ಕರ್ನಾಟಕ

karnataka

ETV Bharat / bharat

ರಾಯ್​ಬರೇಲಿ ಮತದಾರರಿಗೆ ಇಂದು ಧನ್ಯವಾದ ಅರ್ಪಿಸಲಿದ್ದಾರೆ ಸೋನಿಯಾ, ರಾಹುಲ್, ಪ್ರಿಯಾಂಕಾ - Sonia Rahul in Raebareli today - SONIA RAHUL IN RAEBARELI TODAY

ಉತ್ತರಪ್ರದೇಶದಲ್ಲಿ ಈ ಬಾರಿ ಇಂಡಿಯಾ ಮೈತ್ರಿಕೂಟ ಭರ್ಜರಿ ಕಮಾಲ್​ ಮಾಡಿದೆ. ಬಿಜೆಪಿ ನಾಗಾಲೋಟಕ್ಕೆ ತಡೆ ಒಡ್ಡಿದೆ. ಕಳೆದ ಬಾರಿ ಅಮೇಥಿ ಕಳೆದುಕೊಂಡಿದ್ದ ಕಾಂಗ್ರೆಸ್​ ಈ ಬಾರಿ ಅದನ್ನು ಮರಳಿ ಪಡೆಯುವಲ್ಲಿ ಯಶಸ್ವಿಯಾಗಿದೆ. ಈ ಹಿನ್ನೆಲೆಯಲ್ಲಿ ಇಂದು ರಾಹುಲ್​ ಗಾಂಧಿ ಆಭಾರ್​ ಸಭಾ ಆಯೋಜಿಸಿದ್ದಾರೆ.

Sonia, Rahul, Priyanka in Raebareli today to thank voters
ರಾಯ್​ಬರೇಲಿ ಮತದಾರರಿಗೆ ಇಂದು ಧನ್ಯವಾದ ಅರ್ಪಿಸಲಿದ್ದಾರೆ ಸೋನಿಯಾ, ರಾಹುಲ್, ಪ್ರಿಯಾಂಕಾ (IANS)

By ETV Bharat Karnataka Team

Published : Jun 11, 2024, 6:40 AM IST

ಲಖನೌ, ಉತ್ತರಪ್ರದೇಶ:ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಮಂಗಳವಾರ ರಾಯ್‌ಬರೇಲಿಯಲ್ಲಿ ಪಕ್ಷದ ಕಾರ್ಯಕರ್ತರಿಗೆ ಧನ್ಯವಾದ ಅರ್ಪಿಸಲಿದ್ದಾರೆ. 'ಆಭಾರ್ ಸಭಾ'ದಲ್ಲಿ ರಾಯ್​ಬರೇಲಿ ಮತ್ತು ಅಮೇಥಿ ಲೋಕಸಭಾ ಕ್ಷೇತ್ರಗಳ ಮತದಾರರನ್ನು ಉದ್ದೇಶಿಸಿ ಅವರು ಮಾತನಾಡಲಿದ್ದಾರೆ.

ಸೋನಿಯಾ ಗಾಂಧಿ, ಅಖಿಲ ಭಾರತ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಮತ್ತು ಅಮೇಥಿ ಸಂಸದ ಕೆ.ಎಲ್. ಶರ್ಮಾ ಅವರು ಸಭೆಯಲ್ಲಿ ಅಲ್ಲಿನ ಮತದಾರರಿಗೆ ಧನ್ಯವಾದ ಸಮರ್ಪಣೆ ಮಾಡಲಿದ್ದಾರೆ. ಮಂಗಳವಾರದ ಸಭೆಯು 2024 ರ ಲೋಕಸಭಾ ಚುನಾವಣೆಯ ಫಲಿತಾಂಶಗಳ ಘೋಷಣೆಯ ನಂತರ ರಾಜ್ಯದಲ್ಲಿ ಕಾಂಗ್ರೆಸ್‌ನ ನಡೆಸುತ್ತಿರುವ ಮೊದಲ ಸಭೆ ಇದಾಗಿದೆ. ಇತ್ತೀಚೆಗೆ ಮುಕ್ತಾಯಗೊಂಡ ಸಂಸತ್ ಚುನಾವಣೆಯಲ್ಲಿ ಕಾಂಗ್ರೆಸ್ - ಸಮಾಜವಾದಿ ಪಕ್ಷದ ಮೈತ್ರಿ ಅಭ್ಯರ್ಥಿಗಳನ್ನು ಬೆಂಬಲಿಸಿದ್ದಕ್ಕಾಗಿ ಮತದಾರರಿಗೆ ಧನ್ಯವಾದ ಅರ್ಪಿಸಲು ಜೂನ್ 11 ರಿಂದ 15 ರವರೆಗೆ ಎಲ್ಲ 80 ಲೋಕಸಭಾ ಕ್ಷೇತ್ರಗಳಲ್ಲಿ ಕೃತಜ್ಞತಾ ಸಾರ್ವಜನಿಕ ಸಭೆಗಳನ್ನು ನಡೆಸಲು ಮತ್ತು ಕೃತಜ್ಞತಾ ಯಾತ್ರೆಗಳನ್ನು ನಡೆಸಲು ಕಾಂಗ್ರೆಸ್​​ ಪಕ್ಷ ಈಗಾಗಲೇ ನಿರ್ಧರಿಸಿದೆ.

