ಮುಂಬೈ: ನಗರದಲ್ಲಿ ಬೆಂಕಿ ಅವಘಡಗಳು ದಿನೇ ದಿನೆ ಹೆಚ್ಚುತ್ತಿದೆ. ಇಂದು ಮತ್ತೆ 14 ಅಂತಸ್ತಿನ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಮೂವರು ಸಾವನ್ನಪ್ಪಿದ್ದಾರೆ.
ರಿಯಾ ಪ್ಯಾಲೇಸ್ ಅಂಧೇರಿ ಪಶ್ಚಿಮದ ಲೋಖಂಡವಾಲಾ ಪ್ರದೇಶದಲ್ಲಿ 14 ಅಂತಸ್ತಿನ ಕಟ್ಟಡದ 10 ನೇ ಮಹಡಿಯಲ್ಲಿ ಬೆಳಗ್ಗೆ 8 ಗಂಟೆಗೆ ಬೆಂಕಿ ಕಾಣಿಸಿಕೊಂಡಿದೆ. ಸದ್ಯ ಮೂವರು ಸಾವನ್ನಪ್ಪಿರುವ ಮಾಹಿತಿ ಲಭ್ಯವಾಗಿದೆ. ಚಂದ್ರಪ್ರಕಾಶ ಸೋನಿ (ವಯಸ್ಸು 74), ಕಾಂತ ಸೋನಿ (ವಯಸ್ಸು 74), ಮತ್ತು ಪೇಲುಬೆಟ್ಟ (ವಯಸ್ಸು 42) ಮೃತರು.