ನವದೆಹಲಿ: ಅಪ್ರಾಪ್ತ ಮಕ್ಕಳಿಗೆ ಇಂದು ಕೇವಲ 'ಗುಡ್ ಟಚ್' ಮತ್ತು 'ಬ್ಯಾಡ್ ಟಚ್' ಹೇಳಿಕೊಟ್ಟರೆ ಸಾಲದು, ವರ್ಚುಯಲ್ ಜಗತ್ತಿನಲ್ಲಿರುವ ಅವರಿಗೆ 'ವರ್ಚುಯಲ್ ಟಚ್' ಬಗ್ಗೆ ಕೂಡ ಶಿಕ್ಷಣ ನೀಡುವ ಅಗತ್ಯವಿದೆ ಎಂದು ದೆಹಲಿ ಉಚ್ಛ ನ್ಯಾಯಾಲಯ ತಿಳಿಸಿದೆ.
ಇಂದು ಮಕ್ಕಳಿಗೆ ಆನ್‌ಲೈನ್ ನಡವಳಿಕೆ ಬಗ್ಗೆ ಶಿಕ್ಷಣ ನೀಡಬೇಕಿದೆ. ಜೊತೆಗೆ ಇಲ್ಲಿ ದೌರ್ಜನ್ಯ ಎಸಗುವವರ ನಡವಳಿಕೆ ಸೂಚನೆ ಅರಿಯುವ ಮತ್ತು ಪ್ರೈವಸಿ ಸೆಟ್ಟಿಂಗ್ ಮತ್ತು ಆನ್‌ಲೈನ್ ಮಿತಿ ಕುರಿತು ಅರ್ಥೈಸಿಕೊಡುವ ಅಗತ್ಯತೆ ಹೆಚ್ಚಿದೆ ಎಂದು ನ್ಯಾಯಾಲಯ ಅಭಿಪ್ರಾಯ ವ್ಯಕ್ತಪಡಿಸಿದೆ. ಇಂದಿನ ವರ್ಚುಯಲ್ ಆಧುನಿಕ ಜಗತ್ತಿನ ವರ್ಚುಯಲ್ ಸ್ಪೇಸ್ ಈಗಾಗಲೇ ಹದಿಹರೆಯದವರ ಪ್ರೀತಿ ಮತ್ತು ಸಂತಾನೋತ್ತತ್ತಿಯ ತಾಣವಾಗಿ ಮಾರ್ಪಡುತ್ತಿದೆ. ಇಲ್ಲಿ ಮಾನವ ಕಳ್ಳಸಾಗಣೆ, ವೇಶ್ಯಾವಾಟಿಕೆ ಮತ್ತು ಇತರ ಅಪರಾಧದಂತಹ ಅಪಾಯಕಾರಿ ತಾಣವಾಗಿ ಮಾರ್ಪಡಿದೆ ಎಂದು ನ್ಯಾ. ಸ್ವರ್ಣ ಕಾಂತ ಶರ್ಮಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅಪ್ರಾಪ್ತ ಬಾಲಕಿ ಅಪಹರಿಸಿ ವೇಶ್ಯಾವಾಟಿಕೆಗೆ ಬಲವಂತಪಡಿಸಿ ಬಳಿಕ ಲೈಂಗಿಕ ದೌರ್ಜನ್ಯ ಎಸಗಲು ಸಹಾಯ ಮಾಡಿದ ಆರೋಪದ ಮೇಲೆ 16 ವರ್ಷದ ಅಪ್ರಾಪ್ತನಿಗೆ ಜಾಮೀನು ನೀಡುವಂತೆ ಮನವಿ ಮಾಡಿ ಆರೋಪಿ ತಾಯಿ ಕಮಲಾದೇವಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ.
