ETV Bharat / state

ದ್ವೇಷ ಬಿಟ್ಟು ಒಗ್ಗಟ್ಟಾಗಿದ್ದರೆ ನಿಮ್ಮ ಮೇಲೆ ಯಾರೂ ಕೈ ಎತ್ತಲ್ಲ: ರಾಜ್ಯ ನಾಯಕರಿಗೆ ಖರ್ಗೆ ಬುದ್ಧಿ ಮಾತು - MALLIKARJUN KHARGE

ದ್ವೇಷ ಸಾಧಿಸುವುದನ್ನು ಬಿಟ್ಟು ಎಲ್ಲರೂ ಒಗ್ಗಟ್ಟಾಗಿ ಹೋದರೆ ಪಕ್ಷ ಇನ್ನಷ್ಟು ಬಲಗೊಳ್ಳುತ್ತದೆ ಎಂದು ರಾಜ್ಯ ಕೈ ನಾಯಕರಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬುದ್ಧಿ ಮಾತು ಹೇಳಿದರು.

ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ, ಡಿಕೆಶಿವಕುಮಾರ್
ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ, ಡಿಕೆಶಿವಕುಮಾರ್ (ETV Bharat)
author img

By ETV Bharat Karnataka Team

Published : Oct 31, 2024, 3:42 PM IST

ಬೆಂಗಳೂರು: ಯಾರಿಗಾದ್ರೂ‌ ನೋವಾದ್ರೆ ಎಲ್ಲರೂ ಒಟ್ಟಾಗಬೇಕು. ಖುಷಿ ಪಡುವುದನ್ನು ಮೊದಲು ಬಿಡಿ. ಒಗ್ಗಟ್ಟಿದ್ದರೆ ಮಾತ್ರ ಖುಷಿ ಎಂದು ರಾಜ್ಯ ಕೈ ನಾಯಕರಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೀತಿ ಪಾಠ ಹೇಳಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಇಂದಿರಾ ಗಾಂಧಿ ಪುಣ್ಯಸ್ಮರಣೆ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯಗೆ ಏನಾದ್ರೂ ಆದ್ರೆ ಇನ್ನೊಬ್ಬರು ಖುಷಿ ಪಡೋದು, ಶಿವಕುಮಾರ್​​ಗೆ ಏನಾದ್ರೂ ಆದ್ರೆ ಮತ್ತೊಬ್ಬರು ಖುಷಿ ಪಡುವುದನ್ನ ಬಿಡಬೇಕು. ಏನೇ ಆದ್ರೂ ಒಗ್ಗಟ್ಟಾಗಿರಬೇಕು. ಒಬ್ಬರನ್ನು ಕಂಡ್ರೆ ಮತ್ತೊಬ್ಬರು ಉರಿದುಕೊಳ್ಳಬೇಡಿ. ನಿಮ್ಮನ್ನು ಅಟ್ಟಕ್ಕೇರಿಸಿ ಪಕ್ಷ ಹಾಳು ಮಾಡುವವರಿದ್ದಾರೆ. ಅವರು ಹೇಳಿದಂತೆ ಕೇಳಿದ್ರೆ ಪಕ್ಷವೇ ಒಡೆದು ಹೋಗುತ್ತದೆ. ಮೊದಲು ನೀವು ಎಚ್ಚೆತ್ತುಕೊಳ್ಳಿ. ಒಗ್ಗಟ್ಟಿನಿಂದ ಎಲ್ಲರೂ ಹೋರಾಡಿ ಆಗ ಪಕ್ಷ ಬಲಗೊಳ್ಳುತ್ತದೆ. ಎಲ್ಲರೂ ಒಂದಾಗಿದ್ದರೆ ಯಾರೂ ನಿಮ್ಮ‌ ಮೇಲೆ ಕೈ ಎತ್ತಲ್ಲ ಎಂದು ತಿಳಿಸಿದರು. ಇದೇ ವೇಳೆ ವೈಯಕ್ತಿಕ ಭಿನ್ನಾಭಿಪ್ರಾಯಗಳನ್ನು ಸರಿಪಡಿಸಿಕೊಳ್ಳುವಂತೆ ತಾಕೀತು ಮಾಡಿದರು.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (ETV Bharat)

