ಹೈದರಾಬಾದ್:ಬೆಳೆಯುತ್ತಿರುವ ನಗರ, ವಾಹನಗಳ ಸಂಖ್ಯೆಯ ಅಗತ್ಯತೆಯನ್ನು ಗಮನದಲ್ಲಿರಿಸಿಕೊಂಡು ಅತ್ಯಾಧುನಿಕವಾಗಿ ನಿರ್ಮಿಸಲಾಗಿರುವ ಹೈದರಾಬಾದ್ ಹೊರ ವರ್ತುಲ ರಸ್ತೆ (ಒಆರ್ಆರ್) ಪ್ರಯಾಣಿಕರಿಗೆ ಮಾರಕವಾಗಿ ಪರಿಣಮಿಸುತ್ತಿದೆ. ಅತಿ ವೇಗದ ರಸ್ತೆಯಲ್ಲಿ ವಾಹನಗಳ ಸಂಖ್ಯೆ ಹೆಚ್ಚಿದ್ದು, ಅಪಾಯ ಕೂಡ ಹೆಚ್ಚಿದೆ. ಇದರಿಂದ ಕ್ಷಣಾರ್ಧದಲ್ಲಿ ಸಾವುಗಳು ಸಂಭವಿಸುತ್ತಿವೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದಾಗ 2023ರಲ್ಲಿ ಅಪಘಾತದ ದರ ಶೇ 127ರಷ್ಟು ಹೆಚ್ಚಿದೆ. ಇದೀಗ ಕಂಟೋನ್ಮೆಟ್ ಶಾಸಕಿ ಲಾಸ್ಯಾ ನಂದಿತಾ ಸಾವಿನ ಹಿನ್ನೆಲೆ ಇದೀಗ ಮತ್ತೆ ಒಆರ್ಆರ್ ಚರ್ಚೆ ಮುನ್ನಲೆಗೆ ಬಂದಿದೆ.
ನಿತ್ಯ 1.5 ಲಕ್ಷ ವಾಹನ: ಹೈದರಾಬಾದ್ ಸುತ್ತ 158 ಕಿ.ಮೀ ಉದ್ದದ ಒಆರ್ಆರ್ ನಿರ್ಮಿಸಲಾಗಿದ್ದು, ಇದು ಸಂಪೂರ್ಣ ರಾಜ್ಯದ ಬೆನ್ನೆಲುಬು ಆಗಿದೆ. ಈ ರಸ್ತೆಯಲ್ಲಿ ವಾಹನಗಳು ರಾಜ್ಯದ ಇತರ 8 ಲೇನ್ ರಸ್ತೆಗಳಿಗಿಂತ ವೇಗವಾಗಿ ಅಂದರೆ ಗಂಟೆಗೆ 120 ಕಿ.ಮೀ ವೇಗದಲ್ಲಿ ಸಾಗುತ್ತದೆ. ನಿತ್ಯ 1.5 ಲಕ್ಷ ವಾಹನಗಳ ಸಂಚರಿಸುತ್ತದೆ. ಅನೇಕ ಮಂದಿ ಅತಿ ವೇಗ ಮತ್ತು ಅಜಾಗರೂಕತೆಯಿಂದಾಗಿ ಚಲಿಸುವುದರಿಂದ ಇಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಿದೆ.
ಜೀವ ತೆಗೆದುಕೊಳ್ಳುವ ವೇಗ: ಒಆರ್ಆರ್ನಲ್ಲಿ ಅಪಘಾತವಾಗುವುದಕ್ಕೆ ಮುಖ್ಯ ಕಾರಣ ಅತಿಯಾದ ವೇಗವಾಗಿದೆ. ಇಲ್ಲಿ ಹೆಚ್ಚು ಎಂದರೆ ಗಂಟೆಗೆ 120 ಕಿ.ಮೀ ವೇಗದಲ್ಲಿ ಸಂಚರಿಸಬಹುದು. ಆದರೆ, ಇಲ್ಲಿ 140-150 ಕಿ.ಮೀ ವೇಗದಲ್ಲಿ ವಾಹನಗಳು ಸಾಗುತ್ತಿವೆ ಎಂದು ಪೊಲೀಸರು ತಿಳಿಸುತ್ತಾರೆ. 200 ಕಿ.ಮೀ ವೇಗದಲ್ಲಿ ವಾಹನಗಳು ಚಲಿಸಿರುವುದು ಕೂಡಾ ಪತ್ತೆಯಾಗಿದೆ ಅಂತಾರೆ ಪೊಲೀಸರು. ಇಷ್ಟು ವೇಗವಾಗಿ ವಾಹನಗಳು ಹೋಗುತ್ತಿದ್ದಾಗ ತುರ್ತು ಸಂದರ್ಭದಲ್ಲಿ ಅದನ್ನು ನಿಯಂತ್ರಿಸುವುದು ಕಷ್ಟವಾಗುತ್ತದೆ. ಶಾಸಕಿ ಲಾಸ್ಯ ನಂದಿತಾ ಸಾವಿಗೂ ಇದೇ ವೇಗವೇ ಕಾರಣವಾಗಿದೆ. ಈ ರಸ್ತೆಯಲ್ಲಿ ಅಪಘಾತ ಮತ್ತು ಸಾವು ಹೆಚ್ಚುತ್ತಿರುವುದು ನಿಜಕ್ಕೂ ಕಾಳಜಿ ವಿಚಾರವಾಗಿದೆ. 2022ರಲ್ಲಿ ಈ ಒಆರ್ಆರ್ನಲ್ಲಿ 170 ಮಂದಿ ಸಾವನ್ನಪ್ಪಿದರೆ, 2023ರಲ್ಲಿ 216 ಮಂದಿ ಸಾವನ್ನಪ್ಪಿದ್ದಾರೆ.