ETV Bharat / bharat

ರೈತನ ಮದುವೆ ಮೆರವಣಿಗೆಗೆ ಬಾರದ ಹೆಲಿಕಾಪ್ಟರ್: ₹7 ಲಕ್ಷ ಪರಿಹಾರ ಕೊಡುವಂತೆ ಸಂಸ್ಥೆಗೆ ಗ್ರಾಹಕರ ವೇದಿಕೆ ಆದೇಶ - 7 LAKH FINE ON AVIATION COMPANY

ಮದುವೆ ಮೆರವಣಿಗೆ ಸಮಯಕ್ಕೆ ಹೆಲಿಕಾಪ್ಟರ್ ಕಳುಹಿಸಲು ವಿಫಲವಾದ ಏವಿಯೇಷನ್ ಸಂಸ್ಥೆ, ದೂರುದಾರರಿಗೆ 7 ಲಕ್ಷ ಪರಿಹಾರ ಪಾವತಿಸಬೇಕೆಂದು ಮದ್ಯಪ್ರದೇಶದ ಗ್ರಾಹಕರ ವೇದಿಕೆ ಆದೇಶಿಸಿದೆ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ (ETV Bharat)
author img

By ETV Bharat Karnataka Team

Published : Jan 4, 2025, 7:29 PM IST

ಭೋಪಾಲ್(ಮದ್ಯಪ್ರದೇಶ): ಸಮಯಕ್ಕೆ ಸರಿಯಾಗಿ ಹೆಲಿಕಾಪ್ಟರ್ ಸೇವೆ ಒದಗಿಸದ ಏವಿಯೇಷನ್ ಸಂಸ್ಥೆ, ದೂರುದಾರ ರೈತನಿಗೆ 7 ಲಕ್ಷ ರೂ ಪರಿಹಾರ ನೀಡಬೇಕೆಂದು ಗ್ರಾಹಕರ ವೇದಿಕೆ ಆದೇಶಿಸಿದೆ.

ನರ್ಮದಾಪುರಂನ ರೈತ ಗಿರ್ವಾರ್ ಸಿಂಗ್ ಪಟೇಲ್ 2019 ರಲ್ಲಿ ವಿವಾಹ ನಡೆದಿತ್ತು. ಅವರು 2019 ಮೇ ತಿಂಗಳಿನಲ್ಲಿ ಎರಡು ದಿನಗಳ ಮಟ್ಟಿಗೆ ಹೆಲಿಕಾಪ್ಟರ್ ಬುಕ್ ಮಾಡಿದ್ದರು. ಇದಕ್ಕಾಗಿ ಸಂಸ್ಥೆ ಮುಂಗಡವಾಗಿ ಸ್ವಲ್ಷ ಹಣವನ್ನೂ ಪಾವತಿ ಮಾಡಿದ್ದರು. ಹೆಲಿಕಾಪ್ಟರ್ ಬಳಕೆಗೆ ಸಂಬಂಧಪಟ್ಟಂತೆ ಅನುಮತಿ ಪಡೆಯಲು ಸುಮಾರು ಒಂದು ಲಕ್ಷ ರೂಪಾಯಿ ಖರ್ಚು ಮಾಡಿದ್ದರು. ಆದರೆ, ಏವಿಯೇಷನ್ ​​ಸಂಸ್ಥೆ ಹೆಲಿಕಾಪ್ಟರ್ ಮದುವೆ ಮೆರವಣಿಗೆಯ ಸಮಯಕ್ಕೆ ತಲುಪಿಸುವಲ್ಲಿ ವಿಫಲವಾಗಿತ್ತು. ಮೆರವಣಿಗೆ ಮುಗಿದ ಮರುದಿನ ಹೆಲಿಕಾಪ್ಟರ್ ತಲುಪಿತ್ತು.

ಸಂಬಂಧಿಕರ ಎದುರು ರೈತನ ಗೌರವಕ್ಕೆ ಧಕ್ಕೆ: ನಿಗದಿತ ಸಮಯಕ್ಕೆ ಹೆಲಿಕಾಪ್ಟರ್ ಬಾರದ ಕಾರಣ ವರನ ಕಡೆಯವರು ಮದುವೆಯ ಮೆರವಣಿಗೆಯನ್ನು ಕಾರಿನಲ್ಲಿ ಮಾಡಿದ್ದರು. ಈ ವಿಚಾರವಾಗಿ ಸಂಬಂಧಿಕರು ಹಾಗೂ ವಧುವಿನ ಕಡೆಯವರ ಮುಂದೆ ರೈತ ಗಿರ್ವಾರ್ ಸಿಂಗ್ ಅವರ ಇಮೇಜ್​ ಡ್ಯಾಮೇಜ್​ ಆಗಿತ್ತು.

