ಕರ್ನಾಟಕ

karnataka

ETV Bharat / bharat

ಅಪರಾಧದಲ್ಲಿ ಭಾಗಿಯಾಗಿದ್ದಾನೆ ಎಂದ ಮಾತ್ರಕ್ಕೆ ಆರೋಪಿಗಳ ಆಸ್ತಿ ಧ್ವಂಸಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲ: ಸುಪ್ರೀಂ - crime is no ground for demolition - CRIME IS NO GROUND FOR DEMOLITION

ನ್ಯಾಯಮೂರ್ತಿಗಳಾದ ಹೃಷಿಕೇಶ್ ರಾಯ್, ಸುಧಾಂಶು ಧುಲಿಯಾ ಮತ್ತು ಎಸ್ ವಿ ಎನ್ ಭಟ್ಟಿ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್ ಪೀಠವು ಅಪರಾಧದಲ್ಲಿ ಭಾಗಿಯಾಗಿರುವುದೇ ಆಸ್ತಿ ಧ್ವಂಸಕ್ಕೆ ಆಧಾರವಲ್ಲ ಎಂದು ಹೇಳಿದೆ.

Supreme Court
ಆರೋಪಿಗಳ ಆಸ್ತಿ ಧ್ವಂಸಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲ; ಸುಪ್ರೀಂಕೋರ್ಟ್​ (ETV Bharat)

By ETV Bharat Karnataka Team

Published : Sep 12, 2024, 10:18 PM IST

ನವದೆಹಲಿ: "ಬುಲ್ಡೋಜರ್ ನ್ಯಾಯ" ದ ಬಗ್ಗೆ ತನ್ನದೇ ಅಭಿಪ್ರಾಯ ಹೇಳಿದ್ದ ಸುಪ್ರೀಂಕೋರ್ಟ್​, ಇಂದು ಅಪರಾಧದಲ್ಲಿ ಭಾಗಿಯಾಗಿದ್ದಾನೆ ಎಂದ ಮಾತ್ರಕ್ಕೇ ಆಸ್ತಿಯನ್ನು ಧ್ವಂಸ ಮಾಡಲು ಆಡಳಿತಗಳಿಗೆ ಯಾವುದೇ ಅಧಿಕಾರ ಇಲ್ಲ ಎಂದು ಹೇಳಿದೆ. ನೆಲದ ಕಾನೂನುಗಳ ಆಧಾರದ ಮೇಲೆ ಆಡಳಿತಗಳು ನಡೆದುಕೊಳ್ಳಬೇಕಿದೆ ಎಂದು ಅದು ಹೇಳಿದೆ.

ಈ ಬಗೆಗಿನ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಹೃಷಿಕೇಶ್ ರಾಯ್, ಸುಧಾಂಶು ಧುಲಿಯಾ ಮತ್ತು ಎಸ್‌ವಿಎನ್ ಭಟ್ಟಿ ಅವರನ್ನೊಳಗೊಂಡ ಪೀಠವು “ ಸರ್ಕಾರದ ಆಡಳಿತದ ಕ್ರಮಗಳು ಕಾನೂನಿನ ಅಡಿ ನಿಯಂತ್ರಿಸಲ್ಪಡುತ್ತಿವೆ. ಇಂತಹ ಸಂದರ್ಭದಲ್ಲಿ, ಕುಟುಂಬದ ಸದಸ್ಯನೊಬ್ಬ ಕಾನೂನು ಉಲ್ಲಂಘನೆ ಮಾಡಿದರೆ, ಅವರ ಕುಟುಂಬದ ಇತರ ಸದಸ್ಯರು ಅಥವಾ ಅವರ ವಿರುದ್ಧ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ. ಕಾನೂನುಬದ್ಧವಾಗಿ ನಿರ್ಮಿಸಲಾದ ನಿವಾಸವು ಅಪರಾಧದಲ್ಲಿ ಭಾಗಿಯಾಗಿರುವುದಕ್ಕಾಗಿ ಅವರ ಆಸ್ತಿಯನ್ನು ಕೆಡವಲು ಆಧಾರವಾಗುವುದಿಲ್ಲ ಎಂದು ಹೇಳಿದೆ. "ಇದಲ್ಲದೆ, ಆಪಾದಿತರ ಅಪರಾಧವನ್ನು ನ್ಯಾಯಾಲಯದಲ್ಲಿ ಕಾನೂನು ಪ್ರಕ್ರಿಯೆಯ ಮೂಲಕ ಸಾಬೀತುಪಡಿಸಬೇಕು. ಕಾನೂನೇ ಸರ್ವೋಚ್ಚವಾಗಿರುವ ರಾಷ್ಟ್ರದಲ್ಲಿ ಇಂತಹ ಧ್ವಂಸ ಬೆದರಿಕೆಗಳನ್ನು ನ್ಯಾಯಾಲಯ ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ ಎಂದು ಪೀಠ ಎಚ್ಚರಿಕೆ ಕೂಡಾ ನೀಡಿದೆ.

