ETV Bharat / entertainment

ಶಿವಣ್ಣನ ಟಗರು ಸಾಂಗ್​ಗೆ ಯಶ್​ ಮಸ್ತ್​ ಡ್ಯಾನ್ಸ್​​: ಮಗನ ಬರ್ತ್​ಡೇ ಪಾರ್ಟಿ ವಿಡಿಯೋ ವೈರಲ್​ - YASH DANCE

ರಾಕಿಂಗ್​ ಸ್ಟಾರ್​ ಯಶ್​ ಅವರ ಮಸ್ತ್​​ ಡ್ಯಾನ್ಸ್​​ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ಸಖತ್​ ವೈರಲ್​ ಆಗುತ್ತಿದೆ.

Rocking star Yash
ರಾಕಿಂಗ್​ ಸ್ಟಾರ್​ ಯಶ್​​​ (ANI)
author img

By ETV Bharat Entertainment Team

Published : Oct 31, 2024, 1:13 PM IST

ಭಾರತೀಯ ಚಿತ್ರರಂಗದಲ್ಲಿ ತಮ್ಮದೇ ಆದ ವಿಭಿನ್ನ ಸ್ಟಾರ್​ ಡಮ್​ ಹೊಂದಿರುವ ರಾಕಿಂಗ್​ ಸ್ಟಾರ್​ ಯಶ್​​​ ಸದ್ಯ ತಮ್ಮ ಬಹುನಿರೀಕ್ಷಿತ ಸಿನಿಮಾ ಟಾಕ್ಸಿಕ್​​ ಸಲುವಾಗಿ ಸಖತ್​ ಸುದ್ದಿಯಲ್ಲಿದ್ದಾರೆ. ಸಿನಿಮಾ ಕುರಿತು ದೂರದೃಷ್ಟಿಯಿಟ್ಟುಕೊಂಡಿರುವ ಭಾರತೀಯ ಚಿತ್ರರಂಗದ ಹೆಸರಾಂತ ನಟ ಪಕ್ಕಾ ಫ್ಯಾಮಿಲಿ ಮ್ಯಾನ್​ ಕೂಡಾ ಹೌದು. ಕುಟುಂಬಕ್ಕೆ ಹೆಚ್ಚಿನ ಸಮಯ ನೀಡುವ ಯಶ್​ ಅವರ ವಿಡಿಯೋವೊಂದು ಸದ್ಯ ಸೋಷಿಯಲ್​ ಮೀಡಿಯಾದಲ್ಲಿ ಸಖತ್​ ಸದ್ದು ಮಾಡುತ್ತಿದೆ.

ಕರುನಾಡ ಚಕ್ರವರ್ತಿ ಶಿವರಾಜ್​ಕುಮಾರ್​ ಅವರ ಹಿಟ್​ 'ಟಗರು' ಸಿನಿಮಾದ ಟೈಟಲ್​ ಟ್ರ್ಯಾಕ್​ಗೆ ಸಖತ್​ ಸ್ಟೆಪ್​ ಹಾಕಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದದಲ್ಲಿ ವ್ಯಾಪಕವಾಗಿ ವೈರಲ್​ ಆಗುತ್ತಿದೆ. ಜೊತೆಗೆ ವ್ಯಾಪಕ ಮೆಚ್ಚುಗೆಯೂ ವ್ಯಕ್ತವಾಗುತ್ತಿವೆ.

ಮುಂದಿನ ಏಪ್ರಿಲ್​​ಗೆ ಅದ್ಧೂರಿಯಾಗಿ ಬಿಡುಗಡೆಯಾಗಲು ಪ್ಲ್ಯಾನ್​ ಹಾಕಿಕೊಂಡಿರುವ 'ಟಾಕ್ಸಿಕ್​​' ಚಿತ್ರದ ನಾಯಕ ನಟ ಯಶ್​ ಮಗನ ಜನ್ಮದಿನಾಚರಣೆಗಾಗಿ ಬಿಡುವು ಮಾಡಿಕೊಂಡಿದ್ದಾರೆ. ಕಳೆದ ದಿನ ಬರ್ತ್​ಡೇ ಸೆಲೆಬ್ರೇಟ್​ ಮಾಡಿರುವ ನಟ ಭರ್ಜರಿ ಡ್ಯಾನ್ಸ್ ಮಾಡಿ ಗಮನ ಸೆಳೆದಿದ್ದಾರೆ. ಆ್ಯಕ್ಷನ್​​ ಸಿನಿಮಾ ಸಲುವಾಗಿ ಸಖತ್​ ಸುದ್ದಿಯಲ್ಲಿರುವ ನಟನ ಡ್ಯಾನ್ಸ್​ ಬಗ್ಗೆ ಹಲವು ಪ್ರಶ್ನೆಗಳೆದಿದ್ದವು. ಅವರ ನೃತ್ಯ ನೋಡಲು ಹೆಚ್ಚಿನ ಸಂಖ್ಯೆಯ ಅಭಿಮಾನಿಗಳು ಕಾತರರಾಗಿದ್ದರು.

