ತಿರುಮಲ, ಆಂಧ್ರಪ್ರದೇಶ: ಮುಂಬೈನ ಯುನೋ ಫ್ಯಾಮಿಲಿ ಟ್ರಸ್ಟ್ ತಿರುಮಲ ತಿರುಪತಿ ದೇವಸ್ಥಾನ (ಟಿಟಿಡಿ)ಯ ಶ್ರೀ ವೆಂಕಟೇಶ್ವರ ಅನ್ನಪ್ರಸಾದ ಟ್ರಸ್ಟ್‌ಗೆ 11 ಕೋಟಿ ರೂ ದಾನ ನೀಡಿದೆ.
ಯುನೋ ಟ್ರಸ್ಟ್‌ನ ಪ್ರತಿನಿಧಿ ತುಷಾರ್ ಕುಮಾರ್, ಟಿಟಿಡಿ ಹೆಚ್ಚುವರಿ ಇಒ ವೆಂಕಯ್ಯ ಚೌಧರಿ ಅವರನ್ನು ಭೇಟಿಯಾಗಿ ದಾನದ ಹಣವನ್ನು ಡಿಮಾಂಡ್ ಡ್ರಾಫ್ಟ್ ಮೂಲಕ ಹಸ್ತಾಂತರಿಸಿದರು. ಉನೋ ಟ್ರಸ್ಟ್ ಅನ್ನಪ್ರಸಾದಮಂ ಕಾರ್ಯಕ್ರಮಕ್ಕೆ ಗಣನೀಯ ಬೆಂಬಲದ ಕೊಡುಗೆ ನೀಡುತ್ತದೆ. ತಿರುಪತಿ ತಿರುಮಲದ ದೇಗುಲದಲ್ಲಿ ನಿತ್ಯ ಸಾವಿರಾರು ಭಕ್ತರಿಗೆ ಉಚಿತ ಅನ್ನದಾನ ಸೇವೆ ನೀಡಲಾಗುತ್ತಿದ್ದು, ಈ ಸೇವೆಗೆ ಈ ಹಣ ಬಳಕೆಯಾಗಲಿದೆ ಎಂದರು.
ಈ ಕುರಿತು ಎಕ್ಸ್ ಜಾಲತಾಣದಲ್ಲಿ ಪ್ರಕಟಿಸಿರುವ ಟಿಟಿಡಿ, ಎಸ್ವಿಎಟಿಗೆ ಮುಂಬೈನ ಪ್ರಸಿದ್ ಯುನೊ ಫ್ಯಾಮಿಲಿ ಟ್ರಸ್ಟ್‌ನ ಶ್ರೀ ತುಷಾರ್ ಕುಮಾರ್ ಅವರು ಶ್ರೀ ವೆಂಕಟೇಶ್ವರ ಅನ್ನಪ್ರಸಾದ ಟ್ರಸ್ಟ್‌ಗೆ 11 ಕೋಟಿ ರೂ ದೇಣಿಗೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.