ರಾಜ್ಯ ರಾಜಕಾರಣದ ವಿಚಾರದಲ್ಲಿ ನಾನು ಕೈ ಹಾಕಲ್ಲ. ಏನೇ ಕೇಳಿದ್ರೂ ಸ್ಟೇಟ್​ನವರನ್ನು ಕೇಳಿ ಅಂತೇನೆ. ನಾನೇನಾದ್ರೂ‌ ಮಾತನಾಡಿದ್ರೆ ರಾಷ್ಟ್ರಮಟ್ಟದಲ್ಲಿ ಅದು ದೊಡ್ಡದಾಗುತ್ತದೆ. ಅದಕ್ಕೆ ನಾನು ಏನೂ‌ ಮಾತನಾಡಲ್ಲ. ಇಲ್ಲಿ ನೀವೇ ಬಗೆಹರಿಸಿಕೊಳ್ಳಬೇಕು ಎಂದು ಎಐಸಿಸಿ ಅಧ್ಯಕ್ಷರು ಸಲಹೆ ನೀಡಿದರು.

ಬಜೆಟ್ ಇದ್ದಷ್ಟು ಗ್ಯಾರಂಟಿ ಕೊಡಿ: ಗ್ಯಾರಂಟಿ ಬಗ್ಗೆ ಡಿಕೆಶಿ ಹೇಳಿಕೆ ವಿಚಾರವಾಗಿ ಪ್ರಸ್ತಾಪಿಸಿದ ಖರ್ಗೆ, ಐದು ಗ್ಯಾರಂಟಿಗಳಲ್ಲಿ ಒಂದು ಗ್ಯಾರಂಟಿ ನಿಲ್ಲಿಸುತ್ತೇವೆ ಎಂದು ನೀನೇನೋ‌ ಹೇಳಿರುವೆ ಎಂದು ಪಕ್ಕದಲ್ಲಿದ್ದ ಡಿಕೆಶಿ ಕಡೆ ತಿರುಗಿ ಕೇಳಿದರು. ಆಗ ಡಿಕೆಶಿ ನಾನು ಏನೂ‌ ಹೇಳಿಲ್ಲ ಎಂದರು. ಆಗ ಖರ್ಗೆ, ನೀನು ಪೇಪರ್ ನೋಡಿಲ್ಲ, ನಾನು ನೋಡ್ತೇನೆ. ಪೇಪರ್​ನಲ್ಲಿ ನೀನು ಹೇಳಿದೆ ಅಂತ ಬಂದಿದೆ ಎಂದರು.

ಇಲ್ಲ.. ಪರಿಷ್ಕರಣೆ ಅಂತ ಹೇಳಿದ್ದಾರೆ ಎಂದು ಸಿಎಂ ಮಧ್ಯಪ್ರವೇಶಿಸುತ್ತಾರೆ. ಪರಿಷ್ಕರಣೆ ಮಾಡ್ತೇವೆ ಅಂದಿದ್ದಕ್ಕೆ ಈಗ ಎಲ್ಲರೂ ಅನುಮಾನ ಪಡುತ್ತಾರಲ್ಲ ಎಂದು ಖರ್ಗೆ ತಿಳಿಸಿದರು. ನಿಮ್ಮ ಗ್ಯಾರಂಟಿಯನ್ನು ನಾವು ಮಹಾರಾಷ್ಟ್ರದಲ್ಲಿ ಅನುಕರಣೆ ಮಾಡುತ್ತಿದ್ದೇವೆ. ಅವರಿಗೆ ಹೇಳಿದ್ದೇವೆ. ಐದು, ಆರು, ಹತ್ತು ಗ್ಯಾರಂಟಿ ಅಂತ ಘೋಷಿಸಬೇಡಿ. ನಿಮ್ಮಲ್ಲಿ ಏನು ಬಜೆಟ್ ಇದೆ. ಬಜೆಟ್​ಗೆ ಅನುಗುಣವಾಗಿ ಗ್ಯಾರಂಟಿ ಕೊಡಿ ಎಂದು ಅಲ್ಲಿನ ನಾಯಕರಿಗೆ ಹೇಳಿದ್ದೇವೆ ಎಂದು ತಿಳಿಸಿದರು.

