ಕರ್ನಾಟಕ

karnataka

ETV Bharat / bharat

ವಾರಾಣಸಿಗೆ ಹೊರಟ ಕಾರು ತೆಲಂಗಾಣದಲ್ಲಿ ಅಪಘಾತ: ಮೈಸೂರು ಮೂಲದ ಇಬ್ಬರು ಸಾವು - Mysore people death

ತೆಲಂಗಾಣದಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಮೈಸೂರು ಮೂಲದ ಇಬ್ಬರು ಅಸುನೀಗಿದ್ದಾರೆ.

car
ಕಾರು ಅಪಘಾತ

By ETV Bharat Karnataka Team

Published : Mar 18, 2024, 10:50 PM IST

ರಂಗಾರೆಡ್ಡಿ:ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಶಾದ್​​ನಗರ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಸೋಮವಾರ ಸಂಭವಿಸಿದ ಭೀಕರ ಅಪಘಾತದಲ್ಲಿ ಕರ್ನಾಟಕದ ಮೈಸೂರು ಮೂಲದ ಇಬ್ಬರು ಸಾವನ್ನಪ್ಪಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ನಿಯಂತ್ರಣ ತಪ್ಪಿದ ಮಾರುತಿ ಇಕೋ ವ್ಯಾನ್ ಮರಕ್ಕೆ ಡಿಕ್ಕಿ ಹೊಡೆದು ಅವಘಡ ಸಂಭವಿಸಿದೆ.

ಅಪಘಾತದಲ್ಲಿ ಕಾರಿನಲ್ಲಿದ್ದ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಗಂಭೀರವಾಗಿ ಗಾಯಗೊಂಡ ಇತರ ನಾಲ್ವರಲ್ಲಿ ಒಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಗಾಯಾಳುಗಳನ್ನು ಹೈದರಾಬಾದ್ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಮರಕ್ಕೆ ಡಿಕ್ಕಿ ಹೊಡೆದ ರಭಸಕ್ಕೆ ಕಾರು ನಜ್ಜುಗುಜ್ಜಾಗಿದೆ.

ಮೃತಪಟ್ಟವರನ್ನು ಮೈಸೂರು ಮೂಲದವರು ಎಂದು ಪೊಲೀಸರು ಗುರುತಿಸಿದ್ದಾರೆ. ಈ ಪೈಕಿ ಕೇಟರಿಂಗ್ ಉದ್ಯಮ ನಡೆಸುತ್ತಿರುವ ಎಸ್.ಕೆ. ರತ್ನಾಕರ್ (66) ಹಾಗೂ ಸಾಫ್ಟ್​​ವೇರ್ ಎಂಜಿನಿಯರ್ ಡಿ.ಎನ್. ನರಸಿಂಹ ಅಯ್ಯರ್ (47) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಡಿ. ವಿಶ್ವನಾಥಂ, ಶ್ರೀರಾಮ್, ರಘುರಾಮ್ ಮತ್ತು ಮದನ್ ಕುಮಾರ್ ಎಂಬುವರು ಗಂಭೀರ ಗಾಯಗೊಂಡಿದ್ದಾರೆ. ಮದನ್ ಕುಮಾರ್ ಸ್ಥಿತಿ ಚಿಂತಾಜನಕವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇವರೆಲ್ಲರೂ ಮೈಸೂರಿನಿಂದ ವಾರಾಣಸಿಗೆ ಹೋಗುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.

ಇದನ್ನೂ ಓದಿ:ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದ ಸಾಬರಮತಿ ಎಕ್ಸ್‌ಪ್ರೆಸ್: ಹಳಿತಪ್ಪಿದ ಇಂಜಿನ್​, 4 ಬೋಗಿಗಳು

ABOUT THE AUTHOR

...view details