ಹರಿದ್ವಾರ (ಉತ್ತರಾಖಂಡ):ವ್ಯಕ್ತಿಯ ಮರಣಾನಂತರ ಆತನ ಚಿತಾಭಸ್ಮವನ್ನು ಗಂಗೆಯಲ್ಲಿ ಲೀನಗೊಳಿಸದ ಹೊರತು ಆತನಿಗೆ ಮುಕ್ತಿ ಇಲ್ಲ ಎಂಬುದು ಸನಾತನ ಧರ್ಮದ ನಂಬಿಕೆ. ಅನಾಥ ಶವಗಳಿಗೂ ಇದು ಅನ್ವಯಿಸುತ್ತದೆ. ಹೀಗಾಗಿ, ದೆಹಲಿಯ ದೇವೋತ್ಥಾನ ಸೇವಾ ಸಮಿತಿಯು ಅನಾಥ ಶವಗಳ ಚಿತಾಭಸ್ಮಾವನ್ನು ಗಂಗಾ ನದಿಯಲ್ಲಿ ತರ್ಪಣ ಬಿಡುವ ಕೆಲಸವನ್ನು ಮಾಡುತ್ತಿದೆ. ಸಂಘಟನೆಯು ಸೆಪ್ಟೆಂಬರ್ 28 ರಂದು 4,128 ಅನಾಥ ಶವಗಳ ಚಿತಾಭಸ್ಮವನ್ನು ಹರಿದ್ವಾರದಲ್ಲಿ ಗಂಗಾ ನದಿಯಲ್ಲಿ ತರ್ಪಣ ನೀಡಿದೆ.
ದೇವೋತ್ಥಾನ ಸೇವಾ ಸಮಿತಿಯ ಪ್ರಧಾನ ಕಾರ್ಯದರ್ಶಿ ವಿಜಯ್ ಶರ್ಮಾ ಮಾತನಾಡಿ, ತಮ್ಮ ಸಂಸ್ಥೆಯು ಕಳೆದ 23 ವರ್ಷಗಳಿಂದ ಈ ಕೆಲಸವನ್ನು ಮಾಡುತ್ತಿದೆ. ಈವರೆಗೂ 1 ಲಕ್ಷದ 65 ಸಾವಿರದ 289 ಅನಾಥ ಶವಗಳ ಚಿತಾಭಸ್ಮವನ್ನು ಗಂಗಾ ನದಿಯಲ್ಲಿ ಲೀನ ಮಾಡಿದೆ. ಸಮಿತಿಯು ದೇಶದಾದ್ಯಂತ ಈ ಕೆಲಸವನ್ನು ಮಾಡುತ್ತದೆ ಎಂದು ತಿಳಿಸಿದರು.
ವಾರಸುದಾರರು ಇಲ್ಲದ ಅದೆಷ್ಟೋ ಶವಗಳ ಚಿತಾಭಸ್ಮವನ್ನು ಸಂಗ್ರಹಿಸಿ, ತರ್ಪಣ ನೀಡಲಾಗುತ್ತದೆ. ಸೆಪ್ಟೆಂಬರ್ 28ರಂದು ಸಮಿತಿಯಿಂದ ದೇಶಾದ್ಯಂತ ಸಂಗ್ರಹಿಸಿದ ಸುಮಾರು 4,128 ಜನರ ಚಿತಾಭಸ್ಮವನ್ನು ಸಂಪೂರ್ಣ ವಿಧಿ ವಿಧಾನಗಳೊಂದಿಗೆ ಹರಿದ್ವಾರದ ಕಂಖಾಲ್‌ನ ಸತಿ ಘಾಟ್‌ನಲ್ಲಿ ಗಂಗಾನದಿಯಲ್ಲಿ ವಿಸರ್ಜನೆ ಮಾಡಲಾಯಿತು ಎಂದು ಮಾಹಿತಿ ನೀಡಿದರು.