ಭೋಪಾಲ್, ಮಧ್ಯಪ್ರದೇಶ: ಉತ್ತರ ಪ್ರದೇಶ, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರದ ಮೂರು ರಾಜ್ಯಗಳಿಗೆ ಭಾರತೀಯ ರೈಲ್ವೆ ದೊಡ್ಡ ಕೊಡುಗೆಯನ್ನು ನೀಡಲು ಸಜ್ಜಾಗಿದೆ. ವಂದೇ ಭಾರತ್ನ ಸ್ಲೀಪರ್ ಕೋಚ್ ರೈಲು ಪ್ರಾರಂಭಿಸಲು ನಿರ್ಧರಿಸಿದ್ದು, ಈ ಬಗ್ಗೆ ಶೀಘ್ರದಲ್ಲೇ ಅಂತಿಮ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಗಳಿವೆ. ಉತ್ತರ ಪ್ರದೇಶದ ಬರೇಲಿ ಮತ್ತು ಮುಂಬೈ ನಡುವೆ ಈ ರೈಲು ಓಡಲಿದೆ ಎಂಬ ಮಾಹಿತಿ ರೈಲ್ವೆ ಇಲಾಖೆ ಮೂಲಗಳಿಂದ ತಿಳಿದು ಬಂದಿದೆ. ದೊಡ್ಡ ವಿಷಯ ಎಂದರೆ ಮಧ್ಯಪ್ರದೇಶದಲ್ಲಿ ಈ ರೈಲು ಐದು ಕಡೆ ನಿಲುಗಡೆ ಆಗಲಿದೆ. ಗ್ವಾಲಿಯರ್ ಕೂಡಾ ಈ ಲಿಸ್ಟ್ನಲ್ಲಿದೆ. ಈ ರೈಲು ಪ್ರತಿದಿನ ಸಂಚರಿಸಲಿದ್ದು, ರೈಲ್ವೆ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ.
ಬರೇಲಿಯಿಂದ ಮುಂಬೈಗೆ ಓಡಲಿದೆ ಸ್ಲೀಪರ್ ವಂದೇ ಭಾರತ್:ದೇಶದ ಅತ್ಯಂತ ವೇಗದ ರೈಲುಗಳಲ್ಲಿ ಒಂದಾಗಿರುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ಪ್ರಸ್ತುತ ಈ ರೈಲಿನಲ್ಲಿ ಸ್ಪೀಪರ್ ಕ್ಲಾಸ್ ಇರಲಿಲ್ಲ. ಇದೀಗ ಪ್ರಯಾಣಿಕರ ಆಶಯದಂತೆ ಸ್ಪೀಪರ್ ಕ್ಲಾಸ್ ವಂದೇ ಭಾರತ ಹಳಿಗೆ ಇಳಿಯಲಿದೆ. ಸುದೀರ್ಘ ಕಾಯುವಿಕೆಯ ನಂತರ ವಂದೇ ಭಾರತ್ ಸ್ಲೀಪರ್ ರೈಲಿನ ಕಾರ್ಯಾಚರಣೆ ಆರಂಭಗೊಳ್ಳಲು ದಿನಗಣನೆ ಆರಂಭವಾಗಿದೆ. ಸ್ಲೀಪರ್ ವಂದೇ ಭಾರತ್ ಎಕ್ಸ್‌ಪ್ರೆಸ್ ಶೀಘ್ರದಲ್ಲೇ ಬರೇಲಿಯಿಂದ ಮುಂಬೈಗೆ ಪ್ರಯಾಣಿಸುವ ಸಾಧ್ಯತೆ ಇದೆ. ರೈಲ್ವೆ ಮಂಡಳಿಯು ಈ ರೈಲಿನ ಹಲವು ಮಾರ್ಗಗಳನ್ನು ಅಂತಿಮಗೊಳಿಸುವಲ್ಲಿ ನಿರತವಾಗಿದೆ ಮತ್ತು ಇದು ಮಧ್ಯಪ್ರದೇಶದ ಅನೇಕ ನಿಲ್ದಾಣಗಳಲ್ಲಿ ನಿಲುಗಡೆ ಆಗಲಿದೆ ಎಂದು ತಿಳಿದು ಬಂದಿದೆ.