ಬಜೆಟ್ ಬಿಟ್ಟು ಗ್ಯಾರಂಟಿ ಕೊಟ್ಟರೆ ಇಲ್ಲಿ ದಿವಾಳಿ ಆಗಿ ಹೋಗುತ್ತದೆ. ರಸ್ತೆ ಗುಂಡಿಗೆ ಒಂದು ಬುಟ್ಟಿ ಮಣ್ಣು ಹಾಕಲು ಹಣ ಇರಲ್ಲ. ಆಗ ಎಲ್ಲರೂ ನಿಮ್ಮ ಮೇಲೆ ಮುಗಿಬೀಳುತ್ತಾರೆ. ಈ ಸರ್ಕಾರ ವಿಫಲವಾದರೆ, ಕೆಟ್ಟ ಹೆಸರು ಇಟ್ಟು ಹೋಗ್ತೀರಾ ಹೊರತು ಒಳ್ಳೆಯ ಹೆಸರು ಇಟ್ಟು ಹೋಗಲ್ಲ. ಮತ್ತೆ 10 ವರ್ಷ ವನವಾಸದಲ್ಲಿ ಇರಬೇಕಾಗುತ್ತದೆ ಎಂದು ಪರೋಕ್ಷವಾಗಿ ಖರ್ಗೆ ಎಚ್ಚರಿಕೆ ನೀಡಿದರು.

ಇವಿಎಂ ಬಗ್ಗೆ ಖರ್ಗೆ ಅನುಮಾನ: ಇವಿಎಂ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಮಲ್ಲಿಕಾರ್ಜುನ ಖರ್ಗೆ, ಹರಿಯಾಣ ಚುನಾವಣೆ ಫಲಿತಾಂಶದ ಬಗ್ಗೆ ಪ್ರಸ್ತಾಪಿಸಿ, ನಾವು ಹರಿಯಾಣ ಸೋತಿದ್ದೇಗೆ?. ರಾತ್ರೋರಾತ್ರಿ ಇವರು ಬದಲಾವಣೆ ಮಾಡಿಕೊಂಡ್ರು. 66 ರಿಂದ 37ಕ್ಕೆ ಬರುತ್ತೆ ಅಂದ್ರೆ ಹೇಗೆ?. ಅವರು ನಿಜವಾಗಿ ಎಲೆಕ್ಷನ್ ಗೆದ್ದಿಲ್ಲ. ಮೋಸದಿಂದ ಅವರು ಗೆದ್ದಿದ್ದು. ಇವಿಎಂಗಳು ಹಲವು ದೇಶಗಳಲ್ಲಿ ಇಲ್ಲ. ಅಮೆರಿಕ, ಕೆನಡಾ, ಆಸ್ಟ್ರೇಲಿಯಾ ಎಲ್ಲಿಯೂ ಇಲ್ಲ. ಹಲವು ಕಡೆ ಬ್ಯಾಲೆಟ್ ಪೇಪರ್ ಇದೆ ಎಂದರು.

ನಮ್ಮ‌ ದುರ್ದೈವ ಲೋಕಸಭೆ ಚುನಾವಣೆಯಲ್ಲಿ ಇನ್ನೊಂದು 25-30 ಸೀಟು ಬರಲಿಲ್ಲ. ಸಂವಿಧಾನ ಬದಲಾವಣೆ ಮಾಡಲು ಆಗಲ್ಲ. ಸಿಂಗಲ್ ಪಾರ್ಟಿ ಮೆಜಾರಿಟಿ ಅವರಿಗೆ ಸಿಕ್ಕಿಲ್ಲ. ಅದರಲ್ಲಿ ನೀವೆಲ್ಲ ಯಶಸ್ವಿಯಾಗಿದ್ದೀರ. ಆರ್​ಎಸ್​​ಎಸ್, ಬಿಜೆಪಿ ಒಡೆದು ಆಳೋಕೆ‌ ನೋಡ್ತಿವೆ. ಇದರ ಬಗ್ಗೆ ನೀವು ಹುಷಾರಾಗಿರಬೇಕು ಎಂದು ಎಐಸಿಸಿ ಅಧ್ಯಕ್ಷ ಖರ್ಗೆ ಎಚ್ಚರಿಕೆ ನೀಡಿದರು.

ಇದನ್ನೂ ಓದಿ: ಸರ್ಕಾರದ ಮುಂದೆ ಶಕ್ತಿ ಯೋಜನೆ ಪರಿಷ್ಕರಿಸುವ ಪ್ರಸ್ತಾಪ ಇಲ್ಲ, ಉದ್ದೇಶವೂ ಇಲ್ಲ: ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.