ಹೈದರಾಬಾದ್ (ತೆಲಂಗಾಣ) :ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಸೈಬರ್ ಕ್ರಿಮಿನಲ್‌ಗಳು ಸರ್ಕಾರಿ ಯೋಜನೆಗಳ ಹೆಸರಲ್ಲಿ ಹಣ ಸುಲಿಗೆ ಮಾಡುತ್ತಿದ್ದಾರೆ. ಸೈಬರ್ ಅಪರಾಧಿಗಳು, ಕೇಂದ್ರ ಸರ್ಕಾರ ‘ಜನಧನ್ ಯೋಜನೆ’ ಮೂಲಕ ನಿಮ್ಮ ಬ್ಯಾಂಕ್ ಖಾತೆಗೆ 5 ಸಾವಿರ ರೂಪಾಯಿ ಹಣ ಜಮಾ ಮಾಡುತ್ತಿದೆ ಅಂತಾ ಅಪಪ್ರಚಾರ ಮಾಡುತ್ತಿದ್ದಾರೆ. ಅಷ್ಟೇ ಅಲ್ಲ, ಸಾಮಾಜಿಕ ಜಾಲತಾಣದಲ್ಲಿ ನಕಲಿ ಪೋಸ್ಟ್‌ಗಳು, ಲಿಂಕ್ಗಳನ್ನು ಕಳುಹಿಸುವ ಮೂಲಕ ಅಮಾಯಕರ ಹಣವನ್ನು ಲೂಟಿ ಮಾಡುತ್ತಿದ್ದಾರೆ. ಈಗಾಗಲೇ ಹತ್ತಾರು ಸಂತ್ರಸ್ತರು ಹಣ ಕಳೆದುಕೊಂಡಿರುವುದು ಬೆಳಕಿಗೆ ಬಂದಿದೆ.
ಸ್ಕ್ರ್ಯಾಚ್ ಮತ್ತು ಸ್ಕ್ಯಾನ್ ಮಾಡಿ: Instagram ಮತ್ತು Facebook ನಲ್ಲಿ ಪೋಸ್ಟ್‌ಗಳು ಮತ್ತು ರೀಲ್‌ಗಳಂತಹ ಕೆಲವು ಜಾಹೀರಾತುಗಳಿವೆ. ಇವುಗಳಲ್ಲಿ ಕೆಲವು ಸೈಬರ್ ಅಪರಾಧಿಗಳು ಹರಿಯಬಿಟ್ಟಿದ್ದಾರೆ. ಹಣದ ನಿರೀಕ್ಷೆಯಲ್ಲಿ ನೀವು ಅದರ ಮೇಲೆ ಕ್ಲಿಕ್ ಮಾಡಿದರೆ, ಅದು ನಿಮ್ಮನ್ನು ನೇರವಾಗಿ ಅಪರಾಧಿಗಳು ರಚಿಸಿದ ವೆಬ್‌ಸೈಟ್‌ಗೆ ಕರೆದೊಯ್ಯುತ್ತದೆ. ಇದು ನರೇಂದ್ರ ಮೋದಿಯವರ ಚಿತ್ರವಿರುವ ಸರ್ಕಾರಿ ವೆಬ್‌ಸೈಟ್‌ನಂತೆ ಕಾಣುತ್ತದೆ. ಅಲ್ಲಿ ಕಾಣಿಸಿಕೊಳ್ಳುವ ಕಾರ್ಡ್ ಅನ್ನು ಸ್ಕ್ರ್ಯಾಚ್ ಮಾಡಲು ಸೂಚಿಸಲಾಗುತ್ತದೆ. ಆಗ ನಿಮಗೆ ಐದು ಸಾವಿರ ಅಥವಾ ಅದಕ್ಕಿಂತ ಹೆಚ್ಚು ಮೊತ್ತ ನಿಮ್ಮ ಖಾತೆ ಜಮಾ ಆಗುತ್ತದೆ ಎಂದು ತೋರಿಸುತ್ತದೆ. ಈ ಹಣವನ್ನು ಪಡೆಯಲು ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಲು ತಿಳಿಸುತ್ತದೆ. ಸ್ಕ್ಯಾನ್ ಮಾಡಿದ ನಂತರ ಅದು UPI ಪಿನ್ ಕೇಳುತ್ತದೆ. ಒಂದು ವೇಳೆ ಪಿನ್ ಎಂಟ್ರಿ ಮಾಡಿದ್ರೆ ನಿಮ್ಮ ಖಾತೆಯಲ್ಲಿರುವ ಹಣ ಖಾಲಿಯಾಗುತ್ತದೆ.
ಕೆಲವರು ಇಂತಹ ಸುಳ್ಳು ಜಾಹೀರಾತುಗಳನ್ನು ನಂಬಿ ಸಾವಿರಾರು ರೂಪಾಯಿ ಹಣ ಕಳೆದುಕೊಂಡಿದ್ದಾರೆ. ಈ ರೀತಿಯ ಜನಧನ್ ಯೋಜನೆ ಹೆಸರಿನಲ್ಲಿ ಬರುವ ಲಿಂಕ್ಗಳನ್ನು ಕ್ಲಿಕ್ ಮಾಡಿದರೆ ಅನುಮತಿಯಿಲ್ಲದೆ ಕೆಲವೊಂದು ಆ್ಯಪ್ಗಳು ಡೌನ್ ಲೋಡ್ ಆಗುತ್ತಿವೆ ಎನ್ನುತ್ತಾರೆ ಪೊಲೀಸರು. ಪರಿಣಾಮವಾಗಿ, ಫೋನ್‌ಗಳಲ್ಲಿನ ಬ್ಯಾಂಕ್ ಖಾತೆಗಳ ಗೌಪ್ಯ ಮತ್ತು ವೈಯಕ್ತಿಕ ಮಾಹಿತಿಯು ಆಗಾಗ್ಗೆ ಅಪರಾಧಿಗಳಿಗೆ ರವಾನೆಯಾಗುತ್ತದೆ. ಅಷ್ಟೇ ಅಲ್ಲ, ಫೋನ್ ಅನ್ನು ಸಂಪೂರ್ಣವಾಗಿ ಅವರು ತಮ್ಮ ವಶಕ್ಕೆ ತೆಗೆದುಕೊಂಡು ತಮಗೆ ಯಾವರೀತಿ ಬೇಕೋ ಆ ರೀತಿ ಬಳಸಿಕೊಳ್ಳುತ್ತಾರೆ ಎಂದು ಪೊಲೀಸರು ಎಚ್ಚರಿಸಿದ್ದಾರೆ.