ರೈಲ್ವೆ ಮಂಡಳಿಯ ಅನುಮೋದನೆಯ ನಂತರ, ಮಧ್ಯಪ್ರದೇಶದ 5 ರೈಲು ನಿಲ್ದಾಣಗಳನ್ನು ಬರೇಲಿ to ಮುಂಬೈ ಸ್ಲೀಪರ್ ವಂದೇ ಭಾರತ್ ರೈಲು ಮಾರ್ಗದಲ್ಲಿ ಸೇರಿಸಲಾಗಿದೆ. ಉತ್ತರ ಪ್ರದೇಶದ ಬರೇಲಿಯಿಂದ ಪ್ರಯಾಣ ಪ್ರಾರಂಭಿಸುವ ಈ ರೈಲು ಜಲ್ಗಾಂವ್, ಮನ್ಮಾಡ್‌ನಿಂದ ಚಂದೌಸಿ, ಅಲಿಗಢ, ಆಗ್ರಾ, ಗ್ವಾಲಿಯರ್, ಝಾನ್ಸಿ, ಬಿನಾ, ಭೋಪಾಲ್, ಇಟಾರ್ಸಿ, ಖಾಂಡ್ವಾ ಮೂಲಕ ಮುಂಬೈಗೆ ಪ್ರಯಾಣಿಸಬಹುದು. ಸಾರ್ವಜನಿಕ ವಲಯದಲ್ಲಿ ಹೊರಬರುತ್ತಿರುವ ಮಾಹಿತಿಯ ಪ್ರಕಾರ, ಗ್ವಾಲಿಯರ್, ಬಿನಾ, ಭೋಪಾಲ್, ಇಟಾರ್ಸಿ, ಖಾಂಡ್ವಾ ಮಾರ್ಗಗಳಲ್ಲಿ ಸ್ಪೀಪರ್ ವಂದೇ ಭಾರತ್ ರೈಲು ನಿಲುಗಡೆ ಆಗಲಿದೆ ಎನ್ನಲಾಗಿದೆ.
1600 ಕಿಲೋಮೀಟರ್ ದೂರ ಕ್ರಮಿಸುವ ಸ್ಲೀಪರ್ ಒಂದೇ ಭಾರತ್:ಇಲ್ಲಿಯವರೆಗೆ ಬರೇಲಿ ಮತ್ತು ಮುಂಬೈ ನಡುವೆ ಕೇವಲ ಒಂದು ರೈಲು ಮಾತ್ರ ಕಾರ್ಯನಿರ್ವಹಿಸುತ್ತಿದೆ. ದಾದರ್ ಬರೇಲಿ ಎಕ್ಸ್‌ಪ್ರೆಸ್, ಬರೇಲಿಯಿಂದ ಮುಂಬೈಗೆ ಪ್ರಯಾಣಿಸುವ ಪ್ರಯಾಣಿಕರಿಗೆ ಇರುವ ಏಕೈಕ ವಾರದ ರೈಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಶೀಘ್ರದಲ್ಲೇ ಸ್ಲೀಪರ್ ವಂದೇ ಭಾರತ್ ರೈಲು ಓಡುವ ಸುದ್ದಿ ಪ್ರಯಾಣಿಕರ ಖುಷಿಗೆ ಕಾರಣವಾಗಿದೆ. ಈ ರೈಲು ಪ್ರತಿದಿನ ಸಂಚರಿಸಲಿದ್ದು, ಸರಿಸುಮಾರು 1600 ಕಿಲೋಮೀಟರ್ ದೂರ ಕ್ರಮಿಸಲಿದೆ. ಹೊಸ ಸ್ಲೀಪರ್ ವಂದೇ ಭಾರತ್ ರೈಲು ಕಡಿಮೆ ಅವಧಿಯಲ್ಲಿ ನಿಗದಿತ ಸ್ಥಳ ತಲುಪುವುದರಿಂದ ಪ್ರಯಾಣಿಕರಿಗೆ ಅನುಕೂಲ ಆಗಲಿದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಗ್ವಾಲಿಯರ್, ಝಾನ್ಸಿಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಮನೋಜ್ ಕುಮಾರ್ ಮಾತನಾಡಿದ್ದು, “ರೈಲ್ವೆಯು ವಂದೇ ಭಾರತ್ ಸ್ಲೀಪರ್ ರೈಲು ಹಳಿಗೆ ಇಳಿಸುವ ಸಂಬಂಧ ವೇಗವಾಗಿ ಕೆಲಸ ಮಾಡುತ್ತಿದೆ, ನಮ್ಮ ಕೆಲವು ರೇಕ್‌ಗಳು ಬೆಂಗಳೂರಿನಲ್ಲಿ ಸಿದ್ಧವಾಗಿವೆ ಮತ್ತು ಶೀಘ್ರದಲ್ಲೇ ರೈಲ್ವೆ ಮಂಡಳಿಯು ಮಾರ್ಗದ ಬಗ್ಗೆ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳುತ್ತದೆ‘‘ ಎಂದು ಹೇಳಿದ್ದಾರೆ
ಇದನ್ನು ಓದಿ:ಈಶಾನ್ಯ ರಾಜ್ಯಗಳಲ್ಲಿ 4 ತಿಂಗಳಲ್ಲಿ 196 ಭೂಕುಸಿತ ದುರಂತಗಳು ದಾಖಲು: ಕೇಂದ್ರ ಸರ್ಕಾರ - landslides in Northeast states