ಚೆನ್ನೈ: ರಾಜ್ಯಕ್ಕೆ ಹೂಡಿಕೆ ಆಕರ್ಷಣೆಗೆ ಅಮೆರಿಕ ಪ್ರವಾಸ ನಡೆಸಿದ್ದ ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ತವರಿಗೆ ಮರಳಿದ್ದಾರೆ. 14 ದಿನಗಳ ಸುದೀರ್ಘ ಪ್ರವಾಸದ ಬಳಿಕ ಮರಳಿದ ಅವರು, ರಾಜ್ಯಕ್ಕೆ 7,618 ಕೋಟಿ ಬಂಡವಾಳ ಹೂಡಿಕೆ ತರುವಲ್ಲಿ ಯಶಸ್ವಿಯಾಗಿದ್ದಾರೆ.
ರಾಜ್ಯಕ್ಕೆ ಮರಳಿದ ಅವರನ್ನು ರಾಜ್ಯ ಸಚಿವರು ಮತ್ತು ಅಧಿಕಾರಿಗಳು ಹಾಗೂ ಡಿಎಂಕೆ ಸದಸ್ಯರು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದರು. ಈ ವೇಳೆ ಮಾತನಾಡಿದ ಅವರು, ಭೇಟಿಯು ಯಶಸ್ವಿಯಾಗಿದ್ದು, ಜನರಿಗೆ ಉದ್ಯೋಗ ಮತ್ತು ಯುವಕರಿಗೆ ಕೌಶಲ್ಯ ತರಬೇತಿ ನೀಡಲು ತಮಿಳುನಾಡಿಗೆ ಹೂಡಿಕೆ ಭರವಸೆಯನ್ನು ಪೂರ್ಣಗೊಳಿಸಿದಾಗಿ ಮಾಧ್ಯಮಗಳಿಗೆ ತಿಳಿಸಿದರು.
ಫಾರ್ಚೂನ್ 500 ಸಂಸ್ಥೆ ಸೇರಿದಂತೆ ಪ್ರತಿಷ್ಠಿತ ಜಾಗತಿಕ ಕಂಪನಿಗಳಿಂದ ಹೂಡಿಕೆ ಆಕರ್ಷಿಸುವಲ್ಲಿ ಯಶಸ್ವಿಯಾಗಿದ್ದೇವೆ. 14 ದಿನಗಳ ಸಾಗರೋತ್ತರ ಪ್ರವಾಸವು ರಾಜ್ಯಕ್ಕೆ ಪ್ರಯೋಜನಕಾರಿಯಾಗಿದ್ದು, 7,618 ಕೋಟಿಯ 19 ಒಪ್ಪಂದಗಳಿಗೆ ಸಹಿ ಹಾಕಲಾಯಿತು ಎಂದರು.
ಸ್ಯಾನ್ಫ್ರಾನ್ಸಿಸ್ಕೋದಿಂದ 8 ಕಂಪನಿ ಮತ್ತು ಶಿಕಾಗೋದ 8 ಕಪನಿಗಳು ಮಧುರೈ, ತಿರುಚಿರಪಳ್ಳಿ, ಕೊಯಿಮತ್ತೂರು, ಕೃಷ್ಣಗಿರಿ, ಚೆನ್ನೈ, ಚೆಂಗಲ್ಪಟ್ಟು, ಕಂಚೀಪುರಂನಲ್ಲಿ ತಮ್ಮ ಘಟಕಗಳ ಸ್ಥಾಪನೆ ಜೊತೆಗೆ 11,516 ಜನರಿಗೆ ಉದ್ಯೋಗಾವಕಾಶದ ಭರವಸೆ ನೀಡಿದ್ದಾರೆ.