ETV Bharat / bharat

ನಕಲಿ ನೀಟ್​ ಅಂಕಪಟ್ಟಿಯೊಂದಿಗೆ ಮದ್ರಾಸ್​ ಮಡಿಕಲ್​ ಕಾಲೇಜ್​​ ಸೇರಲು ಮುಂದಾದ ವಿದ್ಯಾರ್ಥಿ ಬಂಧನ

ಸೆಪ್ಟೆಂಬರ್​ 29ರಂದು ಪೋಷಕರೊಂದಿಗೆ ಕಾಲೇಜಿಗೆ ಬಂದ ವಿದ್ಯಾರ್ಥಿಯೊಬ್ಬ ಶಾಲಾ ಆಡಳಿತ ಮಂಡಳಿ ಮುಂದೆ ನಕಲಿ ಅಂಕಪಟ್ಟಿ ದಾಖಲೆ ನೀಡಿ, ಪ್ರವೇಶ ಪಡೆಯಲು ಯತ್ನಿಸಿದ್ದ. ಈ ಬಗ್ಗೆ ವಿಚಾರಣೆ ನಡೆಸಿದ ಪೊಲೀಸರು ಆತನನ್ನು ಬಂಧಿಸಿದ್ದಾರೆ.

NEET Crime: Student Arrested for Attempting to Join Madras Medical College with Fake Scorecard
ಸಾಂದರ್ಭಿಕ ಚಿತ್ರ (ಸಂಗ್ರಹ ಚಿತ್ರ)
author img

By ETV Bharat Karnataka Team

Published : 3 hours ago

ಚೆನ್ನೈ, ತಮಿಳುನಾಡು: ನೀಟ್​​ ನಕಲಿ ಅಂಕಪಟ್ಟಿಯೊಂದಿಗೆ ಮದ್ರಾಸ್​ ಮೆಡಿಕಲ್​ ಕಾಲೇಜಿನಲ್ಲಿ ಪ್ರವೇಶ ಪಡೆಯಲು ಮುಂದಾಗಿದ್ದ ವಿದ್ಯಾರ್ಥಿಯನ್ನು ಚೆನ್ನೈ ಪೊಲೀಸರು ಬಂಧಿಸಿದ್ದಾರೆ. ಚೆನ್ನೈನ ಮೆದವಕ್ಕಂನ ಲಕ್ಸೈ ಈ ವಂಚನೆ ಎಸಗಲು ಮುಂದಾದ ವಿದ್ಯಾರ್ಥಿ. ಈತ ನೀಟ್​ ಪರೀಕ್ಷೆಯಲ್ಲಿ ಕೇವಲ 129 ಅಂಕ ಪಡೆದಿದ್ದರೂ ತಾನೂ 698 ಅಂಕ ಪಡೆದಿದ್ದೇನೆ ಎಂಬ ನಕಲಿ ಅಂಕಪಟ್ಟಿಯನ್ನು ಕಾಲೇಜು ಆಡಳಿತ ಮಂಡಳಿ ಮುಂದಿರಿಸಿದ್ದಾನೆ.

ಸೆಪ್ಟೆಂಬರ್​ 29ರಂದು ಪೋಷಕರೊಂದಿಗೆ ಕಾಲೇಜಿಗೆ ಬಂದ ಲಕ್ಸೈ ಶಾಲಾ ಅಡಳಿತ ಮಂಡಳಿ ಮುಂದೆ ನಕಲಿ ಅಂಕಪಟ್ಟಿ ದಾಖಲೆ ನೀಡಿದ್ದಾನೆ. ಈತನ ಅಂಕಗಳನ್ನು ಕಂಡು ಅನುಮಾನಗೊಂಡ ಕಾಲೇಜು ಸಿಬ್ಬಂದಿ ಕಿಲ್ಪಾಕ್‌ನಲ್ಲಿರುವ ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯದ ಕಚೇರಿಗೆ ಈ ಕುರಿತು ವಿವರಣೆ ಕೋರಿದ್ದಾರೆ. ಬಳಿಕ ವೈದ್ಯಕೀಯ ಶಿಕ್ಷಣ ಉಪ ನಿರ್ದೇಶಕರು ಇದು ನಕಲಿ ದಾಖಲಾತಿ ಎಂದಿದ್ದಾರೆ.

