ಚಂದೌಲಿ, ಉತ್ತರಪ್ರದೇಶ: ಉತ್ತರ ಪ್ರದೇಶದಲ್ಲಿ ವಿಲಕ್ಷಣ ಘಟನೆಯೊಂದು ನಡೆದಿದೆ. ಊಟ ಬಡಿಸಲು ವಿಳಂಬ ಮಾಡಲಾಗಿದೆ ಎಂದು ಆರೋಪಿಸಿ ವರನೊಬ್ಬ ಮದುವೆ ಬೇಡ ಎಂದು ನಿರಾಕರಿಸಿದ್ದಾನೆ. ಈ ಬಗ್ಗೆ ನಡೆದ ಎಲ್ಲ ಸಂಧಾನಗಳು ವಿಫಲವಾಗಿದ್ದರಿಂದ, ವರ ಮರುದಿನ ಸಹೋದರ ಸಂಬಂಧಿಯೊಂದಿಗೆ ಮದುವೆಯಾದ ಘಟನೆ ನಡೆದಿದೆ.
ವರನ ಕಡೆಯವರು ಕ್ಷುಲ್ಲಕ ಕಾರಣಕ್ಕೆ ಜಗಳ ತೆಗೆದಿದ್ದರಿಂದ ವಧು ಮತ್ತು ಆಕೆಯ ಕುಟುಂಬದವರು ನ್ಯಾಯಕ್ಕಾಗಿ ಪೊಲೀಸರ ಮೊರೆ ಹೋಗಿದ್ದರು. ಮದುವೆ ಹಿನ್ನೆಲೆ ವಧುವಿನ ಕಡೆಯವರು ವರನ ಕುಟುಂಬಕ್ಕೆ 1.5 ಲಕ್ಷ ರೂ ನೀಡಿದ್ದರು ಎಂದು ಹೇಳಲಾಗಿದೆ. ಆದರೆ ಊಟಕ್ಕೆ ತಡ ಮಾಡಲಾಗಿದೆ ಎಂದು ವರ ಮದುವೆಗೆ ನಿರಾಕರಿಸಿ ಅಲ್ಲಿಂದ ಕಾಲ್ಕಿತ್ತಿದ್ದಾನೆ.
ವಧು ಹೇಳಿದ್ದೇನು?:ಮಾಧ್ಯಮಗಳ ಜತೆ ಮಾತನಾಡಿರುವ ವಧು, ‘‘ಏಳು ತಿಂಗಳ ಹಿಂದೆ ಮೆಹ್ತಾಬ್ ಎಂಬುವವನ ಜತೆ ತನ್ನ ಮದುವೆ ನಿಶ್ಚಯವಾಗಿತ್ತು. ಡಿಸೆಂಬರ್ 22 ರಂದು ಮದುವೆ ಮೆರವಣಿಗೆ ಹಮೀದ್‌ಪುರ ಗ್ರಾಮದ ನನ್ನ ಮನೆಗೆ ಆಗಮಿಸಿತ್ತು. ಮೆಹ್ತಾಬ್ ಮತ್ತು ಅವನ ಸಂಬಂಧಿಕರನ್ನು ಅದ್ದೂರಿಯಾಗಿಯೇ ಬರ ಮಾಡಿಕೊಂಡಿದ್ದೆವು. ನಾನು ಸಹ ನೂರಾರು ಕನಸುಗಳೊಂದಿಗೆ ಹೊಸ ಜೀವನಕ್ಕೆ ಅಡಿ ಇಡಲು ಬೆಳಗ್ಗೆಯಿಂದಲೇ ಸಿದ್ಧನಾಗಿದ್ದೆ. ವರ ಮತ್ತು ಅವನ ಮನೆಯವರು ಖುಷಿ ಖುಷಿಯಿಂದಲೇ ಸಮಾರಂಭದಲ್ಲಿ ಭಾಗಿಯಾಗಿದ್ದರು. ಆದರೆ, ಊಟ ಬಡಿಸುವುದು ತಡ ಮಾಡಲಾಗಿದೆ ಎಂದು ಆರೋಪಿಸಿ ಮದುವೆಗೆ ನಿರಾಕರಿಸಿದರು, ತನ್ನ ತಂದೆ ತಾಯಿಯನ್ನು ನಿಂದಿಸಿ ಜಗಳ ತೆಗೆದರು. ಹಲ್ಲೆಯನ್ನೂ ಮಾಡಿದರು, ಹೀಗಾಗಿ ನಾನು ನ್ಯಾಯಕ್ಕಾಗಿ ಪೊಲೀಸರನ್ನು ಸಂಪರ್ಕಿಸಿದೆ ಎಂದು ವಧು ಹೇಳಿದ್ದಾರೆ.
ಮದುವೆಯ ಅತಿಥಿಗಳು ಊಟಕ್ಕೆ ಕುಳಿತಿದ್ದರಿಂದ ಮೆಹ್ತಾಬ್‌ಗೆ ಊಟ ಬಡಿಸುವುದಕ್ಕೆ ತುಸು ವಿಳಂಬವಾಯಿತು. ಇದೇ ವಿಚಾರವಾಗಿ ಆತನ ಸ್ನೇಹಿತರು ಮಹ್ತಾಬ್ ಗೆ ತಮಾಷೆ ಮಾಡಿದ್ದಾರೆ. ಇದರಿಂದ ಕೋಪಗೊಂಡ ಆತ ಹಾಗೂ ಆತನ ಕುಟುಂಬಸ್ಥರು, ತಮ್ಮ ತಂದೆ -ತಾಯಿ ಜೊತೆ ವಾಗ್ವಾದಕ್ಕಿಳಿದರು. ಸಮಸ್ಯೆ ಬಗೆಹರಿಸಲು ಗ್ರಾಮದ ಹಿರಿಯರು ಮಧ್ಯಪ್ರವೇಶಿಸಿದರು. ಆದರೆ ಇದ್ಯಾವುದಕ್ಕೂ ಬಗ್ಗದ ಮೆಹ್ತಾಬ್, ಮಾಂಗಲ್ಯ ಕಟ್ಟಲು ನಿರಾಕರಿಸಿ ಮದುವೆ ಮಂಟಪದಿಂದ ತೆರಳಿದರು ಎಂದು ವಧು ಘಟನೆಯ ಬಗ್ಗೆ ವಿವರಿಸಿದ್ದಾಳೆ. ಇದರಿಂದ ವಧುವಿನ ಕುಟುಂಬ ಆಘಾತಕ್ಕೆ ಒಳಗಾಗಬೇಕಾಯಿತು. ಮೆಹ್ತಾಬ್ ಮರುದಿನ ತನ್ನ ಸೋದರಸಂಬಂಧಿಯೊಬ್ಬರನ್ನು ವಿವಾಹವಾಗಿದ್ದಾರೆ.