ಗ್ರಾಹಕರ ವೇದಿಕೆ ಮೆಟ್ಟಿಲೇರಿದ ರೈತ: ಇದರಿಂದ ರೈತ ಏವಿಯೇಷನ್ ​​ಸಂಸ್ಥೆ ವಿರುದ್ಧ ನರಸಿಂಗ್‌ಪುರ ಜಿಲ್ಲಾ ಗ್ರಾಹಕರ ವೇದಿಕೆಗೆ ದೂರು ನೀಡಿದ್ದರು. ದೂರುದಾರರ ಪರವಾಗಿ ತೀರ್ಪು ನೀಡಿದ್ದ ವೇದಿಕೆ, 4 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ವಿಮಾನಯಾನ ಸಂಸ್ಥೆಗೆ ಆದೇಶಿಸಿತ್ತು. ಆದರೆ ಗಿರ್ವಾರ್ ಸಿಂಗ್ ಈ ಪರಿಹಾರ ಮೊತ್ತದಿಂದ ತೃಪ್ತರಾಗಲಿಲ್ಲ. ಹೀಗಾಗಿ ಅವರು ರಾಜ್ಯ ಗ್ರಾಹಕರ ವೇದಿಕೆಗೆ ಮೇಲ್ಮನವಿ ಸಲ್ಲಿಸಿದ್ದರು.

7 ಲಕ್ಷ ಪರಿಹಾರ ನೀಡುವಂತೆ ರಾಜ್ಯ ಗ್ರಾಹಕರ ವೇದಿಕೆ ಆದೇಶ: ಈ ಸಂಬಂಧ ವಿಚಾರಣೆ ನಡೆಸಿದ ರಾಜ್ಯ ಗ್ರಾಹಕರ ವೇದಿಕೆ, ಸಂಸ್ಥೆ ಹೆಲಿಕಾಪ್ಟರ್ ಅನ್ನು ನಿಗದಿತ ಸಮಯಕ್ಕೆ ಕಳುಹಿಸುವಲ್ಲಿ ಸಾಧ್ಯವಾಗದಿದ್ದಕ್ಕೆ ಹವಾಮಾನ ಪರಿಸ್ಥಿತಿ ಕಾರಣ ಎಂದು ಹೇಳಿದೆ. ಆದರೆ, ಈ ಘಟನೆಯಿಂದ ಸಮಾಜದಲ್ಲಿ ದೂರುದಾರನ ಗೌರವಕ್ಕೆ ಧಕ್ಕೆಯಾಗಿದೆ. ದೂರುದಾರರು ಹೆಲಿಕಾಪ್ಟರ್‌ ಬಳಕೆಗೆ ಎಲ್ಲಾ ಅನುಮತಿಗಳನ್ನು ತೆಗೆದುಕೊಂಡಿದ್ದರು ಮತ್ತು ವಿಮಾನಯಾನ ಸಂಸ್ಥೆಗೆ ಮುಂಗಡವಾಗಿ ಹಣ ಪಾವತಿಯನ್ನೂ ಮಾಡಿದ್ದರು. ಆದರೆ, ಸಮಯಕ್ಕೆ ಸರಿಯಾಗಿ ಸೇವೆ ನೀಡಲು ಸಂಸ್ಥೆ ವಿಫಲವಾಗಿದೆ. ಹೀಗಾಗಿ ದೂರುದಾರರ ವೆಚ್ಚ ಸೇರಿದಂತೆ 7 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ವಿಮಾನಯಾನ ಸಂಸ್ಥೆಗೆ ಆದೇಶಿಸಿದೆ.

ಇದನ್ನೂ ಓದಿ: 32 ವರ್ಷದಿಂದ ಸ್ನಾನ ಮಾಡದ ಚೋಟು ಬಾಬಾ; ತಲೆ ಮೇಲೆ ಧನವಾಲೆ ಬಾಬಾರಿಂದ ಬಾರ್ಲಿ ಕೊಯ್ಲು!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.