ಏನಿದು ಪ್ರಕರಣ?:ಗುಜರಾತ್ ಸರ್ಕಾರ ಮತ್ತು ಕತ್ಲಾಲ್ ನಗರಪಾಲಿಕೆ ವಿರುದ್ಧ ಜಾವೇದಲಿ ಮಹೆಬೂಬ್ಮಿಯಾ ಸೈಯದ್ ಸಲ್ಲಿಸಿದ ಮನವಿಯ ಮೇರೆಗೆ ಸುಪ್ರೀಂ ಕೋರ್ಟ್ ಈ ಆದೇಶ ನೀಡಿದೆ. ಅರ್ಜಿದಾರರ ಪರ ಹಿರಿಯ ವಕೀಲ ಇಕ್ಬಾಲ್ ಸೈಯದ್ ಅವರು ಸುಪ್ರೀಂ ಕೋರ್ಟ್‌ನಲ್ಲಿ ವಾದ ಮಂಡಿಸಿದರು. ವಕೀಲರು ಖೇಡಾ ಜಿಲ್ಲೆಯ ಕತ್ಲಾಲ್ ಗ್ರಾಮದ ಕಂದಾಯ ದಾಖಲೆಗಳನ್ನು ಉಲ್ಲೇಖಿಸಿ ಅರ್ಜಿದಾರರು ಈ ಜಮೀನಿನ ಸಹ-ಮಾಲೀಕರಾಗಿದ್ದಾರೆ ಎಂದು ಕೋರ್ಟ್​​ ಗಮನಕ್ಕೆ ತಂದರು. 2004ರ ಆಗಸ್ಟ್‌ 21ರಂದು ಕತ್ಲಾಲ್‌ ಗ್ರಾಮ ಪಂಚಾಯಿತಿಯಲ್ಲಿ 26 ಮತ್ತು 48ನೇ ಸಂಖ್ಯೆಯ ವಸತಿ ಗೃಹಗಳನ್ನು ನಿರ್ಮಿಸಲು ಅನುಮತಿ ನೀಡಿದ ನಿರ್ಣಯವನ್ನೂ ವಕೀಲರು ಉಲ್ಲೇಖಿಸಿದ್ದರು.

