ಅದಿಲಾಬಾದ್(ತೆಲಂಗಾಣ):ತೆಲಂಗಾಣದಅದಿಲಾಬಾದ್ ಜಿಲ್ಲೆಯ ಇಂದ್ರವೆಲ್ಲಿ ಮಂಡಲದಲ್ಲಿ ಸುಂದರ್ನಗರ ಎಂಬ ಪುಟ್ಟ ಗ್ರಾಮವಿದೆ. 500 ಜನರಿರುವ ಈ ಗ್ರಾಮ ಯಾವುದೇ ಆಡಳಿತಕ್ಕೆ ಒಳಪಟ್ಟಿಲ್ಲ ಎಂಬುದು ಅಚ್ಚರಿ. ಸುತ್ತಮುತ್ತಲು ಹತ್ತಾರು ಗ್ರಾಮ ಪಂಚಾಯಿತಿಗಳಿದ್ದರೂ, ಈ ಊರು ಅನಾಥವಾಗಿದೆ. ಯಾವುದೇ ಪಂಚಾಯಿತಿಯ ಆಡಳಿತಕ್ಕೆ ಸೇರದೆ ಕಳೆದ 18 ವರ್ಷಗಳಿಂದಲೂ ಇಲ್ಲಿನ ಜನರು ಸರ್ಕಾರಿ ಯೋಜನೆಗಳಿಂದ ವಂಚಿತರಾಗಿದ್ದಾರೆ.
ಗ್ರಾಮ ಪಂಚಾಯಿತಿಯೇ ಇಲ್ಲದ ಗ್ರಾಮ: ಸುಂದರ್‌ನಗರ್ ಗ್ರಾಮ ಯಾವುದೇ ಆಡಳಿತಾತ್ಮಕ ಪರಿಸ್ಥಿತಿಯನ್ನು ಹೊಂದಿಲ್ಲ. ಇದು ಇಂದ್ರವೆಲ್ಲಿ ಮತ್ತು ಯೆಮೈಕುಂಟಾ ಗ್ರಾಮಗಳಿಗೆ ಸಮೀಪವಿದ್ದರೂ ಯಾವುದೇ ಗ್ರಾಮ ಪಂಚಾಯಿತಿಗೆ ಸೇರಿಲ್ಲ. 2006ರಲ್ಲಿ ಇಂದ್ರವೆಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾಮ್ನೆ ನಾಂದೇವ್ ಬಳಿ 90 ವಸತಿರಹಿತ ಕುಟುಂಬಗಳಿಗೆ ಸರಕಾರ 4.20 ಎಕರೆ ಜಾಗ ನೀಡಿತ್ತು. ಇದೇ ಜಾಗ ಕಾಲಾನಂತರದಲ್ಲಿ ಸುಂದರ್‌ನಗರ್ ಅಗಿ ನಿರ್ಮಾಣವಾಗಿದೆ. ಆದರೆ, ಪಂಚಾಯತ್ ಸೌಲಭ್ಯದಿಂದ ವಂಚಿತವಾಗಿದೆ.