ಕರ್ನಾಟಕ

karnataka

ETV Bharat / bharat

ಪತ್ನಿ, ಮೂವರು ಮಕ್ಕಳನ್ನು ಬರ್ಬರವಾಗಿ ಕೊಂದ ಪತಿ - Bihar Murder case - BIHAR MURDER CASE

ಬಿಹಾರದ ಮೋತಿಹಾರಿ ಎಂಬಲ್ಲಿ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಕೋಪಗೊಂಡ ಪತಿ ತನ್ನ ಪತ್ನಿ ಹಾಗೂ ಮೂವರು ಮಕ್ಕಳನ್ನು ಮೇವು ಕತ್ತರಿಸುವ ಯಂತ್ರದಿಂದ ಬರ್ಬರವಾಗಿ ಹತ್ಯೆಗೈದಿರುವ ಘಟನೆ ನಡೆದಿದೆ.

MURDER IN MOTIHARI BIHAR  WOMAN AND 4 CHILDREN MURDER  MOTIHARI CRIME NEWS
ಸಾಂದರ್ಭಿಕ ಚಿತ್ರ

By ETV Bharat Karnataka Team

Published : Mar 29, 2024, 1:32 PM IST

ಮೋತಿಹಾರಿ(ಬಿಹಾರ):ಇಲ್ಲಿನ ಮೋತಿಹಾರಿ ಎಂಬಲ್ಲಿ ನಡೆದ ಮಹಿಳೆ ಮತ್ತು ಮೂವರು ಮಕ್ಕಳ ಹತ್ಯೆ ಪ್ರಕರಣ ಭಾರೀ ಸಂಚಲನ ಮೂಡಿಸಿದೆ. ಕೋಪದ ಕೈಗೆ ಬುದ್ಧಿ ಕೊಟ್ಟ ವ್ಯಕ್ತಿಯೊಬ್ಬ ತನ್ನ ಪತ್ನಿ ಹಾಗೂ ಮೂವರು ಮಕ್ಕಳನ್ನು ಮೇವು ಕತ್ತರಿಸುವ ಯಂತ್ರದಿಂದ ಬರ್ಬರವಾಗಿ ಹತ್ಯೆಗೈದಿದ್ದಾನೆ. ಬಳಿಕ ಆರೋಪಿ ಸ್ಥಳದಿಂದ ಪರಾರಿಯಾಗಿದ್ದು, ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ.

ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಹತ್ಯೆ ಮಾಡಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಮೋತಿಹಾರಿಯ ಪಹರ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಬವಾರಿಯಾ ಗ್ರಾಮದಲ್ಲಿ ಘಟನೆ ನಡೆದಿದೆ. ಡಿಎಸ್ಪಿ ರಂಜನ್ ಕುಮಾರ್ ಸೇರಿದಂತೆ ಹಲವು ಠಾಣೆಗಳ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲ ನಡೆಸಿದ್ದಾರೆ.

ಈ ಪ್ರಕರಣದ ಬಗ್ಗೆ ಪೊಲೀಸರು ಸಮಗ್ರ ತನಿಖೆ ನಡೆಸುತ್ತಿದ್ದಾರೆ. ಫೋರೆನ್ಸಿಕ್ ತಂಡವನ್ನೂ ಸ್ಥಳಕ್ಕೆ ಕರೆಸಲಾಗಿದೆ. ಪೊಲೀಸರು ಸ್ಥಳದಲ್ಲಿರುವ ಎಲ್ಲ ಸಾಕ್ಷ್ಯಗಳನ್ನು ಸಂಗ್ರಹಿಸುತ್ತಿದ್ದಾರೆ. ತನಿಖೆಯ ನಂತರ ಸತ್ಯ ಬಹಿರಂಗವಾಗಲಿದೆ.

ಇತ್ತೀಚಿನ ಪ್ರಕರಣ, ಐವರ ಮೇಲೆ ಡಂಪರ್‌ ಟ್ರಕ್‌ ಹರಿಸಿ ಹತ್ಯೆ:ರಾಜಸ್ಥಾನ ರಾಜ್ಯದ ಜಲವಾರ್‌ ಜಿಲ್ಲೆಯ ಪಗಾರಿಯಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆರೋಪಿಗಳ ಗುಂಪೊಂದು ಡಂಪರ್ ಟ್ರಕ್‌ ಹರಿಸಿ ಐವರನ್ನು ನಿರ್ದಯವಾಗಿ ಕೊಲೆ ಮಾಡಿರುವ ಘಟನೆ ಇತ್ತೀಚೆಗೆ ನಡೆದಿದೆ. ಸಾವಿಗೀಡಾದವರಲ್ಲಿ ಇಬ್ಬರು ಸಹೋದರರು ಸೇರಿದ್ದರು. ಘಟನೆಯ ನಂತರ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದರು.

''ಯಾವುದೋ ವಿಚಾರಕ್ಕೆ ಎರಡು ಗುಂಪಿಗಳ ನಡುವೆ ಗಲಾಟೆ ನಡೆದಿತ್ತು. ಬಳಿಕ ಐವರು ಪಗರಿಯಾ ಪೊಲೀಸ್ ಠಾಣೆಗೆ ದೂರು ದಾಖಲಿಸುವುದಾಗಿ ಹೇಳಿ ತೆರಳುತ್ತಿದ್ದರು. ಇದರಿಂದ ಕೋಪಗೊಂಡ ಗುಂಪೊಂದು ಡಂಪರ್‌ ಟ್ರಕ್​ ಅನ್ನು ಮತ್ತೊಂದು ಗುಂಪಿನ ಐವರ ಮೇಲೆ ಡಂಪರ್​ ಅನ್ನು ಹರಿಸಿ ಕೊಲೆ ಮಾಡಿದ್ದರು. ಆರೋಪಿಗಳು ಬೇರೆ ರಾಜ್ಯಕ್ಕೆ ಪರಾರಿಯಾಗಿರುವ ಕುರಿತು ಮಾಹಿತಿ ಲಭಿಸಿದೆ. ಪಕ್ಕದ ಮಧ್ಯಪ್ರದೇಶಕ್ಕೂ ಹಲವು ಪೊಲೀಸ್ ತಂಡಗಳನ್ನು ಕಳುಹಿಸಲಾಗಿದೆ'' ಎಂದು ಈ ಕುರಿತು ಮಾಹಿತಿ ನೀಡಿದ ಭವಾನಿಮಂಡಿ ಡಿಎಸ್ಪಿ ಪ್ರೇಮ್ ತಿಳಿಸಿದ್ದರು.

ಇದನ್ನೂ ಓದಿ:ಜಮ್ಮು ಕಾಶ್ಮೀರ: ಕಂದಕಕ್ಕೆ ಉರುಳಿ ಬಿದ್ದ ಕಾರು, 10 ಜನ ಸಾವು - Jammu Kashmir Accident

ABOUT THE AUTHOR

...view details