“ಅರ್ಜಿದಾರರ ಕುಟುಂಬದ ಮೂರು ತಲೆಮಾರಿನವರು ಕಳೆದ ಎರಡು ದಶಕಗಳಿಂದ ಈ ಮನೆಗಳಲ್ಲಿ ವಾಸಿಸುತ್ತಿದ್ದಾರೆ ಎಂಬ ವಿಚಾರವನ್ನೂ ಇದೇ ವೇಳೆ ಅವರು ಕೋರ್ಟ್ ಗಮನಕ್ಕೆ ತಂದರು. 01.09.2024 ರಂದು ಕುಟುಂಬದ ಒಬ್ಬ ಸದಸ್ಯರ ವಿರುದ್ಧ ಎಫ್‌ಐಆರ್ ದಾಖಲಿಸಲು ಬಂದಾಗ, ಪುರಸಭೆಯ ಅಧಿಕಾರಿಗಳು ಬೆದರಿಕೆ ಹಾಕಿದ್ದಾರೆ. ಅರ್ಜಿದಾರರ ಕುಟುಂಬದ ಮನೆಯನ್ನು ಬುಲ್ಡೋಜ್ ಮಾಡಿ ಎಂದು ಆದೇಶಿಸಲಾಗಿತ್ತು. ಇದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್​ಗೆ ಅರ್ಜಿ ಸಲ್ಲಿಸಲಾಗಿತ್ತು. ಸುಪ್ರೀಂ ಕೋರ್ಟ್ ಅರ್ಜಿಯ ವಿಚಾರಣೆ ನಡೆಸಿ ನೋಟಿಸ್ ಜಾರಿ ಮಾಡಿತ್ತು ಮತ್ತು ನಾಲ್ಕು ವಾರಗಳಲ್ಲಿ ಅದನ್ನು ಹಿಂತಿರುಗಿಸುವಂತೆ ಸೂಚನೆ ನೀಡಿತ್ತು. "ಈ ಮಧ್ಯೆ, ಅರ್ಜಿದಾರರ ಆಸ್ತಿಗೆ ಸಂಬಂಧಿಸಿದಂತೆ ಯಥಾಸ್ಥಿತಿ ಕಾಪಾಡಿಕೊಳ್ಳುವಂತೆಯೂ ಕೋರ್ಟ್ ಸೂಚಿಸಿದೆ.

ಸೆಪ್ಟೆಂಬರ್ 2 ರಂದು, ಸುಪ್ರೀಂ ಕೋರ್ಟ್ "ಬುಲ್ಡೋಜರ್ ನ್ಯಾಯ"ದ ಅಭಿಪ್ರಾಯಪಡುತ್ತಾ, ದೇಶಕ್ಕೆ ಅನ್ವಯವಾಗುವಂತೆ ಮಾರ್ಗಸೂಚಿಗಳನ್ನು ಹಾಕುವುದಾಗಿ ಹೇಳಿತ್ತು. ಕ್ರಿಮಿನಲ್ ಪ್ರಕರಣದ ಆರೋಪಿಗೆ ಸೇರಿದ ಮನೆ ಎಂಬ ಕಾರಣಕ್ಕೆ ಅದನ್ನು ಕೆಡವಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿತ್ತು.

ನ್ಯಾಯಮೂರ್ತಿಗಳಾದ ಬಿ ಆರ್ ಗವಾಯಿ ಮತ್ತು ಕೆ ವಿ ವಿಶ್ವನಾಥನ್ ಅವರನ್ನೊಳಗೊಂಡ ಪೀಠವು ಪ್ರಕ್ರಿಯೆಯನ್ನು ಸುವ್ಯವಸ್ಥಿತಗೊಳಿಸಬೇಕು ಎಂದು ಒತ್ತಿ ಹೇಳಿತು. ಧರ್ಮನಿಷ್ಠ ತಂದೆಯು ಮರುಕಪಡುವ ಮಗನನ್ನು ಹೊಂದಿರಬಹುದು ಅಥವಾ ಇಬ್ಬರೂ ಪರಸ್ಪರ ಪರಿಣಾಮಗಳನ್ನು ಅನುಭವಿಸಬಾರದು ಎಂದು ಹೇಳಿದೆ.

ಇದನ್ನು ಓದಿ:ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಮನೆಯ ಗಣಪತಿ ಪೂಜೆಯಲ್ಲಿ ಪ್ರಧಾನಿ ಮೋದಿ ಭಾಗಿ; ಪ್ರತಿಪಕ್ಷಗಳ ಟೀಕೆ - Modi Ganpati Puja

ABOUT THE AUTHOR

...view details