ಕರ್ನಾಟಕ

karnataka

ETV Bharat / bharat

ಸರ್ಕಾರಿ ಕಾಲೇಜಿನ ಶೌಚಾಲಯದಲ್ಲಿ ಹೆರಿಗೆ: ಕಸದ ಬುಟ್ಟಿಯಲ್ಲಿ ನವಜಾತ ಶಿಶು ಮುಚ್ಚಿಟ್ಟ ವಿದ್ಯಾರ್ಥಿನಿ! - STUDENT DELIVERS BABY IN TOILET

ಸರ್ಕಾರಿ ಕಾಲೇಜಿನ ಶೌಚಾಲಯದಲ್ಲಿ ವಿದ್ಯಾರ್ಥಿನಿ ಮಗುವಿಗೆ ಜನ್ಮ ನೀಡಿ, ಬಳಿಕ ಕಸದ ಬುಟ್ಟಿಯಲ್ಲಿ ಮುಚ್ಚಿಟ್ಟ ಘಟನೆ ನಡೆದಿದೆ.

ಸರ್ಕಾರಿ ಕಾಲೇಜಿನ ಶೌಚಾಲಯದಲ್ಲಿ ಹೆರಿಗೆ
ಸರ್ಕಾರಿ ಕಾಲೇಜಿನ ಶೌಚಾಲಯದಲ್ಲಿ ಹೆರಿಗೆ (ETV Bharat)

By ETV Bharat Karnataka Team

Published : Feb 2, 2025, 9:57 AM IST

Updated : Feb 2, 2025, 1:13 PM IST

ತಂಜಾವೂರು(ತಮಿಳುನಾಡು):ಸರ್ಕಾರಿಕಾಲೇಜಿನ ಶೌಚಾಲಯದಲ್ಲಿ 20 ವರ್ಷದವಿದ್ಯಾರ್ಥಿನಿಯೊಬ್ಬಳು ಹೆಣ್ಣು ಮಗುವಿಗೆ ಜನ್ಮ ನೀಡಿ, ಬಳಿಕ ನವಜಾತ ಶಿಶುವನ್ನು ಕಸದ ಬುಟ್ಟಿಯಲ್ಲಿ ಬಚ್ಚಿಟ್ಟ ಆಘಾತಕಾರಿ ಘಟನೆ ತಮಿಳುನಾಡಿನ ಕುಂಭಕೋಣಂನಲ್ಲಿ ನಡೆದಿದೆ.

ಪದವಿ ದ್ವಿತೀಯ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿ ತಾನು ಗರ್ಭಿಣಿಯಾಗಿರುವ ವಿಷಯ ಯಾರಿಗೂ ಗೊತ್ತಾಗದಂತೆ ಎಚ್ಚರಿಕೆ ವಹಿಸಿದ್ದಳು. ಶುಕ್ರವಾರ ಎಂದಿನಂತೆ ಕಾಲೇಜಿಗೆ ಬಂದಾಗ ಹೆರಿಗೆ ನೋವು ಕಾಣಿಸಿಕೊಂಡಿದೆ. ಬಳಿಕ ಕಾಲೇಜಿನ ಶೌಚಾಲಯಕ್ಕೆ ತೆರಳಿ ಮಗುವಿಗೆ ಜನ್ಮ ನೀಡಿದ್ದಾಳೆ. ಬಳಿಕ ಯಾರಿಗೂ ಗೊತ್ತಾಗದಂತೆ ನವಜಾತ ಶಿಶುವನ್ನು ಅಲ್ಲೇ ಇದ್ದ ಕಸದ ಬುಟ್ಟಿಯಲ್ಲಿ ಮುಚ್ಚಿಟ್ಟು, ಕ್ಲಾಸ್​ರೂಂಗೆ ತೆರಳಿದ್ದಳು. ಆ ಬಳಿಕ ತೀವ್ರ ರಕ್ತಸ್ರಾವವಾಗಿ ಕ್ಲಾಸ್​ರೂಂನಲ್ಲಿ ಪ್ರಜ್ಞೆತಪ್ಪಿ ಬಿದ್ದಾಗ ಆಂಬ್ಯುಲೆನ್ಸ್ ಮೂಲಕ ಕುಂಭಕೋಣಂ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಆಸ್ಪತ್ರೆಗೆ ದಾಖಲಾದ ವಿದ್ಯಾರ್ಥಿಯನ್ನು ವೈದ್ಯರು ಪರಿಶೀಲಿಸಿದಾಗ, ಹೆರಿಗೆ ಆಗಿರುವ ಮಾಹಿತಿ ಮತ್ತು ಮಗುವನ್ನು ಕಸದ ಬುಟ್ಟಿಯಲ್ಲಿ ಮುಚ್ಚಿಟ್ಟಿರುವುದು ಗೊತ್ತಾಗಿತ್ತು. ಆಗ ವೈದ್ಯರು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದರು. ನಂತರ ಪೊಲೀಸರು, ಕಾಲೇಜು ಸಿಬ್ಬಂದಿ ಶೌಚಾಲಯದ ಕಸದ ಬುಟ್ಟಿಯಲ್ಲಿದ್ದ ಮಗುವನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಜಿಲ್ಲಾಸ್ಪತ್ರೆಯಲ್ಲಿ ತಾಯಿ, ಮಗುವಿಗೆ ಚಿಕಿತ್ಸೆ ಮುಂದುವರಿದಿದ್ದು, ಇಬ್ಬರೂ ಆರೋಗ್ಯವಾಗಿದ್ದಾರೆ.

