ಹೈದರಾಬಾದ್: ಯಾವುದೇ ಶುಭ ಕೆಲಸವನ್ನು ಸಿಹಿಯಿಂದ ಆರಂಭಿಸಬೇಕು ಎಂಬ ಮಾತು ಸಾಮಾನ್ಯ. ಇದೇ ಕಾರಣಕ್ಕೆ ಪ್ರತಿ ಕಾರ್ಯಕ್ಕೆ ಮುನ್ನ ಬಾಯಿ ಸಿಹಿಯಾಗುವುದು, ಅಂತಹದ್ದರಲ್ಲಿ ಜೀವನ ಪ್ರಮುಖ ಘಟ್ಟದಲ್ಲಿ ಒಂದಾಗಿರುವ ಪ್ರೀತಿಯ ವಿಚಾರದಲ್ಲೂ ಚಾಕೋಲೆಟ್ ಜೀವನದ ಸಿಹಿ ಹೆಚ್ಚಿಸಲು ಸಹಾಯ ಮಾಡುತ್ತದೆ. ಇಂತಹ ಸಿಹಿಯಾದ ಚಾಕೋಲೆಟ್ಗೆ ಪ್ರೀತಿಯ ವಾರದಲ್ಲಿ ಒಂದು ದಿನವನ್ನ ಮೀಸಲಿಡಲಾಗಿದೆ. ವ್ಯಾಲೆಂಟೈನ್ಸ್ ವಾರದ ಮೂರನೇ ದಿನ ಈ ಚಾಕೋಲೆಟ್ಗೆ ಮೀಸಲಾಗಿದೆ.
ಚಾಕೋಲೆಟ್ ಕೇವಲ ಬಾಯಿಯನ್ನು ಸಿಹಿ ಮಾಡುವುದಿಲ್ಲ. ಇದು ನಮ್ಮ ಎಲ್ಲಾ ಜ್ಞಾನೇಂದ್ರಿಗಳನ್ನು ಚುರುಕಾಗಿಸುತ್ತದೆ ಎಂಬುದು ಸಂಶೋಧನೆಯಿಂದ ಸಾಬೀತಾಗಿದೆ. ಮೂಡ್ ಬದಲಾಯಿಸಲುವಲ್ಲಿ ಚಾಕೋಲೆಟ್ ಪ್ರಮುಖವಾಗಿದೆ. ಚಿಕ್ಕವರಿಂದ ಹಿಡಿದು ದೊಡ್ಡವರವರೆಗೆ ಜಗತ್ತಿನೆಲ್ಲೆಡೆ ಇಷ್ಟಪಟ್ಟು ಈ ಸಿಹಿಯನ್ನು ಸವಿಯುವುದು ಸುಳ್ಳಲ್ಲ.
ವ್ಯಾಲೆಂಟೈನ್ಸ್ ಎಂದು ಕರೆಯಲಾದ ಸೆಂಟ್ ವ್ಯಾಲೆಂಟೈನ್ ಮತ್ತು ಮತ್ತೊಬ್ಬರು ಸೆಂಟ್ಗೆ ಗೌರವಿಸುವ ಉದ್ದೇಶದಿಂದ ಈ ದಿನ ಹುಟ್ಟಿಕೊಂಡಿದೆ. ವಿಕ್ಟೋರಿಯಾ ಕಾಲದಲ್ಲಿ ಉಡುಗೊರೆಯ ಪ್ರಮುಖ ವಸ್ತು ಎಂದರೆ ಅದು ಚಾಕೋಲೆಟ್ ಆಗಿತ್ತು. ಈ ಹಿನ್ನೆಲೆಯಲ್ಲಿ ಪ್ರೀತಿಯಲ್ಲಿರುವ ಹುಡುಗ ಅಥವಾ ಹುಡುಗಿ ಈ ಚಾಕೋಲೆಟ್ ಅನ್ನು ನೀಡುವ ಸಾಂಪ್ರದಾಯ ಆರಂಭವಾಯಿತು.
ಚಾಕೋಲೆಟ್ ಎಂಬುದು ಕೇವಲ ಬಾಯಿಚಪ್ಪರಿಸುವ ತಿನಿಸಲ್ಲ. ಇದು ಹಲವು ಆರೋಗ್ಯಕರ ಪ್ರಯೋಜನವನ್ನು ಹೊಂದಿದೆ. ಚಾಕೋಲೆಟ್ನ ನೈಸರ್ಗಿಕ ರಾಸಾಯನಿಕಗಳು ವ್ಯಕ್ತಿಯ ಮನಸ್ಥಿತಿ ಬದಲಾಯಿಸುವಲ್ಲಿ ಪ್ರಯೋಜನಕಾರಿಯಾಗಿದೆ ಎಂದು ಸಾಬೀತಾಗಿದೆ. ಚಾಕೋಲೆಟ್ನಲ್ಲಿರುವ ಟ್ರಿಪ್ಟೊಫಾನ್ ಮೆದುಳಿನಲ್ಲಿ ಎಂಡಾರ್ಫಿನ್ ಮಟ್ಟವನ್ನು ಹೆಚ್ಚಿಸುತ್ತದೆ. ಇದರಿಂದ ನಿಮಗೆ ಖುಷಿ ವ್ಯಕ್ತವಾಗುತ್ತದೆ. ನಿತ್ಯ ನಿಯಂತ್ರಣ ದರದಲ್ಲಿ ಚಾಕೋಲೆಟ್ ಸೇವನೆ ಮಾಡುವುದರಿಂದ ಹೃದಯ ಸಮಸ್ಯೆಗಳಿಂದ ಪಾರು ಮಾಡಬಹುದಾಗಿದೆ.