ಅದರಂತೆ ಸಾಮಾಜಿಕ ಜಾಲತಾಣದಲ್ಲಿ ಹೊರಬಿದ್ದಿರುವ ವಿಡಿಯೋದಲ್ಲಿ ರಾಕಿಂಗ್​ ಸ್ಟಾರ್​ನ ಮಸ್ತ್​ ಡ್ಯಾನ್ಸ್​ ನೋಡಬಹುದಾಗಿದೆ. ಶರವೇಗದಲ್ಲಿ ವೈರಲ್​ ಆಗುತ್ತಿರುವ ಈ ವಿಡಿಯೋಗೆ ಸಾಕಷ್ಟು ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ನಟನ ಈ ಅವತಾರ ಕಂಡು ಎಷ್ಟು ದಿನಗಳಾಗಿತ್ತು ಎಂದು ಅಭಿಮಾನಿಗಳು ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ. ಅದರಲ್ಲೂ ಹ್ಯಾಟ್ರಿಕ್​​ ಹೀರೋನ ಸಾಂಗೇ ಈ ವಿಡಿಯೋದ ಹೈಲೆಟ್​ ಎನ್ನಬಹುದು.

ಇದನ್ನೂ ಓದಿ: 'ಟಾಕ್ಸಿಕ್' ಶೂಟಿಂಗ್ ಸ್ಪಾಟ್​​​ಗೆ ಸಚಿವ ಈಶ್ವರ್​ ಖಂಡ್ರೆ ಭೇಟಿ: ಮತ್ತೆ ಸಂಕಷ್ಟದಲ್ಲಿ ಯಶ್​ ಸಿನಿಮಾ

ಯಶ್​ ಸದ್ಯ ಪ್ಯಾನ್​ ಇಂಡಿಯಾ ಸ್ಟಾರ್. ಇವರ ಸ್ಟಾರ್​ಡಮ್​​​ ವರ್ಣನಾತೀತ. ಕೋಟ್ಯಂತರ ಅಭಿಮಾನಿಗಳ ಜೊತೆಗೆ ಭಾರತೀಯ ಚಿತ್ರರಂಗದ ಹೆಸರಾಂತ ತಾರೆಯರು ಸಹ ನಟನ ನಟನಾ ಕೌಶಲ್ಯವನ್ನು ಹಾಡಿ ಹೊಗಳಿದ್ದಾರೆ. ಇಷ್ಟು ದೊಡ್ಡ ಸ್ಟಾರ್​ ಆದ್ರೂ ಕೂಡಾ ಸರಳತೆ ಮರೆತಿಲ್ಲ ಎಂದು ಅಭಿಮಾನಿಗಳು ಗುಣಗಾನ ಮಾಡಿದ್ದಾರೆ. ಮಗನ ಹುಟ್ಟುಹಬ್ಬ ಸಂಭ್ರಮಿಸಲು ಕನ್ನಡದ ಜನಪ್ರಿಯ ಹಾಡನ್ನೇ ಆಯ್ಕೆ ಮಾಡಿದ್ದಾರೆ, ಪಡ್ಡೆ ಹೈಕ್ಳ ಮೆಚ್ಚಿನ ಹಾಡಿಗೆ ಸಖತ್​ ಸ್ಟೈಲಿಷ್​​ ಸ್ಟೆಪ್​ ಹಾಕಿದ್ದಾರೆ, ಆತ್ಮೀಯರೊಂದಿಗೆ ಗುಣಮಟ್ಟದ ಸಮಯ ಕಳೆದಿದ್ದಾರೆ ಎಂದು ಅಭಿಮಾನಿಗಳು ಗುಣಗಾನ ಮಾಡುತ್ತಿದ್ದಾರೆ.

ಇದನ್ನೂ ಓದಿ: ಯಶ್​ ಪುತ್ರನ 5ನೇ ಜನ್ಮದಿನ: ಕುಟುಂಬದ ಸುಂದರ ಕ್ಷಣಗಳನ್ನು ಹಂಚಿಕೊಂಡ ರಾಧಿಕಾ ಪಂಡಿತ್​​

2019ರ ಅಕ್ಟೋಬರ್​ 30ರಂದು ಜನಿಸಿದ ಯಥರ್ವ್ ಅಕ್ಟೋಬರ್​ 30ರಂದು ತನ್ನ ಐದನೇ ವರ್ಷದ ಜನ್ಮದಿನ ಆಚರಿಸಿಕೊಂಡಿದ್ದಾನೆ.​ ಕಳೆದ ದಿನ ನಟಿ ರಾಧಿಕಾ ಪಂಡಿತ್​​ ತಮ್ಮ ಅಧಿಕೃತ ಇನ್​ಸ್ಟಾಗ್ರಾಮ್​ನಲ್ಲಿ ಕುಟುಂಬದ ಸುಂದರ ಕ್ಷಣಗಳನ್ನೊಳಗೊಂಡ ಸ್ಪೆಷಲ್​ ವಿಡಿಯೋ ಶೇರ್​ ಮಾಡಿ ಮಗನಿಗೆ ಜನ್ಮದಿನದ ಶುಭಾಶಯ ಕೋರಿದ್ದರು. ಈ ವಿಡಿಯೋ ಕೂಡಾ ಸಾಮಾಜಿಕ ಜಾಲತಾಣದಲ್ಲಿ ಸಖತ್​ ಸದ್ದು ಮಾಡಿತ್ತು. ಇದರ ಬೆನ್ನಲ್ಲೇ, ಯಶ್​ ವಿಡಿಯೋ ಹೊರಬಿದ್ದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.