ಉತ್ತರ ಪ್ರದೇಶದ 80 ಲೋಕಸಭಾ ಸ್ಥಾನಗಳಲ್ಲಿ ಇಂಡಿಯಾ ಒಕ್ಕೂಟ 43 ಸ್ಥಾನಗಳನ್ನು ಗೆದ್ದುಕೊಂಡಿತು, ಕಾಂಗ್ರೆಸ್ 6 ಮತ್ತು ಸಮಾಜವಾದಿ ಪಕ್ಷವು 37 ಸ್ಥಾನಗಳಲ್ಲಿ ವಿಜಯ ಸಾಧಿಸಿ ಬಿಜೆಪಿ ಓಟಕ್ಕೆ ತಡೆಯೊಡ್ಡಿ ಲೋಕಸಭೆಯಲ್ಲಿ ಏಕಾಂಗಿಯಾಗಿ ಬಹುಮತ ಸಾಧಿಸುವ ಬಿಜೆಪಿ ಕನಸಿಗೆ ತಡೆಯೊಡ್ಡಿತ್ತು. ರಾಯ್​​ಬರೇಲಿ ಲೋಕಸಭಾ ಕ್ಷೇತ್ರದಲ್ಲಿ ರಾಹುಲ್ ಗಾಂಧಿ ಅವರು ಉತ್ತರ ಪ್ರದೇಶದ ಸಚಿವ ಮತ್ತು ಬಿಜೆಪಿ ಅಭ್ಯರ್ಥಿ ದಿನೇಶ್ ಪ್ರತಾಪ್ ಸಿಂಗ್ ಅವರನ್ನು 3,90,030 ಮತಗಳ ಅಂತರದಿಂದ ಸೋಲಿಸಿದ್ದರು.

ಕೆ.ಎಲ್. ಶರ್ಮಾ ಅವರು ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರನ್ನು 1,67,196 ಮತಗಳಿಂದ ಸೋಲಿಸಿ, ಕಳೆದ ಬಾರಿ ರಾಹುಲ್​ ಗಾಂಧಿ ಸೋಲಿನ ಸೇಡನ್ನು ತೀರಿಸಿಕೊಂಡಿದ್ದಾರೆ, ನೆಹರೂ-ಗಾಂಧಿ ಕುಟುಂಬದ ಭದ್ರಕೋಟೆ ಎಂದು ಪರಿಗಣಿಸಲಾದ ಅಮೇಥಿ, 2019 ರ ಲೋಕಸಭೆ ಚುನಾವಣೆಯಲ್ಲಿ ಸ್ಮೃತಿ ಇರಾನಿ ಸುಮಾರು 55,000 ಮತಗಳ ಅಂತರದಿಂದ ರಾಹುಲ್ ಗಾಂಧಿಯನ್ನು ಸೋಲಿಸಿದ್ದರು. ಆದ್ರೆ ಈ ಬಾರಿ ಸ್ಮೃತಿ ಇರಾನಿ ತಮ್ಮ ಸ್ಥಾನವನ್ನು ಉಳಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ.

ಇದನ್ನು ಓದಿ:ಮೋದಿ ಕ್ಯಾಬಿನೆಟ್​: ರಾಜ್ಯದ ಐವರಿಗೆ ಯಾವ ಖಾತೆ ಗೊತ್ತಾ? - Modi Cabinet

ಮೋದಿ 3.0 ಸರ್ಕಾರದ ಮೊದಲ ದೊಡ್ಡ ಘೋಷಣೆ: ಪಿಎಂಎವೈ ಯೋಜನೆಯಡಿ 3 ಕೋಟಿ ಹೆಚ್ಚುವರಿ ಮನೆ ನಿರ್ಮಾಣ - Pradhan Mantri Awas Yojana

ABOUT THE AUTHOR

...view details