ಕರ್ನಾಟಕ

karnataka

ETV Bharat / bharat

ಇವರು ದಕ್ಷಿಣ ಭಾರತದ ಮೊದಲ ತೃತೀಯಲಿಂಗಿ ರೈಲ್ವೆ ಟಿಕೆಟ್​ ಇನ್ಸ್​ಪೆಕ್ಟರ್ - ರೈಲ್ವೆ ಟಿಕೆಟ್​ ಇನ್ಸ್​ಪೆಕ್ಟರ್

ದಕ್ಷಿಣ ಭಾರತದಲ್ಲಿ ಇದೇ ಮೊದಲ ಬಾರಿಗೆ ತೃತೀಯಲಿಂಗಿಯೊಬ್ಬರು ರೈಲ್ವೆ ಟಿಕೆಟ್​ ಇನ್ಸ್‌ಪೆಕ್ಟರ್ ಆಗಿ ನೇಮಕವಾಗಿದ್ದಾರೆ.

south-india-gets-its-first-trangender-railway-ticket-inspector
ದಕ್ಷಿಣ ಭಾರತದ ಮೊದಲ ತೃತೀಯಲಿಂಗಿ ರೈಲ್ವೆ ಟಿಕೆಟ್​ ಇನ್ಸ್​ಪ್ಟೆಕರ್ ಈ ಸಿಂಧು

By ETV Bharat Karnataka Team

Published : Feb 9, 2024, 4:13 PM IST

ಚೆನ್ನೈ(ತಮಿಳುನಾಡು):ತಮಿಳುನಾಡು ಮೂಲದ ರೈಲ್ವೆ ಉದ್ಯೋಗಿ, ತೃತೀಯಲಿಂಗಿ ಸಿಂಧು ಎಂಬವರು ರೈಲ್ವೆ ಟಿಕೆಟ್​ ನಿರೀಕ್ಷಕರಾಗಿ (ಟಿಕೆಟ್​ ಇನ್ಸ್​ಪ್ಟೆಕರ್​) ನೇಮಕವಾಗಿದ್ದಾರೆ. ಇದರೊಂದಿಗೆ ಈ ಹುದ್ದೆಗೇರಿದ ದಕ್ಷಿಣ ಭಾರತದ ತೃತೀಯಲಿಂಗಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.

19 ವರ್ಷಗಳ ಹಿಂದೆ ಕೇರಳದ ಎರ್ನಾಕುಲಂನಲ್ಲಿ ಸಿಂಧು ಅವರು ರೈಲ್ವೆ ಇಲಾಖೆಗೆ ಸೇರ್ಪಡೆಗೊಂಡಿದ್ದರು. ಬಳಿಕ ತಮಿಳುನಾಡಿನ ದಿಂಡಿಗಲ್​​ಗೆ ವರ್ಗಾವಣೆಗೊಂಡಿದ್ದರು. ಕಳೆದ 14 ವರ್ಷಗಳಿಂದಲೂ ದಿಂಡಿಗಲ್​​ ರೈಲ್ವೆ ನಿಲ್ದಾಣದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಹಿಂದೆ ಒಮ್ಮೆ ಅವರು ಅಪಘಾತವೊಂದರಲ್ಲಿ ಗಾಯಗೊಂಡಿದ್ದರು. ಆಗ ರೈಲ್ವೆಯ ವಾಣಿಜ್ಯ ವಿಭಾಗಕ್ಕೆ ವರ್ಗಾವಣೆ ಮಾಡಲಾಗಿತ್ತು. ಇದೀಗ ರೈಲ್ವೆ ಟಿಕೆಟ್​ ನಿರೀಕ್ಷಕರನ್ನಾಗಿ ನೇಮಿಸಲಾಗಿದೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಸಿಂಧು, ''ತೃತೀಯಲಿಂಗಿ ಸಮುದಾಯದ ಜನರು ವಿದ್ಯಾಭ್ಯಾಸ ಮಾಡಲೇಬೇಕು. ಸಮಾಜದಲ್ಲಿ ಗೌರವಾನ್ವಿತ ಸ್ಥಾನವನ್ನು ಪಡೆಯಲು ಕಠಿಣವಾಗಿ ಶ್ರಮಿಸಬೇಕು. ಎಷ್ಟೇ ಎತ್ತರದ ಗುರಿಗಳನ್ನು ಶಿಕ್ಷಣ ಹಾಗೂ ಕಠಿಣ ಪರಿಶ್ರಮದಿಂದ ಸಾಧಿಸಬಹುದು ಎಂಬುದನ್ನು ನಾನು ಬಲವಾಗಿ ನಂಬಿದ್ದೇನೆ. ರೈಲ್ವೆ ಟಿಕೆಟ್​ ನಿರೀಕ್ಷಕಿ ಆಗಿರುವುದಕ್ಕೆ ನನಗೆ ಹೆಮ್ಮೆ ಇದೆ. ಈ ಸ್ಥಾನ ಗಳಿಸಲು ಕಠಿಣವಾಗಿ ಶ್ರಮಿಸಿದ್ದೇನೆ'' ಎಂದು ತಿಳಿಸಿದರು.

ತೃತೀಯಲಿಂಗಿ ಸಮುದಾಯದ ಬಗ್ಗೆ ಸಮಾಜದಲ್ಲಿ ಸಾಕಷ್ಟು ಕಡೆಗಣನೆ ಭಾವ ಇದೆ. ಇಂದಿಗೂ ಹಲವಾರು ಕ್ಷೇತ್ರಗಳಲ್ಲಿ ಅವರನ್ನು ಬಹಿಷ್ಕರಿಸುವ ಮನೋಭಾವವಿದೆ. 'ಮಂಗಳಮುಖಿ' ಸಮುದಾಯ ಎಂದು ಕರೆಯಲ್ಪಡುತ್ತಿದ್ದ ಇವರಿಗೆ ಮೂರನೇ ಲಿಂಗದ ಸ್ಥಾನ ಎಂದರೆ, 'ತೃತೀಯಲಿಂಗಿ' ಎಂದು ಸುಪ್ರೀಂ ಕೋರ್ಟ್‌ ಗುರುತಿಸಿ ಮಹತ್ವದ ತೀರ್ಪು ನೀಡಿತ್ತು.

ಇದನ್ನೂ ಓದಿ:ಮಗು ದತ್ತು ಪಡೆಯಲು ಅನುಮತಿ ಕೋರಿ ಹೈಕೋರ್ಟ್ ಮೆಟ್ಟಿಲೇರಿದ ದೇಶದ ಮೊದಲ ತೃತೀಯಲಿಂಗಿ ಎಸ್​ಐ

ABOUT THE AUTHOR

...view details