ಸಂಬಂಧಿ ಯುವಕನ ಜೊತೆ ಪ್ರೀತಿ: ಮನೆಯಲ್ಲಿ ವಿದ್ಯಾರ್ಥಿನಿ ಮತ್ತು ಅವರ ತಾಯಿ ಮಾತ್ರ ವಾಸವಾಗಿದ್ದಾರೆ. ತಂದೆ ಬೇರೆ ಕಡೆ ಕೆಲಸ ಮಾಡುತ್ತಿದ್ದು, ಆಗಾಗ ಮನೆಗೆ ಬಂದು ಹೋಗುತ್ತಿದ್ದರು. ಈ ಮಧ್ಯೆ ತನ್ನ ಸಂಬಂಧಿ ಯುವಕನ ಜೊತೆ ವಿದ್ಯಾರ್ಥಿನಿಗೆ ಪ್ರೇಮಾಂಕುರವಾಗಿತ್ತು. ಇದು ಮುಂದುವರಿದು ಯುವಕ ಆಗಾಗ ಮನೆಗೆ ಬಂದು ಹೋಗುತ್ತಿದ್ದರಿಂದ ಯುವತಿ ಗರ್ಭಿಣಿಯಾಗಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

ಮದುವೆಗೆ ಒಪ್ಪಿದ ಯುವಕ: ವಿದ್ಯಾರ್ಥಿನಿಯ ಪ್ರಿಯಕರನನ್ನು ಪೊಲೀಸರು ಸಂಪರ್ಕಿಸಿ, ಹೆರಿಗೆ ವಿಷಯ ತಿಳಿಸಿದ್ದಾರೆ. ಆಗ ಯುವಕ, ಯುವತಿ ಜೊತೆಗಿನ ಸಂಬಂಧ ಒಪ್ಪಿಕೊಂಡಿದ್ದು ಮದುವೆಯಾಗುವುದಾಗಿ ತಿಳಿಸಿದ್ದಾನೆ. ಸದ್ಯ ಯುವಕ ದೂರದ ಸ್ಥಳದಲ್ಲಿದ್ದು, ಎರಡು ದಿನಗಳಲ್ಲಿ ಬರುವುದಾಗಿ ಹೇಳಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಈ ಕುರಿತು ದೂರು ನೀಡಲು ವಿದ್ಯಾರ್ಥಿನಿ ನಿರಾಕರಿಸಿದ್ದರಿಂದ ಯಾವುದೇ ಪ್ರಕರಣ ದಾಖಲಾಗಿಲ್ಲ. ಯುವತಿಯ ಗೆಳೆಯ ಬಂದ ಬಳಿಕ ಹೇಳಿಕೆಯನ್ನು ಬರಹದಲ್ಲಿ ದಾಖಲಿಸಿಕೊಳ್ಳಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.

ಯುವಕ ಬಂದ ಬಳಿಕ ಮದುವೆ ಮಾಡುವ ಬಗ್ಗೆ ಎರಡೂ ಕುಟುಂಬಸ್ಥರ ಜೊತೆ ಚರ್ಚಿಸಲಾಗುತ್ತದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ಹೆರಿಗೆ ನಂತರ ಆತಂಕ, ಖಿನ್ನತೆಗೆ ಒಳಗಾಗಿದ್ದೀರಾ? ನಿರ್ಲಕ್ಷಿಸಿದರೆ ತಾಯಿ & ಮಗುವಿಗೆ ಅಪಾಯ!: ವೈದ್ಯರು ಹೇಳೋದೇನು?

Last Updated : Feb 2, 2025, 1:13 PM IST

ABOUT THE AUTHOR

...view details