ಹೈದರಾಬಾದ್: 2019ರ ಈಸ್ಟರ್ ಭಾನುವಾರ ನಡೆದ ಬಾಂಬ್ ದಾಳಿ ಹಾಗು ಮತ್ತಿತರ ಅಹಿತಕರ ಘಟನೆಗಳಿಂದಾಗಿ ಶ್ರೀಲಂಕಾದ ಪ್ರವಾಸೋದ್ಯಮ ಗಮನಾರ್ಹ ಕುಸಿತ ಕಂಡಿತ್ತು. ಸದ್ಯ ದೇಶ ಆರ್ಥಿಕ ಬಿಕ್ಕಟ್ಟಿನಿಂದು ಚೇತರಿಕೆ ಕಾಣುತ್ತಿದ್ದು, ಭಾರತ ಸೇರಿದಂತೆ 35 ದೇಶಗಳಿಗೆ ವೀಸಾಮುಕ್ತ ಪ್ರವಾಸಕ್ಕೆ ಅವಕಾಶ ಕಲ್ಪಿಸಿದೆ. ಈ ನಿರ್ಧಾರವು ಹೆಚ್ಚು ಅಂತಾರಾಷ್ಟ್ರೀಯ ಪ್ರಯಾಣಿಕರನ್ನು ಆಕರ್ಷಿಸಲಿದೆ.
ಕಳೆದ ತಿಂಗಳು ಶ್ರೀಲಂಕಾ ತನ್ನ ಪೋರ್ಟಲ್ ಸಮಸ್ಯೆಯಿಂದಾಗಿ ಆನ್ಲೈನ್ ವೀಸಾ ಸೇವೆಯನ್ನು ನಿಲ್ಲಿಸಿತ್ತು. ಇದರ ಪರಿಣಾಮ, ಅನೇಕರು ವೀಸಾ ಪಡೆಯಲು ಬಹಳಷ್ಟು ಸಮಯ ಕಾಯಬೇಕಾಗಿತ್ತು. ಇದೀಗ ದ್ವೀಪರಾಷ್ಟ್ರಕ್ಕೆ ಭೇಟಿ ನೀಡಲು ಕಡ್ಡಾಯ ವೀಸಾ ನಿರ್ಬಂಧವನ್ನು ತೆಗೆದುಹಾಕಿದೆ. ಭಾರತೀಯರು ವೀಸಾಕ್ಕೆ ಕಾಯದೇ ವರ್ಷದ ಯಾವುದೇ ಸಮಯದಲ್ಲೂ ಪ್ರವಾಸ ಕೈಗೊಳ್ಳಬಹುದಾಗಿದೆ.
ಭಾರತದ ಜೊತೆಗೆ ಯುಕೆ, ಯುಎಸ್ಎ, ಕೆನಡಾ, ಜರ್ಮನಿ, ಆಸ್ಟ್ರೇಲಿಯಾ, ಸೌದಿ ಅರೇಬಿಯಾ, ಚೀನಾ, ರಷ್ಯಾ, ದಕ್ಷಿಣ ಕೋರಿಯಾ ಮತ್ತು ಜಪಾನ್ ಸೇರಿದಂತೆ ಒಟ್ಟು 35 ದೇಶಗಳಿಗೆ ವೀಸಾಮುಕ್ತ ಅವಕಾಶಕ್ಕೆ ಸರ್ಕಾರ ಒಪ್ಪಿಗೆ ನೀಡಿದೆ ಎಂದು ಶ್ರೀಲಂಕಾದ ವಿದೇಶಾಂಗ ಸಚಿವ ಅಲಿ ಸಬ್ರೆ ತಿಳಿಸಿದ್ದಾರೆ.
ಇದರಿಂದಾಗಿ, ಪ್ರವಾಸಿಗರು ಈ ಹಿಂದೆ ಶ್ರೀಲಂಕಾ ವಿಧಿಸಿದ್ದ 25 ಡಾಲರ್ ವೆಚ್ಚವಿಲ್ಲದೆ ವೀಸಾಗಳಿಗೆ ಅರ್ಜಿ ಸಲ್ಲಿಸಬಹುದು. ವೀಸಾಮುಕ್ತ ನೀತಿ 2024ರ ಅಕ್ಟೋಬರ್ 1ರಿಂದ ಜಾರಿಗೆ ಬಂದಿದೆ.
ಈ ದೇಶಗಳಿಗೆ ವೀಸಾ ಮುಕ್ತ ಪ್ರವೇಶ: