ಕರ್ನಾಟಕ

karnataka

ETV Bharat / bharat

ನಿಲ್ಲದ ಬಾಂಬ್​ ಬೆದರಿಕೆ ಸಂದೇಶ; ಫ್ರಾಂಕ್​ಫರ್ಟ್​ಗೆ ವಿಮಾನ ಮಾರ್ಗ ಬದಲಾವಣೆ - VISTARA FLIGHTS RECEIVE THREATS

ವಿಸ್ತಾರ ಏರ್​ಲೈನ್ಸ್​​​ನ ಮೂರು ವಿಮಾನಗಳಿಗೆ ಬೆದರಿಕೆ ಕರೆ ಬಂದಿದ್ದು, ಲಂಡನ್​ ಮಾರ್ಗದ ವಿಮಾನವನ್ನು ಫ್ರಾಂಕ್​ಫರ್ಟ್​ನಲ್ಲಿ ಇಳಿಸಿ, ತಪಾಸಣೆ ನಡೆಸಲಾಯಿತು.

three-vistara-flights-receive-bomb-threats-one-flight-diverted-to-frankfurt-on-fri
ಸಾಂದರ್ಭಿಕ ಚಿತ್ರ (ಎಎನ್​ಐ)

By PTI

Published : Oct 19, 2024, 5:03 PM IST

ನವದೆಹಲಿ: ಕಳೆದ ನಾಲ್ಕು ದಿನಗಳಿಂದ ವಿಮಾನಯಾನ ಸಂಸ್ಥೆಗಳಿಗೆ ಹುಸಿ ಬಾಂಬ್​ ಕರೆಗಳು ಬರುತ್ತಿದ್ದು, ಇದೀಗ ವಿಸ್ತಾರಾ ಏರ್​ಲೈನ್ಸ್​ನ ಮೂರು ವಿಮಾನಗಳಿಗೆ ಕೂಡ ಈ ಬೆದರಿಕೆ ಕರೆ ಬಂದಿದೆ. ಇದರ ಪರಿಣಾಮ ಶನಿವಾರ ಮುನ್ನೆಚ್ಚರಿಕಾ ಕ್ರಮವಾಗಿ ವಿಮಾನವೊಂದನ್ನು ಫ್ರಾಂಕ್​ಫರ್ಟ್​​ಗೆ ಮಾರ್ಗ ಬದಲಾವಣೆ ಮಾಡಲಾಗಿದೆ.

ಈ ಕುರಿತು ಹೇಳಿಕೆ ಪ್ರಕಟಿಸಿರುವ ವಿಸ್ತಾರ ಏರ್​ಲೈನ್ಸ್​​​ ವಕ್ತಾರರು, ದೆಹಲಿಯಿಂದ ಕಾರ್ಯಾಚರಣೆ ನಡೆಸುತ್ತಿದ್ದ ಮೂರು ವಿಮಾನಗಳಿಗೆ ಶುಕ್ರವಾರ ಸಾಮಾಜಿಕ ಜಾಲತಾಣಗಳ ಮೂಲಕ ಬೆದರಿಕೆ ಕರೆ ಬಂದಿದೆ. ಶಿಷ್ಟಾಚಾರ ಅನುಸಾರ ತಕ್ಷಣಕ್ಕೆ ಅಧಿಕಾರಿಗಳು ಸಂಬಂಧಪಟ್ಟ ಅಧಿಕಾರಿಗಳಿಗೆ ಈ ಕುರಿತು ಎಚ್ಚರಿಸಿದ್ದಾರೆ.

ದೆಹಲಿಯಿಂದ ಲಂಡನ್​, ಪ್ಯಾರಿಸ್​ ಮತ್ತು ಹಾಂಕ್​ಕಾಂಗ್​​ಗೆ ಹೊರಟಿದ್ದ ಮೂರು ವಿಮಾನಗಳು ಹುಸಿ ಬಾಂಬ್​ ಸಂದೇಶವನ್ನು ಸ್ವೀಕರಿಸಿವೆ.

