ಕರ್ನಾಟಕ

karnataka

ETV Bharat / bharat

ಹಳಿತಪ್ಪಿದ ಸಿಕಂದರಾಬಾದ್–ಶಾಲಿಮರ್ ಎಕ್ಸ್‌ಪ್ರೆಸ್‌ನ 3 ಬೋಗಿಗಳು - TRAIN DERAIL

ಸಿಕಂದರಾಬಾದ್-ಶಾಲಿಮಾರ್ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್‌ ಹಳಿ ತಪ್ಪಿರುವ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ.

West Bengal: 3 coaches of Secunderabad-Shalimar SF Express derail near Nalpur station, no casualties
ಹಳಿತಪ್ಪಿದ ಸಿಕಂದರಾಬಾದ್–ಶಾಲಿಮರ್ ಎಕ್ಸ್‌ಪ್ರೆಸ್‌ನ 3 ಬೋಗಿಗಳು (ANI)

By ANI

Published : Nov 9, 2024, 9:39 AM IST

ಕೋಲ್ಕತ್ತಾ (ಪಶ್ಚಿಮ ಬಂಗಾಳ):ಸಿಕಂದರಾಬಾದ್-ಶಾಲಿಮಾರ್ ಸೂಪರ್‌ಫಾಸ್ಟ್‌ ಎಕ್ಸ್‌ಪ್ರೆಸ್​ನ (ರೈಲು ಸಂಖ್ಯೆ 22850) ಕೆಲವು ಬೋಗಿಗಳು ಪಶ್ಚಿಮ ಬಂಗಾಳದ ಹೌರಾದ ನಲ್ಪುರ್ ನಿಲ್ದಾಣದ ಬಳಿ ಶನಿವಾರ ಬೆಳಗ್ಗೆ ಹಳಿ ತಪ್ಪಿವೆ.

ಕೋಲ್ಕತ್ತದಿಂದ 40 ಕಿಲೋ ಮೀಟರ್​ ದೂರದಲ್ಲಿರುವ ನಲ್‌ಪುರದಲ್ಲಿ ಸಾಪ್ತಾಹಿಕ ವಿಶೇಷ ರೈಲು ಹಳಿತಪ್ಪಿದೆ. ಅದೃಷ್ಟವಶಾತ್‌ ಘಟನೆಯಲ್ಲಿ ಈವರೆಗೆ ಯಾವುದೇ ಸಾವು–ನೋವಿನ ವರದಿಯಾಗಿಲ್ಲ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ ಎಂದು ಆಗ್ನೇಯ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ಹಳಿ ತಪ್ಪಿದ ಬೋಗಿಗಳಲ್ಲಿ ಪಾರ್ಸೆಲ್ ವ್ಯಾನ್ (ಪಾರ್ಸೆಲ್‌ಗಳನ್ನು ಸಾಗಿಸುವ ಬೋಗಿ) ಕೂಡ ಸೇರಿದೆ. ರೈಲು ಸಂಖ್ಯೆ 22850 ಸಿಕಂದರಾಬಾದ್‌-ಶಾಲಿಮರ್‌ ಸಾಪ್ತಾಹಿಕ ಎಕ್ಸ್‌ಪ್ರೆಸ್‌ ಖರಗಪುರ ವಲಯದ ನಲ್‌ಪುರ ನಿಲ್ದಾಣದ ಮೂಲಕ ಹಾದು ಹೋಗುತ್ತಿದ್ದಾಗ ಕೋಚ್‌ಗಳು ಹಳಿತಪ್ಪಿವೆ ಎಂದು ಅವರು ಹೇಳಿದ್ದಾರೆ.

ಹಳಿತಪ್ಪಿದ ಸಿಕಂದರಾಬಾದ್–ಶಾಲಿಮರ್ ಎಕ್ಸ್‌ಪ್ರೆಸ್‌ನ 3 ಬೋಗಿಗಳು (ANI)

ಘಟನೆಯ ಮಾಹಿತಿ ಬಂದ ಕೂಡಲೇ, ಸಂತ್ರಗಚಿ ಹಾಗೂ ಖರಗ‍‍ಪುರದಿಂದ ಅಪಘಾತ ‍ಪರಿಹಾರ ರೈಲು ಹಾಗೂ ವೈದ್ಯಕೀಯ ನೆರವು ರೈಲನ್ನು ಕೂಡಲೇ ಕಳುಹಿಸಲಾಗಿದೆ. ಪ್ರಯಾಣಿಕರ ಸಹಾಯಕ್ಕೆ ಬಸ್‌ಗಳ ವ್ಯವಸ್ಥೆಯನ್ನೂ ಮಾಡಲಾಗಿದೆ. ರೈಲಿನ ವೇಗ ಕಡಿಮೆ ಇದ್ದ ಕಾರಣ ಭಾರೀ ಅನಾಹುತ ತಪ್ಪಿದೆ. ಅಪಘಾತಕ್ಕೆ ಕಾರಣ ಏನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ:ಮೈಸೂರು - ದರ್ಬಾಂಗ್​ ಎಕ್ಸ್‌ಪ್ರೆಸ್‌- ಗೂಡ್ಸ್ ರೈಲು ಅಪಘಾತ; ಹಲವು ರೈಲುಗಳ ಮಾರ್ಗ ಬದಲು

ABOUT THE AUTHOR

...view details