ಕರ್ನಾಟಕ

karnataka

ETV Bharat / bharat

ಸೇತುವೆ ಮೇಲಿಂದ ಕಂದಕಕ್ಕೆ ಬಿದ್ದ ಖಾಸಗಿ ಬಸ್; ಆರು ಪ್ರಯಾಣಿಕರ ಸಾವು - Bus Fell In River - BUS FELL IN RIVER

ಮಹಾರಾಷ್ಟ್ರದ ಅಮರಾವತಿಯಲ್ಲಿ ಸೇತುವೆ ಮೇಲಿಂದ ಕಂದಕಕ್ಕೆ ಬಸ್ ಬಿದ್ದು ಆರು ಜನ ಮೃತಪಟ್ಟು, 30 ಜನ ಗಾಯಗೊಂಡಿದ್ದಾರೆ.

Six dead, 30 injured after private bus falls under bridge in Amravati, Maharashtra
ಸೇತುವೆ ಮೇಲಿಂದ ಕಂದಕಕ್ಕೆ ಬಿದ್ದ ಖಾಸಗಿ ಬಸ್ (ETV Bharat)

By ANI

Published : Sep 23, 2024, 3:52 PM IST

ಅಮರಾವತಿ (ಮಹಾರಾಷ್ಟ್ರ): ಚಾಲಕನ ನಿಯಂತ್ರಣ ತಪ್ಪಿದ ಖಾಸಗಿ ಬಸ್‌, ಸೇತುವೆ ಮೇಲಿಂದ ಕಂದಕಕ್ಕೆ ಬಿದ್ದ ಪರಿಣಾಮ 6 ಜನ ಮೃತಪಟ್ಟ ಘಟನೆ ಅಮರಾವತಿಯ ಮೆಲ್‌ಘಾಟ್‌ನಲ್ಲಿ ಸೋಮವಾರ ಬೆಳಗ್ಗೆ ಸಂಭವಿಸಿದೆ. ಸೆಮದೋಹ್ ಬಳಿಯ ಮೆಲ್‌ಘಾಟ್‌ ತಿರುವು ರಸ್ತೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಬಸ್​ ಸೇತುವೆಯ ಕೆಳಗೆ ಬಿದ್ದಿದೆ.

ಮೂವರು ಮಹಿಳೆಯರು, ಓರ್ವ ಸ್ಥಳದಲ್ಲೇ ಮೃತಪಟ್ಟರೆ, ತೀವ್ರ ಅಸ್ವಸ್ಥರಾಗಿದ್ದ ಇಬ್ಬರನ್ನು ಚಿಕಿತ್ಸೆಗಾಗಿ ಪವಾರವಾಡಕ್ಕೆ ಕರೆದೊಯ್ಯುತ್ತಿದ್ದಾಗ ಮಾರ್ಗಮಧ್ಯೆ ಸಾವನ್ನಪ್ಪಿದ್ದಾರೆ.

ಸುದ್ದಿ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ಸೌರಭ್ ಕಟಿಯಾರ್, ಬಸ್‌ನಲ್ಲಿದ್ದ ಸುಮಾರು 30 ಮಂದಿ ಪ್ರಯಾಣಿಕರು ಗಾಯಗೊಂಡಿದ್ದು, ಅವರನ್ನು ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದೆ. ತೀವ್ರವಾಗಿ ಗಾಯಗೊಂಡ ಮೂವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಎಂದಿದ್ದಾರೆ.

ಚಾವ್ಲಾ ಟ್ರಾವೆಲ್ಸ್ ಕಂಪನಿಯ ಬಸ್ ಇದಾಗಿದ್ದು, ಎಂದಿನಂತೆ ಬೆಳಗ್ಗೆ ಆರು ಗಂಟೆಗೆ ಅಮರಾವತಿಯಿಂದ ಧರಣಿಗೆ ಹೊರಟಿತ್ತು. ಬೆಳಗ್ಗೆ 8:30 ರ ಸುಮಾರಿಗೆ, ಸೆಮಡೋಹ್‌ನ ಭೂತ್ಖೋರಾ ಪ್ರದೇಶದಲ್ಲಿನ ಅಪಾಯಕಾರಿ ನದಿ ಸೇತುವೆಯ ಮೇಲೆ ಚಾಲಕನ ನಿಯಂತ್ರಣ ತಪ್ಪಿ ಬಸ್ ನದಿಗೆ ಬಿದ್ದಿದೆ.

ಇದನ್ನೂ ಓದಿ:ಮಹಾರಾಷ್ಟ್ರದ ಜಾಲ್ನಾದಲ್ಲಿ ಬಸ್​-ಟ್ರಕ್ ಅಪಘಾತ: 8 ಸಾವು, 16 ಮಂದಿಗೆ ಗಾಯ - Maharashtra Bus Accident

ABOUT THE AUTHOR

...view details