ಕರ್ನಾಟಕ

karnataka

ETV Bharat / bharat

ಜೀವನ ನಿರ್ವಹಣೆಗೆ ಕುಗ್ರಾಮ ತೊರೆದ ಪೋಷಕರು; ಮನೆಯಲ್ಲಿ ಏಕಾಂಗಿಯಾಗಿರುವ ಮಕ್ಕಳಿಗೆ ಬಿಸಿಯೂಟವೇ ಆಸರೆ - Maharashtra School

ದಟ್ಟ ಕಾಡುಗಳಿಂದ ಆವೃತ್ತವಾಗಿರುವ ಜೈತದೆಹಿ ಎಂಬ ಗ್ರಾಮದಲ್ಲಿ ಹೊಟ್ಟೆ ತುಂಬಿಸಲು ವಲಸೆ ಹೋಗುವುದು ಇಲ್ಲಿನ ಬಹುತೇಕ ಕುಟುಂಬಗಳಿಗೆ ಅನಿವಾರ್ಯ. ಹೀಗಾಗಿ ಇಲ್ಲಿನ ಮಕ್ಕಳಿಗೆ ಶಾಲಾ ಬಿಸಿಯೂಟವೇ ಆಸರೆ.

Teenage Tribal Boys Sole Relief Is  Mid Day Meal Served At School
ಜಿಗರ್​​ (ಈಟಿವಿ ಭಾರತ್​)

By ETV Bharat Karnataka Team

Published : Sep 5, 2024, 4:49 PM IST

ಅಮರಾವತಿ, ಮಹಾರಾಷ್ಟ್ರ: ಬಾಲ್ಯ ಎಂಬುದು ಎಲ್ಲರಿಗೂ ಸಿಹಿಗನಸಿನ ಮೂಟೆಯಲ್ಲ. ಆಟ, ಪಾಠ, ಮೋಜು, ಮಸ್ತಿಗಳಲ್ಲಿ ಕಳೆಯಬೇಕಾದ ಬಾಲ್ಯವೂ ಅನೇಕರಿಗೆ ಜವಾಬ್ದಾರಿಗಳ ಹೊರೆಯನ್ನು ಕಲಿಸುತ್ತದೆ. ಅಂತಹದೇ ಒಂದು ಕಥೆ ಮೆಲ್ಘಾಟ್​ನ 13 ವರ್ಷದ ಜಿಗರ್​ ಎಂಬ ಬಾಲಕನದ್ದು. ಈತನ ಕುರಿತು ವಿಶೇಷ ವರದಿ ಇಲ್ಲಿದೆ.

ಜಿಗರ್​​, ಕಡು ಬಡತನದಲ್ಲಿ ಹುಟ್ಟಿದ ಮಗು. ಇನ್ನು ಪೋಷಕರು ಬದುಕು ಅರಸಿ ಪುಣೆ ಪಟ್ಟಣಕ್ಕೆ ಹೋಗಿದ್ದಾರೆ. ದಟ್ಟ ಕಾಡುಗಳಿಂದ ಆವೃತ್ತವಾಗಿರುವ ಜೈತದೆಹಿ ಎಂಬ ಗ್ರಾಮದಲ್ಲಿ ಹೊಟ್ಟೆ ತುಂಬಿಸಲು ವಲಸೆ ಹೋಗುವುದು ಇಲ್ಲಿನ ಬಹುತೇಕ ಕುಟುಂಬಗಳಿಗೆ ಅನಿವಾರ್ಯವೂ ಕೂಡಾ ಹೌದು. ಅದೇ ರೀತಿ ಜಿಗರ್​ ಪೋಷಕರು ಪಟ್ಟಣ ಸೇರಿದ್ದಾರೆ. ಆದರೆ, ಈತ ಮಾತ್ರ, ಮನೆಯಲ್ಲಿ ಏಕಾಂಗಿಯಾಗಿದ್ದು, ಮನೆ ನಿರ್ವಹಣೆ ನಡೆಸುವ ಜೊತೆಗೆ ಶಾಲೆಯಲ್ಲಿ ಕಲಿಯುತ್ತಿದ್ದಾನೆ.

ದೀಪಾವಳಿ ಅಥವಾ ಹೋಳಿ ಹಬ್ಬದಲ್ಲಿ ಈತನಿಗೆ ಪೋಷಕರ ದರ್ಶನ. ಅಲ್ಲಿಯವರೆಗೆ ಬೆಳಗಾದ ತಕ್ಷಣ ದೂರದಿಂದ ನೀರು ತರವುದು, ಮನೆ ಗುಡಿಸುವುದು, ಮನೆ ನಿರ್ವಹಣೆ, ಬಟ್ಟೆ - ಪಾತ್ರೆ ತೊಳೆಯುವುದು. ಶಾಲೆಗೆ ಹೋಗಿ ಕಲಿಯುವುದು. ಒಂಟಿತನದ ಮರೆವಿಗೆ ಸಂಜೆ ತನ್ನಂತೆ ಗ್ರಾಮದಲ್ಲಿ ಪೋಷಕರು ಬಿಟ್ಟು ಹೋದ ಮಕ್ಕಳ ಜೊತೆ ಆಟವಾಡುವುದು ಈತನ ದಿನಚರಿ.

ಪೋಷಕರ ಆಸರೆ ಮರೆತು ಬದುಕುತ್ತಿರುವ ಜಿಗರ್​ಗೆ ಜೊತೆಗಾರರು ಎಂದರೆ ಓದು, ಸ್ನೇಹಿತರು, ಶಾಲೆ, ಅಜ್ಜಿ, ಬಿಸಿಯೂಟ. ಇದು ಕೇವಲ ಜಿಗರ್​ ಮಾತ್ರವಲ್ಲ. ಈ ಊರಿನಲ್ಲಿರುವ ಬಹುತೇಕ ಮಕ್ಕಳ ಜೀವನ ಶೈಲಿ. ಬಡತನ ಎಂಬುದು ಈ ಮಕ್ಕಳ ಬಾಲ್ಯವನ್ನು ಅಕ್ಷರಶಃ ಕಸಿದಿದೆ.

