ಕರ್ನಾಟಕ

karnataka

ETV Bharat / bharat

ವಿಷು ಬಂಪರ್ 2024: ಅಲಪ್ಪುಳದ ವ್ಯಕ್ತಿಗೆ ಒಲಿದ ₹12 ಕೋಟಿ ಬಂಪರ್​ ಲಾಟರಿ, ರಾತ್ರೋರಾತ್ರಿ ಕುಬೇರ - Vishu Bumper - VISHU BUMPER

ಕೇರಳದ ಬಂಪರ್​ ಲಾಟರಿಯಲ್ಲಿ ವ್ಯಕ್ತಿಯೊಬ್ಬ ಒಂದೇ ದಿನದಲ್ಲಿ ಸಿರಿವಂತನಾಗಿದ್ದಾನೆ. 2024ರ ಸಾಲಿನ ಲಾಟರಿ ಫಲಿತಾಂಶ ಹೀಗಿದೆ.

ವಿಷು ಬಂಪರ್ ಲಾಟರಿ
ವಿಷು ಬಂಪರ್ ಲಾಟರಿ (ETV Bharat)

By ETV Bharat Karnataka Team

Published : May 29, 2024, 6:36 PM IST

ತಿರುವನಂತಪುರಂ (ಕೇರಳ):ಕೇರಳ ಸರ್ಕಾರದ ಅಧೀನದಲ್ಲಿ ನಡೆಯುವ ಲಾಟರಿಯಲ್ಲಿ ಅಲಪ್ಪುಳದ ವ್ಯಕ್ತಿಯೊಬ್ಬರಿಗೆ ಲಕ್ಷ್ಮೀಕಟಾಕ್ಷವಾಗಿದೆ. 2024 ರ ಸಾಲಿನ ವಿಷು ಬಂಪರ್​ ಲಾಟರಿಯಲ್ಲಿ 12 ಕೋಟಿ ರೂಪಾಯಿ ಹಣ ಬಂದಿದೆ. ಒಂದೇ ದಿನದಲ್ಲಿ ಆತ ಕುಬೇರನಾಗಿದ್ದಾನೆ.

ಅಲಪ್ಪುಳದ ಅನಿಲ್ ಕುಮಾರ್ ಎಂಬ ಲಾಟರಿ ಏಜೆಂಟ್ ಈ ಟಿಕೆಟ್​ಗಳನ್ನು ಮಾರಾಟ ಮಾಡಿದ್ದಾನೆ. ಒಟ್ಟು 42 ಲಕ್ಷ ಟಿಕೆಟ್‌ಗಳನ್ನು ಮುದ್ರಿಸಲಾಗಿದ್ದು, ಇದುವರೆಗೆ 41,84,893 ಟಿಕೆಟ್‌ಗಳು ಮಾರಾಟವಾಗಿವೆ. ಇಂದು ಲಾಟರಿ ಫಲಿತಾಂಶ ಪ್ರಕಟಿಸಲಾಗಿದೆ. ಇದರಲ್ಲಿ ಮೊದಲ ಬಹುಮಾನದ ಟಿಕೆಟ್ ಅಲಪ್ಪುಳ ಜಿಲ್ಲೆಯ ವ್ಯಕ್ತಿ ಖರೀದಿಸಿದ್ದ.

ಬಂಪರ್ ಲಾಟರಿಯಲ್ಲಿ ದ್ವಿತೀಯ ಬಹುಮಾನವಾಗಿ 6 ಜನರಿಗೆ ತಲಾ 1 ಕೋಟಿ ರೂಪಾಯಿ, ತೃತೀಯ ಬಹುಮಾನವಾಗಿ 6 ಟಿಕೆಟ್​ಗಳಿಗೆ ತಲಾ 10 ಲಕ್ಷ ರೂಪಾಯಿ, ನಾಲ್ಕನೇ ಬಹುಮಾನವಾಗಿ 6 ಜನರಿಗೆ 5 ಲಕ್ಷ ರೂ. ಲಾಟರಿ ಹೊಡೆದಿದೆ.

ಇನ್ನೂ, ಐದರಿಂದ ಒಂಬತ್ತನೇ ಕ್ರಮಾಂಕದವರೆಗೆ ಕ್ರಮವಾಗಿ 5 ಸಾವಿರ, 2 ಸಾವಿರ, 1 ಸಾವಿರ, 500, 300 ಲಾಟರಿ ಬಂದಿದೆ ಎಂದು ಫಲಿತಾಂಶ ಪ್ರಕಟವಾದ ಅಧಿಕೃತ ವೆಬ್‌ಸೈಟ್ www.statelottery.kerala.gov.in ನಲ್ಲಿ ಮಾಹಿತಿ ಲಭ್ಯವಿದೆ.