ದೆಹಲಿಯಿಂದ ಲಂಡನ್​ಗೆ ಹೊರಟಿದ್ದ ವಿಸ್ತಾರ ವಿಮಾನ ಯುಕೆ 17 ವಿಮಾನವನ್ನು ಬಾಂಬ್​​ ಬೆದರಿಕೆ ಕರೆ ಹಿನ್ನೆಲೆ ಮುನ್ನೆಚ್ಚರಿಕಾ ಕ್ರಮವಾಗಿ ಫ್ರಾಂಕ್​ಫರ್ಟ್​​ಗೆ ಮಾರ್ಗ ಬದಲಾಯಿಸಲಾಗಿದೆ. ವಿಮಾನವು ಫ್ರಾಂಕ್​ಫರ್ಟ್​ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಇಳಿಯುತ್ತಿದ್ದಂತೆ ಅಧಿಕಾರಿಗಳು ಅಗತ್ಯ ತಪಾಸಣೆ ನಡೆಸಿ, ಬಳಿಕ ಮುಂದಿನ ಪ್ರಯಾಣಕ್ಕೆ ಹಸಿರು ನಿಶಾನೆ ತೋರಿಸಿದರು. ಬಳಿಕ ವಿಮಾನ ಲಂಡನ್​ಗೆ ಶುಕ್ರವಾರ ರಾತ್ರಿ 11.40 (ಅಲ್ಲಿನ ಕಾಲಮಾನ) ಲ್ಯಾಂಡ್​ ಆಗಿದೆ ಎಂದು ತಿಳಿಸಿದರು.

ದೆಹಲಿ ಮತ್ತು ಪ್ಯಾರಿಸ್​ ನಡುವಿನ ಯುಕೆ 21 ವಿಮಾನ ಕೂಡ ಸುರಕ್ಷಿತವಾಗಿ ಪ್ಯಾರಿಸ್​ನ ಚಾರ್ಲ್ಸ್​​ ಡೆ ಗೌಲ್​ ವಿಮಾನ ನಿಲ್ದಾಣಕ್ಕೆ ಇಳಿದಿದೆ. ಬಳಿಕ ವಿಮಾನವನ್ನು ಕಡ್ಡಾಯ ಸುರಕ್ಷಿತಾ ಪರೀಕ್ಷೆಗೆ ಒಳಪಡಿಸಲಾಗಿದ್ದು, ಬಳಿಕ ಕಾರ್ಯಾಚರಣೆ ಆರಂಭಿಸಿತು.

ಮತ್ತೊಂದು ವಿಮಾನ ಯುಕೆ 161 ದೆಹಲಿ - ಹಾಂಕ್​ಕಾಂಗ್​​ ವಿಮಾನ ಕೂಡ ಹಾಂಕ್​​ ಕಾಂಗ್​​ನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸುರಕ್ಷಿತವಾಗಿ ಇಳಿದಿದ್ದು, ಎಲ್ಲಾ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.

ಈ ನಡುವೆ ಅಕಾಸಾ ಏರ್​ನ ಕ್ಯೂಪಿ 1366 ಬೆಂಗಳೂರು- ಮುಂಬೈ ವಿಮಾನ ಕೂಡ ಶುಕ್ರವಾರ ಇನ್ನೇನು ಹೊರಡುವ ಮುನ್ನ ಬೆದರಿಕೆ ಸಂದೇಶ ಪಡೆದಿತ್ತು. ತಪಾಸಣೆ ಬಳಿಕ ಅದು ತನ್ನ ಪ್ರಯಾಣ ನಡೆಸಿತು ಎಂದು ಸಂಸ್ಥೆ ಶನಿವಾರ ತಿಳಿಸಿದೆ.

ಸುರಕ್ಷತೆ ಮತ್ತು ಭದ್ರತೆ ಕಾರ್ಯದ ಹಿನ್ನೆಲೆ ಎಲ್ಲಾ ಪ್ರಯಾಣಿಕರನ್ನು ವಿಮಾನದಿಂದ ಕೆಳಗಿಳಿಸಬೇಕಾಗಿ ಬಂದಿತು. ಈ ವೇಳೆ ಅಗತ್ಯ ಕ್ರಮಗಳನ್ನು ಅಧಿಕಾರಿಗಳು ನಡೆಸಿದರು. ಪ್ರಯಾಣಿಕರಿಗೆ ಅನಾನೂಕುಲತೆ ತಪ್ಪಿಸಲು ಸಾಧ್ಯವಾದ ಎಲ್ಲಾ ಕ್ರಮವನ್ನು ತಂಡ ನಡೆಸಿತು. ಕಳೆದ ಕೆಲವು ದಿನಗಳಿಂದ ಭಾರತದ 40ಕ್ಕೂ ಹೆಚ್ಚು ವಿಮಾನಗಳು ಈ ರೀತಿಯ ಹುಸಿ ಬಾಂಬ್​ ಕರೆಗಳನ್ನು ಪಡೆದಿವೆ ಎಂಬ ಮಾಹಿತಿಯನ್ನು ನೀಡಿದರು.

ಇದನ್ನೂ ಓದಿ: ಹೈದರಾಬಾದ್​:​ ಮೆಟ್ರೋ ನಿಲ್ದಾಣದ ಬಳಿ ಕಾಣಿಸಿಕೊಂಡ ಚಿರತೆ, ಜನರಲ್ಲಿ ಆತಂಕ

ABOUT THE AUTHOR

...view details