Special Story on Kondapalli Fort in NTR District : NRT ಜಿಲ್ಲೆ, ಆಂಧ್ರಪ್ರದೇಶ: ಇದು ಅತ್ಯದ್ಭುತ ಕೋಟೆಯಾಗಿದೆ. ಎತ್ತರದ ಕಟ್ಟಡಗಳು, ಕಲ್ಲಿನ ಬುರ್ಜ್ಗಳು , ರಾಜಮನೆತನಗಳು, ದೊಡ್ಡ ಕೊಳಗಳು.. ಐತಿಹಾಸಿಕ ಕಟ್ಟಡಗಳು ಮತ್ತು ಅಂದಿನ ಕಲಾಕೃತಿಗಳು, ಅಲ್ಲಿಡುವ ಪ್ರತಿ ಹೆಜ್ಜೆಯೂ ರಾಜಮನೆತನದ ವೈಭವವನ್ನು ನೆನಪು ಮಾಡುತ್ತವೆ. ಈ ಕೋಟೆ ಇರುವುದು ಎನ್ಟಿಆರ್ ಜಿಲ್ಲೆಯ ಇಬ್ರಾಹಿಂಪಟ್ಟಣಂ ಬಳಿ.
ಕೊಂಡಪಲ್ಲಿ ಕೋಟೆಯು ತೆಲುಗು ನೆಲದಲ್ಲಿರುವ ಪ್ರಸಿದ್ಧ ಐತಿಹಾಸಿಕ ಪ್ರವಾಸಿ ಸ್ಥಳಗಳಲ್ಲಿ ಒಂದಾಗಿದೆ. ಪೂರ್ವ ಘಟ್ಟದಲ್ಲಿರುವ ಕೊಂಡಪಲ್ಲಿ ಕಿಲ್ಲಾ ಪ್ರವಾಸಿಗರ ಮನಸೆಳೆಯುತ್ತಿದೆ. ಕೊಂಡಪಲ್ಲಿ ಹತ್ತನೇ ಶತಮಾನದಿಂದಲೂ ಅನೇಕ ರಾಜರ ಆಕ್ರಮಣಗಳನ್ನು ಎದುರಿಸಿ ನಿಂತ ಕೋಟೆಯಾಗಿದೆ. ಅಲ್ಲಿನ ಶಿಲ್ಪಗಳು ಇಂದಿನ ಪೀಳಿಗೆಗೆ ಹಲವು ಇತಿಹಾಸಗಳನ್ನು ಹೇಳುತ್ತವೆ. ಶಿಥಿಲಗೊಂಡ ಗೋಡೆಗಳಿರುವ ದರ್ಬಾರ್, ರಾಣಿ ಮಹಲ್, ಜೈಲ್ಖಾನಾ, ನಾಟ್ಯಶಾಲಾಗಳನ್ನು ಕಾಣಬಹುದಾಗಿದೆ. ಅಂದಿನ ವಾಸ್ತುಶೈಲಿಯ ಬಗ್ಗೆಯೂ ಈ ಕೋಟೆಗೆ ಭೇಟಿ ಕೊಟ್ಟು ತಿಳಿದುಕೊಳ್ಳಬಹುದು.