ಅಧಿಕಾರಿಗಳಿಗೆ ತನ್ನ ಅಂಕಪಟ್ಟಿಯ ಬಗ್ಗೆ ಅನುಮಾನವಿದೆ ಎಂಬ ಸುಳಿವಿಲ್ಲದ ಲಕ್ಸೈ ಕಿಲ್ಪಾಕ್​ ವೈದ್ಯಕೀಯ ಕಾಲೇಜು ಅಧಿಕಾರಿ ಬಳಿ ಹೋಗಿದ್ದಾರೆ. ಈ ವೇಳೆ ಆತನನ್ನು ವಿಚಾರಣೆಗೆ ಒಳಪಡಿಸಿದಾಗ ಆತನ ನೀಟ್​ ಅಂಕಪಟ್ಟಿ ಮತ್ತು ದಾಖಲಾತಿ ಪ್ರಮಾಣಪತ್ರ ಎರಡು ನಕಲಿ ಎಂಬುದು ಸಾಬೀತಾಗಿದೆ. ಈ ಬೆನ್ನಲ್ಲೇ ಕಿಲ್ಫಾಕ್​ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿದೆ.

2023ರಲ್ಲಿ ಲಕ್ಸೈ ನೀಟ್​ನಲ್ಲಿ 127 ಅಂಕ ಗಳಿಸಿದರೆ, 2024ರ ನೀಟ್​ನಲ್ಲಿ 129 ಅಂಕ ಕಳಿಸಿದ್ದ ಎಂಬುದು ಪೊಲೀಸ್​ ತನಿಖೆಯಲ್ಲಿ ಬಯಲಾಗಿದೆ. ಆತ ಉತ್ತಮ ಪ್ರತಿಷ್ಠಿತ ವೈದ್ಯಕೀಯ ಕಾಲೇಜಿನಲ್ಲಿ ದಾಖಲಾತಿ ಪಡೆಯಬೇಕು ಎಂಬ ಉದ್ದೇಶದಿಂದ ಈ ರೀತಿ ನಕಲಿ ಅಂಕಪಟ್ಟಿ ಸೃಷ್ಟಿಸಿದ್ಧ ಎಂಬುದು ಕಂಡು ಬಂದಿದೆ.

ಈ ರೀತಿಯ ನಕಲಿ ಅಂಕಪಟ್ಟಿ ತಯಾರಿಸಲು ಆತನಿಗೆ ಪಲವಕ್ಕಂನಲ್ಲಿನ ಖಾಸಗಿ ವೈದ್ಯಕೀಯ ಕಾಲೇಜಿನಲ್ಲಿ ಉದ್ಯೋಗಿ ಫಾತಿಮಾ ಮತ್ತು ತಿರುವಮಿಯುರ್​ನಲ್ಲಿನ ಆಡ್ಯಾರ್​ ಜೆರಾಕ್ಸ್​ ಶಾಪ್​ನ ಉದ್ಯೋಗಿ ಸಹಾಯ ಮಾಡಿದ್ದು, ಸದ್ಯ ಇವರಿಬ್ಬರು ನಾಪತ್ತೆಯಾಗಿದ್ದಾರೆ.

ಸದ್ಯ ಲಕ್ಸೈ ಮೇಲೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಆರೋಪಿಗಳು ಇತರ ವಿದ್ಯಾರ್ಥಿಗಳಿಗೂ ನಕಲಿ ಪ್ರಮಾಣ ಪತ್ರ ಸೃಷ್ಟಿಸುವ ಕಾರ್ಯದಲ್ಲಿ ಭಾಗಿಯಾಗಿದ್ದಾರೆಯೇ ಎಂಬುದನ್ನು ಪತ್ತೆ ಹಚ್ಚಲು ಮುಂದಾಗಿದ್ದಾರೆ.

ಇದನ್ನೂ ಓದಿ: ನವಿ ಮುಂಬೈನಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟ: ತಾಯಿ, ಮಗ, ಮಗಳು ಸಾವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.