ಹೈದರಾಬಾದ್:ತೆಲಂಗಾಣ ರಾಜ್ಯದಲ್ಲಿ ಬಿಸಿಲಿನ ತಾಪಮಾನದ ಅಬ್ಬರ ಜೋರಾಗಿದೆ. ಭಾರತೀಯ ಹವಾಮಾನ ಇಲಾಖೆ (IMD) ಸಹ ಈ ವರ್ಷ ಸಾಮಾನ್ಯ ಬೇಸಿಗೆಯ ತಾಪಮಾನಕ್ಕಿಂತಲೂ ಹೆಚ್ಚು ಉಷ್ಣಾಂಶ ದಾಖಲಾಗಿದೆ ಎಂದು ಹೇಳಿದೆ.
ಏಪ್ರಿಲ್ ತಿಂಗಳ ಆರಂಭದಲ್ಲೇ ಬಿಸಿಲಿನ ತಾಪವು ಏರಿಕೆಯಾಗುತ್ತಿದೆ. ಹೈದರಾಬಾದ್ ಕೂಡ ತೀವ್ರವಾದ ಬಿಸಿಲಿನ ಹೊಡೆತಕ್ಕೆ ಸಿಲುಕಿದೆ. ತಾಪಮಾನವು 40 ಡಿಗ್ರಿ ಸೆಲ್ಸಿಯಸ್ ದಾಟಿದೆ. ಉಷ್ಣಾಂಶದ ಏರಿಕೆಯಿಂದ ನಗರದ ನಿವಾಸಿಗಳನ್ನು ಚಿಂತೆಗೀಡುಮಾಡಿದೆ. ಸೂರ್ಯನ ಬಿಸಿಲಿನ ಪ್ರಖರತೆಯನ್ನು ಎದುರಿಸಲು ಜನರು ಛತ್ರಿ, ಸ್ಕಾರ್ಪ್ಗಳ ಮೋರೆ ಹೋಗಿದ್ದಾರೆ. ರಸ್ತೆ ಬದಿಯ ಸ್ಟಾಲ್‌ಗಳಲ್ಲಿ ಲಭ್ಯವಿರುವ ರಿಫ್ರೆಶ್ಮೆಂಟ್ಗಳಲ್ಲಿ ತಂಪು ಪಾನೀಯ ಮತ್ತು ಹಣ್ಣುಗಳ ಮೂಲಕ ಪರಿಹಾರ ಕಂಡಕೊಳ್ಳಲು ಮುಂದಾಗಿದ್ದಾರೆ.
ಉಪ್ಪಲ್ನಲ್ಲಿ 43.3 ಡಿಗ್ರಿ ಸೆಲ್ಸಿಯಸ್, ಸಿರಿಲಿಂಗಂಪಲ್ಲಿಯಲ್ಲಿ 43.1 ಡಿಗ್ರಿ ಸೆಲ್ಸಿಯಸ್, ಕುತ್ಬುಳ್ಳಾಪುರದಲ್ಲಿ 43.3 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಹಯತ್‌ನಗರ, ಖೈರತಾಬಾದ್ ಮತ್ತು ಸರೂರ್‌ನಗರದಲ್ಲಿ ಕ್ರಮವಾಗಿ 42.7, 42.1, 42 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಕುಕಟ್‌ಪಲ್ಲಿಯಲ್ಲಿ 42 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ.