20 ಕೋಟಿ ಲಾಟರಿ:ಇದಕ್ಕೂ ಮೊದಲುಕ್ರಿಸ್​ಮಸ್​ ​ಮತ್ತು ಹೊಸ ವರ್ಷದ ಬಂಪರ್ ಲಾಟರಿಯ ವೇಳೆ ತಿರುವನಂತಪುರಂದ ನಿವಾಸಿ ದುರೈರಾಜ್​ ಎಂಬಾತನಿಗೆ ಮೊದಲ ಬಹುಮಾನವಾಗಿ 20 ಕೋಟಿ ರೂಪಾಯಿ ಲಾಟರಿ ಬಂದಿತ್ತು. ಈ ಟಿಕೆಟ್​ ಅನ್ನು ಆತ ತಿರುವನಂತಪುರನ ಈಸ್ಟ್​ ಫೋರ್ಟ್​​​ ಲಕ್ಷ್ಮಿ ಲಕ್ಕಿ ಸೆಂಟರ್​​ನಲ್ಲಿ ಖರೀದಿ ಮಾಡಿದ್ದ. ದುರೈರಾಜ್​ ಪಲ್ಲಕ್ಕಡ್​ನ ಸ್ಥಳೀಯ ಶಹಜಹಾನ್​ ಎಂಬ ಏಜೆಂಟರಿಂದ ಟಿಕೆಟ್​ ಪಡೆದಿದ್ದ. ಆದರೆ, ಇಷ್ಟು ದೊಡ್ಡ ಮೊತ್ತದ ಬಹುಮಾನ ಗೆದ್ದ ಆ ಅದೃಷ್ಟಶಾಲಿ ನಾಪತ್ತೆಯಾಗಿದ್ದಾನೆ. ಎರಡನೇ ಬಹುಮಾನ ಒಂದು ಕೋಟಿ ರೂಪಾಯಿ ಆಗಿದ್ದು, 20 ಅದೃಷ್ಟಶಾಲಿಗಳು ತಮ್ಮದಾಗಿಸಿಕೊಂಡಿದ್ದಾರೆ.

ಭಾರಿ ಮೊತ್ತದ ಬಂಪರ್‌ ಲಾಟರಿ ಇದಾಗಿದ್ದು, ದೊಡ್ಡ ಮಟ್ಟದಲ್ಲಿ ಟಿಕೆಟ್​ ಮಾರಾಟವಾಗಿತ್ತು. ಈ ಮೂಲಕ ಕಳೆದ ವರ್ಷದ ದಾಖಲೆಯೂ ಮುರಿದಿತ್ತು. ರಾಜ್ಯದ ಇತರ ಲಾಟರಿಗಳಿಗೆ ಹೋಲಿಸಿದರೆ, ರಾಜ್ಯ ಸರ್ಕಾರದಿಂದಲೇ ಸಂಪೂರ್ಣವಾಗಿ ಈ ಲಾಟರಿ ಪ್ರಕ್ರಿಯೆಯನ್ನು ನಿರ್ವಹಿಸಲಾಗುತ್ತಿದೆ. ಟಿಕೆಟ್​ ಪ್ರಿಂಟ್​ ಮಾಡುವುದರಿಂದ ಡ್ರಾವರೆಗೆ ಎಲ್ಲಾ ಪ್ರಕ್ರಿಯೆಯಲ್ಲೂ ಪಾರದರ್ಶಕತೆ ಕಾಯ್ದುಕೊಳ್ಳಲಾಗಿದೆ ಎಂದು ಕೇರಳ ಲಾಟರಿ ನಿರ್ದೇಶನಾಲಯ ನಿರ್ದೇಶಕ ಐಆರ್​ಎಸ್ ಅಧಿಕಾರಿ ಅಬ್ರಹಾಂ ರೆನ್​ ತಿಳಿಸಿದ್ದಾರೆ.

ಇದನ್ನೂ ಓದಿ:ದಕ್ಷಿಣ ಕನ್ನಡದ ಗಾರೆ ಕೆಲಸಗಾರನಿಗೆ ಒಲಿದ ಅದೃಷ್ಟ: ಕೇರಳ ಲಾಟರಿಯಲ್ಲಿ 50 ಲಕ್ಷ ರೂ ಬಹುಮಾನ

ABOUT THE AUTHOR

...view details