ಹೈದರಾಬಾದ್ (ತೆಲಂಗಾಣ):ಮುಂದಿನ ಆರು ದಿನಗಳ ಕಾಲ ರಾಜ್ಯದಲ್ಲಿ ಅಲ್ಲಲ್ಲಿ ಗುಡುಗು, ಮಿಂಚು ಸಹಿತ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ತೆಲಂಗಾಣದ ಹವಾಮಾನ ಕೇಂದ್ರ ತಿಳಿಸಿದೆ.
ರಾಜ್ಯದ ಹಲವು ಜಿಲ್ಲೆಗಳಲ್ಲಿ ಇಂದು ಆಲಿಕಲ್ಲು ಮಳೆಯಾಗುವ ಸಾಧ್ಯತೆ ಇದೆ ಎಂದು ಹೇಳಿದೆ. ಕೆಲವು ಜಿಲ್ಲೆಗಳಲ್ಲಿ ಗುಡುಗು ಮತ್ತು ಮಿಂಚು ಸಹಿತ ಪ್ರತ್ಯೇಕ ಸ್ಥಳಗಳಲ್ಲಿ ಗಂಟೆಗೆ 30-40 ಕಿಮೀ ವೇಗದ ಗಾಳಿಯೊಂದಿಗೆ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ನಾಳೆ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಗಂಟೆಗೆ 40-50 ಕಿಮೀ ವೇಗದ ಗಾಳಿಯೊಂದಿಗೆ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು IMD ತಿಳಿಸಿದೆ. ಹಲವು ಜಿಲ್ಲೆಗಳಿಗೆ ಆರೆಂಜ್ ಎಚ್ಚರಿಕೆ ನೀಡಲಾಗಿದೆ.
El Nino Effect in India : ಮಾನ್ಸೂನ್ ಸಮಯದಲ್ಲಿ ಎಲ್ ನಿನೊ ಸಂಭವಿಸುವುದರಿಂದ ಭಾರತದಲ್ಲಿ ಮಳೆಯ ಪ್ರಮಾಣವು ಶೇಕಡಾ 6 ರಷ್ಟು ಕಡಿಮೆಯಾಗಿದೆ ಎಂದು IMD ಬಹಿರಂಗಪಡಿಸಿದೆ. ಈ ವರ್ಷದ ಫೆಬ್ರವರಿ ನಂತರ, ಪೆಸಿಫಿಕ್ ಸಾಗರದಲ್ಲಿ ತಾಪಮಾನವು ಕಡಿಮೆಯಾಗುತ್ತಿದೆ. ಜೂನ್ ವೇಳೆಗೆ ದೇಶದಲ್ಲಿ ಎಲ್ ನಿನೋ ಕೊನೆಗೊಳ್ಳಲಿದ್ದು, ಲಾ ನಿನಾ ಪ್ರಾರಂಭವಾಗಲಿದೆ ಎಂದು ಹವಾಮಾನ ತಜ್ಞರು ಭವಿಷ್ಯ ನುಡಿದಿದ್ದಾರೆ. ಆದರೆ, ಹೆಚ್ಚಿನ ತಾಪಮಾನ ಮತ್ತು ಮಳೆಯಿಂದಾಗಿ ತೀವ್ರ ಹಾನಿ ಸಂಭವಿಸುವ ನಿರೀಕ್ಷೆಯಿದೆ.