ಕೋಲ್ಕತ್ತಾ (ಪಶ್ಚಿಮ ಬಂಗಾಳ): ರೆಮಲ್ ಚಂಡಮಾರುತವು ರಾಜ್ಯಾದ್ಯಂತ ಅಪಾರ ಪ್ರಮಾಣದ ಹಾನಿಯನ್ನುಂಟು ಮಾಡಿದೆ. ಮತ್ತೊಂದೆಡೆ, ನಗರದಲ್ಲಿ ಸುಮಾರು 400 ಮರಗಳು ಬುಡ ಸಮೇತ ಧರೆಗುರುಳಿವೆ. ಹೀಗಾಗಿ ಅದೇ ಜಾಗದಲ್ಲಿ ಮತ್ತೆ ಮರಗಳನ್ನು ನೆಡುವಂತೆ ಪರಿಸರವಾದಿಗಳು ಒತ್ತಾಯಿಸಿದ್ದಾರೆ. ಸೋಮವಾರ ರಾತ್ರಿವರೆಗೆ ಕೋಲ್ಕತ್ತಾ ಮುನ್ಸಿಪಲ್ ಕಾರ್ಪೊರೇಶನ್ನ (ಕೆಎಂಸಿ) ತೋಟಗಾರಿಕಾ ಇಲಾಖೆಯ ಸಿಬ್ಬಂದಿ ವಿವಿಧ ಪ್ರದೇಶಗಳ ರಸ್ತೆಯ ಮೇಲೆ ಬಿದ್ದಿದ್ದ ಮರಗಳನ್ನು ತೆರವುಗೊಳಿಸಲು ಹೆಚ್ಚುವರಿ ಅವಧಿಯವರೆಗೆ ಕೆಲಸ ಮಾಡಿದರು.
ಕೆಎಂಸಿ ಪ್ರಕಾರ, ಚಂಡಮಾರುತ ಅಪ್ಪಳಿಸಿದ ನಂತರ 20 ಮರಗಳು ಧರೆಗುರುಳಿವೆ ಮತ್ತು ರೆಮಲ್ ಅಪ್ಪಳಿಸುವ ಹಿಂದಿನ ದಿನ 12 ಮರಗಳು ಭಾರಿ ಗಾಳಿಯಿಂದ ಉರುಳಿ ಬಿದ್ದಿವೆ. ರೆಮಲ್ ಅಪ್ಪಳಿಸಿದ ನಂತರ 300 ಕ್ಕೂ ಹೆಚ್ಚು ದೊಡ್ಡ ಮರಗಳನ್ನು ನೆಲಸಮವಾಗಿವೆ. 100ಕ್ಕೂ ಹೆಚ್ಚು ದೊಡ್ಡ ಮರಗಳ ಕೊಂಬೆಗಳು ಮುರಿದು ಬಿದ್ದಿವೆ ಎಂದು ತಿಳಿಸಿದೆ. ಮತ್ತೊಂದೆಡೆ, ಇದರಿಂದಾಗಿ ಪರಿಸರ ವಿಜ್ಞಾನಿಗಳು ಮತ್ತು ಪರಿಸರ ಚಳವಳಿಯ ಕಾರ್ಯಕರ್ತರು ಆತಂಕಕ್ಕೊಳಗಾಗಿದ್ದಾರೆ.
ಕೋಲ್ಕತ್ತಾದ ನಾಗರಿಕರ ಆರೋಗ್ಯದ ಹಿತದೃಷ್ಟಿಯಿಂದ ಪರಿಸರವನ್ನು ರಕ್ಷಿಸಲು, ರಸ್ತೆಗಳನ್ನು ಸ್ವಚ್ಛವಾಗಿಡಲು ಮತ್ತು ನಾಗರಿಕರ ಸಮಸ್ಯೆಗಳನ್ನು ಪರಿಹರಿಸುವ ಪ್ರಯತ್ನ ಶೇಕಡಾ ಒಂದು ರಷ್ಟು ಸಹ ನಡೆಯುತ್ತಿಲ್ಲ ಎಂದು ಪರಿಸರವಾದಿಗಳು ದೂರಿದ್ದಾರೆ. ಪರಿಸರ ಹೋರಾಟಗಾರ ಸೋಮೇಂದ್ರ ಮೋಹನ್ ಘೋಷ್ ಪ್ರತಿಕ್ರಿಯಿಸಿ, ಅನೇಕ ಮರಗಳು ಧರೆಗುರುಳಿವೆ. ಅವುಗಳನ್ನು ಸೂಕ್ತ ಸ್ಥಳಗಳಲ್ಲಿ ಏಕೆ ನೆಡುತ್ತಿಲ್ಲ?. ಹಲವು ವರ್ಷಗಳ ಹಿರಿಯ ಮರಗಳನ್ನು ಕಡಿಯಲಾಗುತ್ತಿದೆ. ಈ ಬಗ್ಗೆ ಕೋಲ್ಕತ್ತಾ ಪಾಲಿಕೆ ಯೋಚಿಸಬೇಕು. ಇಲ್ಲದಿದ್ದರೆ ಪರಿಸರಕ್ಕೆ ಹಾನಿಯಾಗಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.