ತ್ ಟೆಕ್ ಸ್ಟಾರ್ಟ್ಅಪ್ ಶುಗರ್ ಡಾಟ್ ಫಿಟ್ ತನ್ನ ಸಿರೀಸ್ ಎ ಫಂಡಿಂಗ್​ನಲ್ಲಿ ಹೆಚ್ಚುವರಿ 5 ಮಿಲಿಯನ್ ಡಾಲರ್ ಸಂಗ್ರಹಿಸಿದ್ದು, ಅದರ ಒಟ್ಟು ನಿಧಿ ಸಂಗ್ರಹ 16 ಮಿಲಿಯನ್ ಡಾಲರ್​ಗೆ ಏರಿಕೆಯಾಗಿದೆ.

ಎಐ ಚಾಲಿತ ಚರ್ಮರೋಗ ಪ್ಲಾಟ್ ಫಾರ್ಮ್ ಕ್ಯೂರ್ ಸ್ಕಿನ್ ತನ್ನ ಬಿ ಸಿರೀಸ್ ಫಂಡಿಂಗ್ ಸುತ್ತಿನಲ್ಲಿ 20 ಮಿಲಿಯನ್ ಡಾಲರ್ ಸಂಗ್ರಹಿಸಿದೆ. ಸ್ಮಾರ್ಟ್ ಮೀಟರಿಂಗ್ ಕಂಪನಿ ಕಿಂಬಲ್ ಟೆಕ್ನಾಲಜೀಸ್ ತನ್ನ ಮೊದಲ ಫಂಡಿಂಗ್ ಸುತ್ತಿನಲ್ಲಿ 5 ಮಿಲಿಯನ್ ಡಾಲರ್ ಬೆಳವಣಿಗೆಯ ಹಂತದ ಬಂಡವಾಳ ಪಡೆದುಕೊಂಡಿದೆ.

ಇದನ್ನೂ ಓದಿ : ಜಾಗತಿಕವಾಗಿ 50 ಲಕ್ಷ ಪರಿಸರ ಸ್ನೇಹಿ ವಾಹನ ಮಾರಾಟ ಮಾಡಿದ ಹ್ಯುಂಡೈ

ABOUT THE AUTHOR

...view details