ಜೋದ್ಪುರ, ರಾಜಸ್ಥಾನ: ಈ ಸಮರಾಭ್ಯಾಸವೂ ಭಾರತದ ಭವಿಷ್ಯದ ಸಹಯೋಗಗಳಿಗೆ ಬಲವಾದ ಅಡಿಪಾಯ ಹಾಕಲು ಸಿದ್ಧವಾಗಿದೆ. ಈ ಪ್ರದರ್ಶನ ಪರಸ್ಪರ ನಂಬಿಕೆಯನ್ನು ನಿರ್ಮಿಸುವ ಮತ್ತು ವಿದೇಶಗಳೊಂದಿಗೆ ಕಾರ್ಯತಂತ್ರದ ಸಂಬಂಧಗಳನ್ನು ಬಲಪಡಿಸುವ ಗುರಿಯನ್ನು ಹೊಂದಿದೆ ಎಂದು ವಾಯು ಸೇನಾ ಮುಖ್ಯಸ್ಥ ವಿಆರ್ ಚೌದರಿ ಹೇಳಿದ್ದಾರೆ.
ತರಂಗ್ ಶಕ್ತಿ ವೈಮಾನಿಕ ಪ್ರದರ್ಶನದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದೂಸ್ತಾನ್ ಏರೋನಾಟಿಕಲ್ ಲಿಮಿಟೆಡ್ (ಎಚ್ಎಎಲ್) ಲಘು ಯುದ್ಧ ವಿಮಾನ (ಎಲ್ಸಿಎ) ವಿತರಣೆಯಲ್ಲಿ ವಿಳಂಬ ಮಾಡುತ್ತಿದ್ದು, ಇದಕ್ಕೆ ತ್ವರಿತಗತಿಯಲ್ಲಿ ಪರಿಹಾರ ನೀಡಲಾಗುವುದು ಎಂದು ವಿಆರ್ ಚೌದರಿ ತಿಳಿಸಿದ್ದಾರೆ. ಭಾರತೀಯ ವಾಯು ಸೇನೆ ಯುದ್ಧ ವಿಮಾನಗಳ ಕೊರತೆಯನ್ನು ಅನುಭವಿಸುತ್ತಿದೆ. ಜೊತೆಗೆ ತೇಜಸ್ ಯುದ್ಧ ವಿಮಾನದ ವಿತರಣೆಗೆ ಕಾದು ಕುಳಿತಿದೆ ಎಂದೂ ಇದೇ ವೇಳೆ ಅವರು ತಿಳಿಸಿದರು.
ಉತ್ಪಾದನೆಯ ಹಾದಿಯನ್ನು ವೈವಿಧ್ಯಗೊಳಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದ್ದೇವೆ. ಇದಕ್ಕಾಗಿ ಖಾಸಗಿ- ಸಾರ್ವಜನಿಕ ಸಹಭಾಗಿತ್ವ ಅಥವಾ ಖಾಸಗಿ ಸಹಭಾಗಿತ್ವದಿಂದ ಜಂಟಿ ಉದ್ಯಮ ನಡೆಸುವ ಮೂಲಕ ಬಹು ಉತ್ಪಾದನೆ ಹಾದಿಯನ್ನ ಸೃಷ್ಟಿ ಮಾಡಲಾಗುತ್ತಿದೆ. ಎಚ್ಎಎಲ್ಗೆ ಆರಂಭದಲ್ಲಿ ನೀಡಿದ 40 ತೇಜಸ್ ಯುದ್ದ ವಿಮಾನಗಳ ಆರ್ಡ್ನಲ್ಲಿ ಇದೀಗ 36 ಫೈಟರ್ ಜೆಟ್ಗಳನ್ನ ವಿತರಣೆ ಮಾಡಲಾಗಿದೆ ಎಂದು ಅವರು ಮಾಹಿತಿ ಹಂಚಿಕೊಂಡರು.