ಹೈದರಾಬಾದ್, ತೆಲಂಗಾಣ: Silver Coins Distribution in Bhagyalakshmi Templeರಾಜ್ಯಾದ್ಯಂತ ದೀಪಾವಳಿ ಆಚರಣೆ ಅದ್ದೂರಿಯಾಗಿ ನಡೆಯುತ್ತಿದೆ. ನಿನ್ನೆಯಿಂದ ಆರಂಭವಾಗಿರುವ ಹಬ್ಬ ಇನ್ನೂ ಎರಡ್ಮೂರು ದಿನಗಳವರೆಗೆ ಆಚರಣೆ ಮಾಡಲಾಗುತ್ತದೆ. ಹಬ್ಬದ ನಿಮಿತ್ತ ಎಲ್ಲರ ಮನೆಗಳನ್ನು ಹೂವಿನ ಮಾಲೆಗಳು ಮತ್ತು ಮಾವಿನ ಕೊಂಬೆಗಳಿಂದ ಸುಂದರವಾಗಿ ಅಲಂಕರಿಸಲಾಗಿದೆ. ರಾತ್ರಿ ದೀಪಾಲಂಕಾರ, ಮಕ್ಕಳ ಕುಣಿತ, ಹೀಗೆ ಇಡೀ ಊರಿಗೆ ಊರೇ ಸಡಗರದಿಂದ ಹಬ್ಬ ಆಚರಿಸಿ ಸಂಭ್ರಮ ಪಡುತ್ತಿದೆ. ಅಂಗಡಿಗಳು ದೀಪಗಳ ಬೆಳಕಿನಲ್ಲಿ ಮಿನುಗುತ್ತಿವೆ. ಜನರು ಲಕ್ಷ್ಮಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಭಕ್ತಿ ಸಮರ್ಪಿಸಲಾಗುತ್ತಿದೆ.
ದೊಡ್ಡಪೇಟೆಯಲ್ಲಿ ಅದ್ಧೂರಿ ದೀಪಾವಳಿ ಆಚರಣೆ: ಹೈದರಾಬಾದ್ ಸೇರಿದಂತೆ ರಾಜ್ಯದ ಹಲವೆಡೆ ಯುವಕರು, ಹಿರಿಯರು ಎನ್ನದೇ ಎಲ್ಲರೂ ಪಟಾಕಿ ಸಿಡಿಸಿ ಸಂಭ್ರಮಿಸಿದರು. ಯುವಕರು ರಸ್ತೆಗಿಳಿದು ಪಟಾಕಿಗಳನ್ನು ಹೊಡೆದು ಸಂಭ್ರಮದಿಂದ ಹಬ್ಬವನ್ನು ಸವಿದರು. ದೀಪಾವಳಿ ಹಿನ್ನೆಲೆ ನಗರವು ಪಟಾಕಿಗಳ ಸದ್ದಿನೊಂದಿಗೆ ಪುಳಕಿತಗೊಂಡಿತ್ತು, ನಾನಾ ಸೆಲೆಬ್ರಿಟಿಗಳೂ ದೀಪಾವಳಿ ಹಬ್ಬವನ್ನು ಆಚರಿಸಿ ಖುಷಿ ಪಟ್ಟರು.
ಭಕ್ತರಿಂದ ಕಿಕ್ಕಿರಿದು ತುಂಬಿದ ದೇವಾಲಯಗಳು: ದೀಪಾವಳಿ ಸಂದರ್ಭದಲ್ಲಿ ಎಲ್ಲ ದೇವಾಲಯಗಳು ಆಧ್ಯಾತ್ಮಿಕ ವೈಭವ ಪಡೆದುಕೊಳ್ಳುತ್ತವೆ. ಪ್ರಸಿದ್ಧ ದೇವಾಲಯಗಳು ಭಕ್ತರಿಂದ ತುಂಬಿ ತುಳುಕುತ್ತಿವೆ. ಸಿದ್ದಿಪೇಟೆ ಜಿಲ್ಲೆಯ ದುಬ್ಬಾಕದಲ್ಲಿ ವ್ಯಾಪಾರಿಗಳು ವೇದ ಮಂತ್ರ ಪಠಣದ ನಡುವೆ ಲಕ್ಷ್ಮಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ದೀಪಾವಳಿ ನಿಮಿತ್ತ ಯಾದಾದ್ರಿ ಲಕ್ಷ್ಮೀ ನರಸಿಂಹ ಸ್ವಾಮಿ ದೇವಸ್ಥಾನದ ಅರ್ಚಕರು ಧನಲಕ್ಷ್ಮಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ಕರೀಂನಗರದ ಎಲ್ಲ ಪ್ರಸಿದ್ಧ ದೇವಾಲಯಗಳು ಭಕ್ತರಿಂದ ತುಂಬಿ ತುಳುಕುತ್ತಿವೆ. ಮಹಾಶಕ್ತಿ ದೇವಸ್ಥಾನದ ಮೂರು ಅಮ್ಮನವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.