ಹುಜೂರಾಬಾದ್ (ತೆಲಂಗಾಣ):ಅಮೆರಿಕದಲ್ಲಿ ಶನಿವಾರ ರಾತ್ರಿ (ಭಾರತೀಯ ಕಾಲಮಾನದ ಪ್ರಕಾರ ಭಾನುವಾರ ಬೆಳಗ್ಗೆ) ಸಂಭವಿಸಿದ ರಸ್ತೆ ಅಪಘಾತದಲ್ಲಿ ಇಬ್ಬರು ತೆಲಂಗಾಣ ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ. ಮೃತರ ಕುಟುಂಬ ಸದಸ್ಯರ ಪ್ರಕಾರ, ಕರೀಂನಗರ ಜಿಲ್ಲೆಯ ಹುಜೂರಾಬಾದ್‌ನ ಡಾ. ಸ್ವಾತಿ ಮತ್ತು ಡಾ.ನವೀನ್ ದಂಪತಿಯ ಪುತ್ರ ನಿವೇಶ್ (20), ಜನಗಾಮ ಜಿಲ್ಲೆಯ ಸ್ಟೇಶನ್‌ಪುರ ಮಂಡಲದ ಶಿವುನಿಪಲ್ಲಿಯ ಅಕ್ಕಸಾಲಿಗ ಪಾರ್ಶಿ ಕಮಲಕುಮಾರ್ ಮತ್ತು ಪದ್ಮಾ ದಂಪತಿಯ ಹಿರಿಯ ಪುತ್ರ ಗೌತಮ್‌ಕುಮಾರ್ (19) ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಇಬ್ಬರೂ ಅಮೆರಿಕದ ಅರಿಜೋನಾ ಸ್ಟೇಟ್ ಯೂನಿವರ್ಸಿಟಿಯಲ್ಲಿ ಬಿ.ಟೆಕ್ ಎರಡನೇ ವರ್ಷದಲ್ಲಿ ಓದುತ್ತಿದ್ದರು.
ಶನಿವಾರ ರಾತ್ರಿ ಇವರಿಬ್ಬರು ತಮ್ಮ ಸ್ನೇಹಿತರೊಂದಿಗೆ ಕಾರಿನಲ್ಲಿ ವಿಶ್ವವಿದ್ಯಾನಿಲಯದಿಂದ ಮನೆಗೆ ಬರುತ್ತಿದ್ದಾಗ ಹಿಂಬದಿಯಿಂದ ಬಂದ ಅಪರಿಚಿತ ವಾಹನ ಡಿಕ್ಕಿ ಹೊಡೆದಿದೆ. ಈ ಅಪಘಾತದಲ್ಲಿ ಹಿಂಬದಿಯಲ್ಲಿ ಕುಳಿತಿದ್ದ ನಿವೇಶ್ ಮತ್ತು ಗೌತಮ್ ಕುಮಾರ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನಿಬ್ಬರು ಯುವಕರು ಗಂಭೀರವಾಗಿ ಗಾಯಗೊಂಡಿದ್ದಾರೆ.