ಗೋಧವರಿಖಾನಿ: ಓದುವ ಹಂಬಲ, ಸಾಧಿಸುವ ಛಲ ಇದ್ದರೆ, ಯಾವುದೇ ಸಮಸ್ಯೆಗಳು ಅಡ್ಡಿಯಾಗದು ಎಂಬ ಮಾತಿದೆ. ಅದರಂತೆ ಸಾಧನೆ ಮಾಡಿ ತೋರಿಸಿದ್ದಾರೆ ಪೆದ್ದಪಲ್ಲಿ ಜಿಲ್ಲೆಯ ಗೋದಾವರಿಖಾನಿಯ ಕುಣರಪು ಸಿರಿ. ಇಂಟರ್ ಫಲಿತಾಂಶದಲ್ಲಿ ಸಿಇಸಿ ವರ್ಗದಲ್ಲಿ 927 ಅಂಕಗಳನ್ನು ಪಡೆಯುವ ಮೂಲಕ ಕಾಲೇಜ್ಗೆ ಟಾಪರ್ ಆಗಿದ್ದಾರೆ.
ಶಾರದಾನಗರದ ಬಾಲಕಿಯರ ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ದ್ವಿತೀಯ ವರ್ಷದ ಓದುತ್ತಿರುವ ಸಿರಿ ಎಲ್ಲರಂತೆ ಸಾಮಾನ್ಯ ಹುಡುಗಿಯಲ್ಲ. ಕಾರಣ ಈಕೆ ಆರೋಗ್ಯ ಸಮಸ್ಯೆಯಿಂದ ವಾರಕ್ಕೆ ಎರಡು ಬಾರಿ ಡಯಾಲಿಸಿಸ್ಗೆ ಒಳಗಾಗಬೇಕು. ಇದರಿಂದ ಆಕೆಗೆ ಕಾಲೇಜಿಗೆ ಹೋಗಲು ಸಾಧ್ಯವಾಗುತ್ತಿರಲಿಲ್ಲ. ಆದರೂ ಓದಿನ ಆದಮ್ಯ ಆಸಕ್ತಿ ಹೊಂದಿದ ಸಿರಿ, ಆರೋಗ್ಯ ಸಮಸ್ಯೆಗಳ ನಡುವೆ ಓದಿ ಶಾರದಾನಗರದ ಬಾಲಕಿಯರ ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ಇಂಟರ್ ದ್ವಿತೀಯ ವರ್ಷದಲ್ಲಿ ಉತ್ತಮ ಅಂಕ ಪಡೆಯುವ ಮೂಲಕ ಎಲ್ಲರ ಮೆಚ್ಚುಗೆ ಜೊತೆಗೆ ಅನೇಕರಿಗೆ ಸ್ಪೂರ್ತಿಯಾಗಿದ್ದಾಳೆ.
ಕಟ್ಟಡ ನಿರ್ಮಾಣ ಕೆಲಸಗಾರರ ಪುತ್ರಿ ಈ ಸಿರಿ: ಗೋದಾವರಿಖನಿ ಎನ್ ಟಿಪಿಸಿ ಕೃಷ್ಣಾನಗರದ ಕುಣರಪು ಪೋಷಂ ಮತ್ತು ವೆಂಕಟ ಲಕ್ಷ್ಮಿ ದಂಪತಿಯ ಮೊದಲ ಮಗಳು ಸಿರಿಯಾಗಿದ್ದಾಳೆ. ಕಟ್ಟಡ ನಿರ್ಮಾಣ ಕೆಲಸ ಮಾಡುವ ಪೋಷಕರು, ಬರುವ ಚಿಕ್ಕ ಆದಾಯದಲ್ಲಿ ಚೊಕ್ಕವಾಗಿ ಕುಟುಂಬ ನಿರ್ವಹಣೆ ಮಾಡುತ್ತಿದ್ದಾರೆ. ಆದರೆ, ಸಿರಿಗೆ ಕಳೆದ ಐದು ವರ್ಷದಿಂದ ಕಿಡ್ನಿ ಸಮಸ್ಯೆ ಉಂಟಾಗಿದ್ದು, ದಿನ ಕಳೆದಂತೆ ಆಕೆಯ ಕಿಡ್ನಿ ಕೆಲಸ ನಿಧಾನಗೊಳಿಸಿದೆ. ಕಳೆದ ಎಂಟು ತಿಂಗಳ ಹಿಂದೆ ಆಕೆಯ ಎರಡೂ ಕಿಡ್ನಿ ಸಂಪೂರ್ಣವಾಗಿ ವಿಫಲಗೊಂಡಿವೆ. ಅಂದಿನಿಂದ ಆಕೆ ಸಂಪೂರ್ಣವಾಗಿ ಹಾಸಿಗೆ ಹಿಡಿದು, ವಾರಕ್ಕೆ ಎರಡು ಬಾರಿ ಕಿಡ್ನಿ ಡಯಾಲಿಸೀಸ್ಗೆ ಒಳಗಾಗುತ್ತಿದ್ದಾಳೆ.