ಕರ್ನಾಟಕ

karnataka

ETV Bharat / bharat

ರಾಜ್ಯಸಭೆಯಲ್ಲಿ ಅದಾನಿ ಲಂಚ ಆರೋಪದ ಸದ್ದು: ಬುಧವಾರಕ್ಕೆ ಸದನ ಮುಂದೂಡಿಕೆ - RS PROCEEDINGS ADJOURNED

ರಾಜ್ಯಸಭೆ ಕಲಾಪ ಆರಂಭವಾಗುತ್ತಿದ್ದಂತೆ ಇತ್ತೀಚಿಗೆ ಅಗಲಿದ ನಾಯಕರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

rs-proceedings-adjourned-till-wednesday-amid-oppn-bid-to-raise-adani-bribery-issue
ರಾಜ್ಯಸಭೆ ಕಲಾಪ (ANI)

By PTI

Published : Nov 25, 2024, 1:20 PM IST

ನವದೆಹಲಿ: ಇಂದಿನಿಂದ ಸಂಸತ್ ಚಳಿಗಾಲದ ಅಧಿವೇಶನ ಆರಂಭವಾಗಿದೆ. ರಾಜ್ಯಸಭೆಯಲ್ಲಿ ಮೊದಲ ದಿನವೇ ಗದ್ದಲದ ವಾತಾವರಣ ನಿರ್ಮಾಣವಾಗಿದ್ದು, ಸದನವನ್ನು ಬುಧವಾರಕ್ಕೆ ಮುಂದೂಡಲಾಯಿತು.

ಕಲಾಪ ಆರಂಭವಾಗುತ್ತಿದ್ದಂತೆ ಇತ್ತೀಚಿಗೆ ಅಗಲಿದ ನಾಯಕರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಇದಾದ ಬಳಿಕ ಸದನವನ್ನು ಉದ್ದೇಶಿಸಿ ಮಾತನಾಡಿದ ಸಭಾಧ್ಯಕ್ಷ ಜಗದೀಪ್​ ಧನ್‌ಕರ್​, ನಿಯಮ 267ರ ಅಡಿ 13 ನೀಡಲಾದ ನೋಟಿಸ್​ ಮನವರಿಕೆ ಆಗಿಲ್ಲ ಎಂದು ಚರ್ಚೆಗೆ ಅವಕಾಶ ನಿರಾಕರಿಸಿದರು.

ಸೋಲಾರ್​ ಶಕ್ತಿ ಯೋಜನೆಗೆ ಗುತ್ತಿಗೆ ಪಡೆಯಲು ಲಂಚ ನೀಡಿದ ಆರೋಪದ ಹಿನ್ನೆಲೆಯಲ್ಲಿ ಉದ್ಯಮಿ ಗೌತಮ್​ ಅದಾನಿ ವಿರುದ್ಧ ಅಮೆರಿಕದ ಕೋರ್ಟ್​ನಲ್ಲಿ ದೋಷಾರೋಪ ಪಟ್ಟಿ ಸಲ್ಲಿಕೆ ಕುರಿತ ವಿಚಾರವನ್ನು ಕಾಂಗ್ರೆಸ್​ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ್​ ಖರ್ಗೆ ಪ್ರಸ್ತಾಪಿಸಿದರು. ಈ ವೇಳೆ ಉಂಟಾದ ಗದ್ದಲದಿಂದಾಗಿ ಕಲಾಪವನ್ನು 15 ನಿಮಿಷ ಮುಂದೂಡಲಾಯಿತು. ಬಳಿಕವೂ ಪರಿಸ್ಥಿತಿ ಹಾಗೇ ಮುಂದುವರೆದ ಹಿನ್ನೆಲೆಯಲ್ಲಿ ನವೆಂಬರ್​ 27ಕ್ಕೆ ಕಲಾಪವನ್ನು ಮುಂದೂಡಲಾಯಿತು. ಮಂಗಳವಾರ ಸಂವಿಧಾನ ಅಳವಡಿಕೆಯ 75ನೇ ವರ್ಷಾಚರಣೆಯ ಹಿನ್ನೆಲೆಯಲ್ಲಿ ಕಲಾಪಗಳು ನಡೆಯದೇ ಇರುವ ಕಾರಣ ಮುಂದಿನ ಕಲಾಪವನ್ನು ಬುಧವಾರಕ್ಕೆ ಮುಂದೂಡಲಾಯಿತು.

ಅದಾನಿ ಗ್ರೂಪ್‌ ವಿರುದ್ಧದ ಪ್ರಕರಣ ಪ್ರಸ್ತಾಪಿಸಿ ಮಾತನಾಡಿದ ಖರ್ಗೆ, ಇವು ಇಡೀ ದೇಶದ ಮೇಲೆ ಪರಿಣಾಮ ಬೀರುವ ವಿಷಯವಾಗಿದ್ದು, ಇದರ ಚರ್ಚೆ ಏಕೆ ಮುಖ್ಯ ಎಂಬುದನ್ನು ಸದನದಲ್ಲಿ ತಿಳಿಸುವ ಪ್ರಯತ್ನ ನಡೆಸಿದರು.

ಇದನ್ನೂ ಓದಿ: ಜನರಿಂದ ತಿರಸ್ಕೃತರಾದವರಿಂದ ಸಂಸತ್ ನಿಯಂತ್ರಣಕ್ಕೆ ಯತ್ನ: ಪ್ರಧಾನಿ ಮೋದಿ ವಾಗ್ದಾಳಿ

ABOUT THE AUTHOR

...view details