16 ಜಿಲ್ಲೆಗಳಿಗೆ ಹೀಟ್‌ವೇವ್ ಎಚ್ಚರಿಕೆ: ಹೈದರಾಬಾದ್ ಸೇರಿದಂತೆ ತೆಲಂಗಾಣಕ್ಕೆ ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದ್ದು, ಮಾರ್ಚ್‌ನಿಂದ ಮೇ ವರೆಗಿನ ಬೇಸಿಗೆಯ ತಿಂಗಳುಗಳಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ತಾಪಮಾನ ದಾಖಲಾಗಲಿದೆ ಎಂದು ಊಹಿಸಿದೆ. ಇದು ಹೆಚ್ಚು ಅಹಿತಕರ ದಿನಗಳು ಮತ್ತು ರಾತ್ರಿಗಳ ಬಗ್ಗೆ ಎಚ್ಚರಿಕೆ ನೀಡಿದೆ. ತಾಪಮಾನವು ಸಾಮಾನ್ಯ ಸರಾಸರಿಯನ್ನು ಮೀರುವ ನಿರೀಕ್ಷೆಯಿದೆ. ರಾಜ್ಯದ ಹಲವು ಭಾಗಗಳಲ್ಲಿ ಪಾದರಸದ ಮಟ್ಟವು 42 ಡಿಗ್ರಿ ಸೆಲ್ಸಿಯಸ್ ದಾಟಿದೆ. 40 ಡಿಗ್ರಿ ಸೆಲ್ಸಿಯಸ್‌ನ ಆಸುಪಾಸಿನಲ್ಲಿ ತಾಪಮಾನ ಕೆಲವು ದಿನಗಳಿಂದ ಏರುತ್ತಿದೆ. ನಂತರ, ತೆಲಂಗಾಣದ ಹವಾಮಾನ ನಿಧಾನವಾಗಿ ಬದಲಾಗುತ್ತಿರುವಂತೆ ತೋರುತ್ತಿದೆ. ಭಾರತೀಯ ಹವಾಮಾನ ಇಲಾಖೆಯು ಏಪ್ರಿಲ್ 1 ರಿಂದ 3 ರವರೆಗೆ ರಾಜ್ಯದ 16 ಜಿಲ್ಲೆಗಳಿಗೆ ಹೀಟ್‌ವೇವ್ ಎಚ್ಚರಿಕೆಯನ್ನು ನೀಡಿದೆ.
ಅದಿಲಾಬಾದ್, ಆಸಿಫಾಬಾದ್, ನಿಜಾಮಾಬಾದ್, ನಿರ್ಮಲ್, ಮಂಚೇರಿಯಲ್, ಜಗ್ತಿಯಾಲ್, ಕರೀಂ ನಗರ, ಪೆದ್ದಪಲ್ಲಿ, ಭೂಪಾಲಪಲ್ಲಿ, ಮುಲುಗು, ಖಮ್ಮಂ, ನಲ್ಗೊಂಡ, ಸೂರ್ಯಪೇಟ್, ಕಾಮರೆಡ್ಡಿ, ನಾರಾಯಣಪೇಟೆ ಮತ್ತು ಗದ್ವಾಲ್ ಪ್ರದೇಶಗಳಲ್ಲಿ ಬಿಸಿಗಾಳಿಯ ಎಚ್ಚರಿಕೆ ನೀಡಲಾಗಿದೆ.
ಹೈದರಾಬಾದ್, ರಂಗಾರೆಡ್ಡಿ ಮತ್ತು ಮೇಡ್ಚಲ್ ಸೇರಿದಂತೆ ಇತರ ಜಿಲ್ಲೆಗಳಲ್ಲಿ ಮುಂದಿನ ಮೂರು ದಿನಗಳವರೆಗೆ ಸಾಮಾನ್ಯ ತಾಪಮಾನಕ್ಕಿಂತ ಹೆಚ್ಚಿನ ತಾಪಮಾನವನ್ನು ನಿರೀಕ್ಷಿಸಬಹುದು ಮತ್ತು ತಾಪಮಾನವು 40 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಾಗುವ ಸಾಧ್ಯತೆಯಿದೆ.
ಇದನ್ನೂ ಓದಿ:ಛತ್ತೀಸ್‌ಗಢದಲ್ಲಿ ಭದ್ರತಾ ಸಿಬ್ಬಂದಿ ಎನ್‌ಕೌಂಟರ್‌ಗೆ ನಾಲ್ವರು ನಕ್ಸಲೀಯರು ಹತ - NAXAL ENCOUNTER