ಅಯೋಧ್ಯೆ(ಉತ್ತರ ಪ್ರದೇಶ):ಅಯೋಧ್ಯೆಯಲ್ಲಿರಾಮಲಲ್ಲಾ ಪ್ರತಿಮೆಯ ಪ್ರಾಣ ಪ್ರತಿಷ್ಠಾಪನಾ ಸಮಾರಂಭ ನಿನ್ನೆ ಅದ್ಧೂರಿಯಾಗಿ ನೆರವೇರಿದೆ. ಐತಿಹಾಸಿಕ ಕಾರ್ಯಕ್ರಮದಿಂದ ಕೋಟ್ಯಂತರ ಭಾರತೀಯರ, ಅದರಲ್ಲೂ ರಾಮ ಭಕ್ತರ ಬಹುದಿನಗಳ ಕನಸು ನನಸಾಗಿದೆ. ಈ ಮಹತ್ಕಾರ್ಯವನ್ನು ಸಾಕಾರಗೊಳಿಸಲು ಅನೇಕರು ತಮ್ಮ ತಮ್ಮ ಪಾತ್ರಗಳನ್ನು ನಿರ್ವಹಿಸಿದ್ದಾರೆ.
101 ಕೆ.ಜಿ ಬಂಗಾರ ನೀಡಿದ ವಜ್ರ ವ್ಯಾಪಾರಿ: ದೇಶಾದ್ಯಂತ 20 ಲಕ್ಷ ಹಿಂದೂ ಕಾರ್ಯಕರ್ತರು 12 ಕೋಟಿ ಕುಟುಂಬಗಳಿಂದ ಎರಡು ಸಾವಿರ ಕೋಟಿ ರೂಪಾಯಿಗೂ ಹೆಚ್ಚು ದೇಣಿಗೆ ಸಂಗ್ರಹಿಸಿದ್ದಾರೆ ಎಂಬುದು ವಿಶ್ವ ಹಿಂದೂ ಪರಿಷತ್ ನೀಡಿದ ಮಾಹಿತಿ. ಶ್ರೀರಾಮನಿಗೆ ದೇಣಿಗೆ ನೀಡಿದವರಲ್ಲಿ ಸೂರತ್ ಮೂಲದ ವಜ್ರದ ವ್ಯಾಪಾರಿ ದಿಲೀಪ್ ಕುಮಾರ್ ವಿ.ಲಖಿ ಸಹ ಒಬ್ಬರು. ಸುಮಾರು 101 ಕೆ.ಜಿ ಚಿನ್ನವನ್ನು ಇವರ ಕುಟುಂಬದವರು ಮಂದಿರಕ್ಕೆ ಕೊಡುಗೆ ನೀಡಿದ್ದಾರೆ. ಸದ್ಯ ಮಾರುಕಟ್ಟೆಯಲ್ಲಿ 10 ಗ್ರಾಂ ಚಿನ್ನ 68 ಸಾವಿರ ರೂಪಾಯಿಗೆ ಮಾರಾಟವಾಗುತ್ತಿದೆ. ಹಾಗೆ ನೋಡಿದರೆ ದಿಲೀಪ್ ಕುಟುಂಬ ರಾಮಮಂದಿರಕ್ಕೆ 68 ಕೋಟಿ ರೂಪಾಯಿ ಉಡುಗೊರೆಯಾಗಿ ನೀಡಿದಂತಾಗಿದೆ.