ಪ್ರಕರಣವೇನು?: ಅಪ್ರಾಪ್ತೆಗೆ ಸಾಮಾಜಿಕ ಜಾಲತಾಣದಲ್ಲಿ ಪರಿಚಿತವಾದ 16 ವರ್ಷದ ಬಾಲಕ ಆಕೆಯನ್ನು ಭೇಟಿಯಾಗಲು ಬಂದಾಗ ಅಪಹರಿಸಿದ್ದ. ಬಾಲಕಿ ಅಪಹರಿಸಿ ಮಧ್ಯಪ್ರದೇಶಕ್ಕೆ ಕರೆದೊಯ್ದು, ಅಲ್ಲಿ ಹಲವು ದಿನಗಳ ಕಾಲ ಇಟ್ಟಿದ್ದು, ಆರೋಪಿ ಅನೇಕ ಪುರುಷರನ್ನು ಕರೆತಂದು ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ. ಅಲ್ಲದೇ, ಹಣ ಪಡೆಯುವ ಮೂಲಕ ಅಪ್ರಾಪ್ತೆಗೆ 45 ವರ್ಷದ ವ್ಯಕ್ತಿ ಜೊತೆ ಮದುವೆಗೆ ಬಲವಂತ ಪಡಿಸಲಾಗಿದೆ ಎಂದು ಆರೋಪಿಸಲಾಗಿದೆ.
ಈ ಪ್ರಕರಣದ ವಿಚಾರಣೆ ನಡೆಸಿದ ಪೀಠ, ಇಂದಿನ ದಿನದಲ್ಲಿ ಅಪ್ರಾಪ್ತರಿಗೆ ಕೇವಲ ದೈಹಿಕ ಸ್ಪರ್ಶದ ಬಗ್ಗೆ ಮಾತ್ರ ಹೇಳಿಕೊಟ್ಟರೆ ಸಾಲದು. ಇಂದು ವರ್ಚುಯಲ್ ಜಗತ್ತಿನಲ್ಲಿನ ಅದರ ಕುರಿತ ಅಪಾಯ ತಡೆಗಟ್ಟಲು ವರ್ಚುಯಲ್ ಸ್ಪರ್ಶದ ಬಗ್ಗೆ ಅಪ್ರಾಪ್ತರಲ್ಲಿ ಶಿಕ್ಷಣ ಮೂಡಿಸಬೇಕಿದೆ. ಆನ್‌ಲೈನ್ ಸಂವಹನಗಳನ್ನು ಸುರಕ್ಷಿತವಾಗಿಸುವ ಜೊತೆಗೆ ಸೈಬರ್‌ಸ್ಪೇಸ್ ಅಪರಾಧದ ಕುರಿತು ತಿಳಿಸಬೇಕಿದೆ ಎಂದು ನ್ಯಾಯಾಲಯ ತಿಳಿಸಿದೆ.
ಆನ್‌ಲೈನ್ ಸಂಪರ್ಕ ವಿಶ್ವಾಸರ್ಹತೆ ಬಲಪಡಿಸುವ ಕೌಶಲ್ಯ ಮತ್ತು ವೈಯಕ್ತಿಕ ಮಾಹಿತಿಗಳನ್ನು ಸುರಕ್ಷಿತವಾಗಿರುಸುವ ಕುರಿತು ಡಿಜಿಟಲ್ ಸಾಕ್ಷರತೆ ಮೂಡಿಸಬೇಕಿದೆ. ಅಪ್ರಾಪ್ತರಲ್ಲಿ ಜವಾಬ್ದಾರಿಯುತ ಆನ್‌ಲೈನ್ ನಡವಳಿಕೆ ಉತ್ತೇಜಿಸುವುದು ಪ್ರಮುಖವಾಗಿದೆ. ಸಂವಹನ ಚಾನಲ್ಗಳನ್ನು ತೆರೆಯುವಾಗ ಮುನ್ಸೂಚನೆ ಮತ್ತು ಅದರ ಕುರಿತು ಮಾರ್ಗಸೂಚಿ ನೀಡುವ ಮೂಲಕ ಮಕ್ಕಳು ಅವರ ಮಾಹಿತಿ ನಿರ್ಧಾರವನ್ನು ಆನ್‌ಲೈನ್ ಬೆದರಿಕೆಯಿಂದ ಅವರೇ ರಕ್ಷಿಸುವ ಕುರಿತು ಅರಿವು ಮೂಡಿಸಬೇಕಿದೆ ಎಂದು ನ್ಯಾಯಾಲಯ ತಿಳಿಸಿದೆ.
ಇದನ್ನೂ ಓದಿ:ಕ್ರಿಕೆಟ್ ಆಡುತ್ತಿದ್ದಾಗ ಗುಪ್ತಾಂಗಕ್ಕೆ ಚೆಂಡು ಬಡಿದು ಬಾಲಕ ಸಾವು