ಇಶಿತಾಳ ಕಥೆಯೂ ಬೇರೆಯಲ್ಲ: ಜಿಗರ್​ ರೀತಿಯ ಮತ್ತೊಂದು ಕಥೆ ಇಶಿಕಾಳದು. ನಾಲ್ಕನೇ ತರಗತಿಯಲ್ಲಿ ಓದುತ್ತಿರುವ ಈಕೆ ತಮ್ಮ ಚಿಕ್ಕಪ್ಪ, ಚಿಕ್ಕಮ್ಮ ಮತ್ತು ತಮ್ಮದೊಂದಿಗೆ ಕಾಲ ಕಳೆಯುತ್ತಿದ್ದಾಳೆ. ಅಮ್ಮ ದೂರದ ಔರಂಗಬಾದ್​ನಲ್ಲಿ ಕೆಲಸ ನಿರ್ವಹಿಸುತ್ತಿದ್ದಾಳೆ. ತಂದೆ ಮೂರು ವರ್ಷದ ಹಿಂದೆಯೇ ಸಾವನ್ನಪ್ಪಿದ್ದಾರೆ.

ತಂದೆಯಿಲ್ಲದ, ತಾಯಿಯಿಂದ ದೂರಾದ ಇಶಿತಾ ಚಿಕ್ಕಪ್ಪ- ಚಿಕ್ಕಮ್ಮನ ಆಸರೆಯಲ್ಲಿದ್ದರೂ ಆನಾಥೆ. ಆಕೆಯ ತಮ್ಮನ ಆರೈಕೆಯಲ್ಲಿ ನಿರತವಾಗುವುದೇ ಆಕೆಗೆ ಸದ್ಯಕ್ಕಿರುವ ಸಮಾಧಾನ ಸಂಗತಿ. ಜೊತೆಗೆ ಚಿಕ್ಕಮ್ಮನಿಗೆ ಮನೆ ಕೆಲಸದಲ್ಲಿ ನೆರವಾಗುತ್ತಾಳೆ.

ಬಿಸಿಯೂಟದ ಆಸರೆ: ಜೈತದೆಹಿಯ ಜಿಲ್ಲಾ ಪರಿಶದ್​ ಶಾಲೆಯಲ್ಲಿ 8ನೇ ತರಗತಿ ಓದುತ್ತಿರುವ ಜಿಗರ್​​, ಅಕ್ಕ ಕೂಡ ಆರ್ಥಿಕ ಕಷ್ಟದ ಹಿನ್ನೆಲೆಯಲ್ಲಿ ಓದು ಬಿಟ್ಟು ಕೆಲಸಕ್ಕೆ ಹೊರ ಹೋಗಿದ್ದಾರೆ. ಶಾಲೆ ಇದ್ದಾಗ ಬಿಸಿಯೂಟದ ಜಿಗರ್​​ಗೆ ಇರುವ ಬಹು ದೊಡ್ಡ ಆಸರೆ, ಶಾಲೆ ರಜೆದಿನದಲ್ಲಿ ಆತನೇ ಕಿಚಡಿಯನ್ನು ತಯಾರಿಸಿಕೊಳ್ಳುತ್ತಾನೆ. ಏಕಾಂಗಿಯಾಗಿರುವ ಜಿಗರ್​ ಸ್ನೇಹಿತರ ಜೊತೆಗೆ ಒಟ್ಟಿಗೆ ಆಟ- ಪಾಠ ನಡೆಸುತ್ತೇನೆ ಎಂದು ನಗು ಮುಖದಲ್ಲಿ ಹೇಳುತ್ತಾನೆ.

ಪೋಷಕರಿಂದ ದೂರದ ಮಕ್ಕಳಗೆ ಎಲ್ಲ ರೀತಿಯ ಬೆಂಬಲ ನೀಡಿ, ಅವರ ಶಿಕ್ಷಣದಲ್ಲಿ ವೈಯಕ್ತಿಕ ಕಾಳಜಿವಹಿಸಲಾಗುತ್ತಿದೆ ಎಂದು ಪ್ರಿನ್ಸಿಪಾಲ್​ ಗಣೇಶ್​ ಜಮೂನ್ಕರ್​​ ಮತ್ತು ಸಹಾಯಕ ಟೀಚರ್​​ ಶುಭಂಗ್ನಿ ಯೆವ್ಲೆ, ಜಿತೇಂದ್ರ ರತ್ನಿ ಮುಂದಾಗಿದ್ದಾರೆ. ಮನೆಯಲ್ಲಿ ಏಕಾಂಗಿಯಾಗಿರುವ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಯೋಜನೆ ಮೂಲಕ ಊಟ ನೀಡಲಾಗುತ್ತಿದೆ. ಅನೇಕ ಬಾರಿ ಶಿಕ್ಷಕರು ಎರಡು ಹೆಚ್ಚುವರಿ ಬಾಕ್ಸ್​ ಅನ್ನು ಮನೆಯಿಂದ ತಂದು ಇಂತಹ ಮಕ್ಕಳಿಗೆ ನೀಡುತ್ತಿದ್ದಾರೆ.

ಇದನ್ನೂ ಓದಿ: ತೆಲಂಗಾಣದಲ್ಲಿ ಎನ್​​ಕೌಂಟರ್: 6 ಮಾವೋವಾದಿಗಳ ಹತ್ಯೆ

ABOUT THE AUTHOR

...view details