ಕರ್ನಾಟಕ

karnataka

ETV Bharat / bharat

ವಾರಂಗಲ್​ ವಿಮಾನ ನಿಲ್ದಾಣ ಅಭಿವೃದ್ಧಿ: ಭೂ ಸ್ವಾಧೀನಕ್ಕೆ ₹205 ಕೋಟಿ ನೀಡಿದ ತೆಲಂಗಾಣ ಸರ್ಕಾರ

ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರವು(ಎಎಐ) ಎ320 ಮಾದರಿಯ ವಿಮಾನಗಳಿಗಾಗಿ ವಾರಂಗಲ್ ವಿಮಾನ ನಿಲ್ದಾಣವನ್ನು ಅಭಿವೃದ್ಧಿಪಡಿಸಲು ಸಿದ್ಧವಾಗಿದೆ.

telangana-govt-sanctions-rs-205-cr-for-warangal-airport-after-gmr-issues-no-objection-certificate
ತೆಲಂಗಾಣ ಸಿಎಂ ರೇವಂತ್​ ರೆಡ್ಡಿ (ANI)

By PTI

Published : 4 hours ago

ಹೈದರಾಬಾದ್​: ವಾರಂಗಲ್​ನ ಮಾಮ್ನೂರ್​ ವಿಮಾನ ನಿಲ್ದಾಣದ ಅಭಿವೃದ್ಧಿಗೆ 280 ಎಕರೆ ಭೂಮಿ ವಶಪಡಿಸಿಕೊಂಡಿರುವ ತೆಲಂಗಾಣ ಸರ್ಕಾರ, 205 ಕೋಟಿ ರೂ ಮಂಜೂರು ಮಾಡಿ ಆದೇಶ ಹೊರಡಿಸಿದೆ. ಹೈದರಾಬಾದ್​ ವಿಮಾನ ನಿಲ್ದಾಣವನ್ನು ನಿರ್ವಹಿಸುತ್ತಿರುವ ಜಿಎಂಆರ್​ ಗ್ರೂಪ್​ ನಿರಾಕ್ಷೇಪಣಾ ಪ್ರಮಾಣ ಪತ್ರ ನೀಡಿದೆ.

ಎ-320 ಮಾದರಿಯ ವಿಮಾನಗಳ ಕಾರ್ಯಾಚರಣೆಗೆ ಮಾಸ್ಟರ್ ಪ್ಲಾನ್ ಸಿದ್ಧಪಡಿಸಲಾಗುತ್ತಿದೆ. ಇದಕ್ಕಾಗಿ ತೆಲಂಗಾಣ ರಾಜ್ಯ ಸರ್ಕಾರದಿಂದ 253 ಎಕರೆ ಅಳತೆಯ ಹೆಚ್ಚುವರಿ ಭೂಮಿ ಅಗತ್ಯವಿದ್ದು, ಅದನ್ನು ಸರ್ಕಾರ ಪಡೆದಿದೆ.

ಹೈದರಾಬಾದ್​ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ನಿರ್ವಹಿಸುವ ಜಿಎಂಆರ್​​ ಗ್ರೂಪ್ ಮತ್ತು ನಾಗರಿಕ ವಿಮಾನಯಾನ ಸಚಿವಾಲಯದ ನಡುವಿನ ಒಪ್ಪಂದದ ಪ್ರಕಾರ, ವಿಮಾನ ನಿಲ್ದಾಣದ ಸಮೀಪ 150 ಕಿ.ಮೀ ಒಳಗೆ ಯಾವುದೇ ಹೊಸ ವಿಮಾನ ನಿಲ್ದಾಣವನ್ನು ವೈಮಾನಿಕ ಒಳಗೆ ದೇಶೀಯ/ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾಗಿ ಅಭಿವೃದ್ಧಿಪಡಿಸಲು/ ಸುಧಾರಿಸಲು/ನವೀಕರಿಸಲು ಅನುಮತಿಸುವುದಿಲ್ಲ.

ಈ ಮಾಮ್ನೂರು ವಿಮಾನ ನಿಲ್ದಾಣ ಹೈದರಾಬಾದ್​ ವಿಮಾನ ನಿಲ್ದಾಣದಿಂದ 175 ಕಿ.ಮೀ ದೂರದಲ್ಲಿದೆ. ವಾರಂಗಲ್​ನಲ್ಲಿ 280.30 ಜಿಟಿಎಸ್​ ಭೂಮಿ ಸ್ವಾಧೀನಪಡಿಸಿಕೊಳ್ಳಲು ಸರ್ಕಾರ ಜಿಲ್ಲಾಧಿಕಾರಿಗೆ ಅನುಮತಿ ನೀಡಿದೆ. ಇದಕ್ಕಾಗಿ 250 ಕೋಟಿ ನೀಡಿದೆ. ರನ್‌ವೇ ವಿಸ್ತರಣೆಗಾಗಿ 253 ಎಕರೆ ಹೆಚ್ಚುವರಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಮತ್ತು ಎಎಐಗೆ ಹಸ್ತಾಂತರಿಸುವಂತೆ ಸರ್ಕಾರ ಜಿಲ್ಲಾಧಿಕಾರಿಗೆ ಆದೇಶಿಸಿದೆ.

ಇದನ್ನೂ ಓದಿ: ಅಪಘಾತದಲ್ಲಿ ಮೃತಪಟ್ಟವರಿಗೆ ಶ್ರದ್ಧಾಂಜಲಿ; ರಸ್ತೆ ಸುರಕ್ಷತೆ ಕುರಿತು ಜಾಗೃತಿ

ABOUT THE AUTHOR

...view details