ನವದೆಹಲಿ:ಸದ್ಯ ದೇಶದಲ್ಲಿ ಕ್ರಿಕೆಟ್ ಜ್ವರವಿದೆ. ಇದನ್ನೇ ಬಂಡವಾಳವಾಗಿಸಿಕೊಂಡ ವಂಚಕರು ಇದೀಗ ಧೋನಿ ಹೆಸರಲ್ಲಿ ವಂಚನೆಗಿಳಿದಿದ್ದಾರೆ. ಈ ಹಿನ್ನೆಲೆಯಲ್ಲಿ ಕೇಂದ್ರ ಟೆಲಿಕಾಂ ಇಲಾಖೆ ಅಭಿಮಾನಿಗಳಿಗೆ ಎಚ್ಚರಿಕೆ ನೀಡಿದ್ದು, ಮೋಸದ ಜಾಲಕ್ಕೆ ಬೀಳದಂತೆ ಸೂಚಿಸಿದೆ.
ಈ ಸಂಬಂಧ ಮೈಕ್ರೋಬ್ಲಾಗಿಂಗ್ ತಾಣ ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಟೆಲಿಕಾಂ ಇಲಾಖೆ, ವಂಚಕರು ಪ್ರಖ್ಯಾತ ಕ್ರಿಕೆಟಿಗ ಹಾಗೂ ಮಾಜಿ ಟೀ ಇಂಡಿಯಾ ನಾಯಕ ಧೋನಿ ಹೆಸರಲ್ಲಿ ವಂಚಿಸುತ್ತಿದ್ದಾರೆ. ಹಣಕ್ಕಾಗಿ ಇನ್ಸ್ಟಾಗ್ರಾಂನಲ್ಲಿ ಬೇಡಿಕೆ ಇಡುತ್ತಿದ್ದಾರೆ. ಈ ಸಂದೇಶ ಬಂದಲ್ಲಿ ಎಚ್ಚರಿಕೆ ವಹಿಸಿ. ಇದು ವಂಚಕರ ಜಾಲ ಎಂದು ತಿಳಿಸಿದ್ದಾರೆ.